ರಾಜ್ಯದಲ್ಲಿ ಆನಂದಯ್ಯ ಔಷಧಿ ವಿತರಣೆಗೆ ಸಿಎಂಗೆ ಮನವಿ
ಹೊಸಪೇಟೆ : ರಾಜ್ಯದಲ್ಲಿ ನೆರೆಯ ಆಂಧ್ರದ ಆನಂದಯ್ಯ ಅವರ ಆಯುರ್ವೇದ ಔಷಧಿಯನ್ನು ವಿತರಿಸಲು ಅನುಮತಿ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಗೆ ಪತ್ರ ಬರೆಯಲಾಗಿದೆ.
ಕೊರೊನಾ ಗುಣಪಡಿಸಲು ಆಂಧ್ರದ ಆನಂದಯ್ಯ ಕಂಡುಹಿಡಿದಿರುವ ಆಯುರ್ವೇದ ಔಷಧಿಯನ್ನು ಕರ್ನಾಟಕದಲ್ಲಿ ವಿತರಿಸಲು ನಿಬರ್ಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಔಷಧಿ ವಿತರಣೆಗೆ ಅವಕಾಶ ಕೋರಿ ಸಿಎಂಗೆ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಆಂಧ್ರದಲ್ಲಿ ಆನಂದಯ್ಯ ಅವರ ಔಷಧಿ ವಿತರಣೆಗೆ ಅಲ್ಲಿನ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ರಾಜ್ಯದ ವಿಜಯನಗರದ ಪಂಪಾಕ್ಷೇತ್ರದ ಕಮಲಾಪುರ, ಹಂಪಿ, ಕೊಪ್ಪಳದ ಆನೆಗುಂದಿ, ಗಂಗಾವತಿ, ಬಳ್ಳಾರಿ ಭಾಗದಲ್ಲಿ ಔಷಧಿಯನ್ನು ಹಂಚಿಕೆ ಮಾಡಲಾಗಿದೆ.
ಆದ್ರೆ ಜಿಲ್ಲಾಡಳಿತ ಸರ್ಕಾರ ಪರವಾನಗಿ ನೀಡುವವರೆಗೂ ಯಾವುದೇ ಕಾರಣಕ್ಕೂ ಔಷಧಿ ವಿತರಣೆ ಮಾಡಬಾರದೆಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂಗೆ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪತ್ರ ಬರೆದಿದ್ದಾರೆ.








