ಬೆಂಗಳೂರಲ್ಲಿ ಕೊರೊನಾ ಲಸಿಕೆಗೆ ಹಾಹಾಕಾರ covid-19
ಬೆಂಗಳೂರು : ನಿನ್ನೆ ಬೆಳಿಗ್ಗೆ ಕೊರೊನಾ ಲಸಿಕೆ ಕೊರತೆ ಬಗ್ಗೆ ಒಪ್ಪಿಕೊಂಡಿದ್ದ ಆರೋಗ್ಯ ಸಚಿವರು, ಮಧ್ಯಾಹ್ನ ಉಲ್ಟಾ ಹೊಡೆದು ಲಸಿಕೆ ಇದೆ ಎಂದಿದ್ದರು.
ಆದ್ರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಲಸಿಕೆಗಾಗಿ ಹಾಹಾಕಾರ ಶುರುವಾಗಿದ್ದು, ರಾಜ್ಯದಲ್ಲಿ ಲಸಿಕಾ ಕೊರತೆ ಇರೋದು ಎದ್ದು ಕಾಣುತ್ತಿದೆ.
ನಗರದ ವಿವಿಧ ವ್ಯಾಕ್ಸಿನ್ ಸೆಂಟರ್ ಮುಂದೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿದ್ದು, ಲಸಿಕೆಗಾಗಿ ಮತ್ತೆ ಹಾಹಾಕಾರ ಶುರುವಾಗಿದೆ.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಇಲ್ಲಿದೆ ಮಂಗಳವಾರ ಅಂದ್ರೆ ನಿನ್ನೆ ಕೇವಲ 200 ಜನರಿಗೆ ಡೋಸ್ ನೀಡಿದೆ.
ಇಂದು ಸ್ಟಾಕ್ ಬಂದಿಲ್ಲ ಎಂದು ಗೇಟ್ ಮುಂಭಾಗದಲ್ಲಿ ನೋ ಸ್ಟಾಕ್ ಅನ್ನೋ ಬೋರ್ಡ್ ಹಾಕಿದ್ದಾರೆ.
ಇನ್ನು ಲಸಿಕೆಗಾಗಿ ಜನರು ಇಂದು ಮುಂಜಾನೆಯಿಂದಲೇ ವ್ಯಾಕ್ಸಿನ್ ಸೆಂಟರ್ ಮುಂದೆ ಕಾದು ಕುಳಿತ್ತಿದ್ದರು.
ಆದ್ರೆ ಆಸ್ಪತ್ರೆ ಸಿಬ್ಬಂದಿ 9 ಗಂಟೆಗೆ ನೋ ಸ್ಟಾಕ್ ಬೋರ್ಡ್ ಹಾಕಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.









