“ಸ್ತ್ರೀಯರು ಸಹ ಎಷ್ಟು ಜನರನ್ನ ಬೇಕಾದ್ರೂ ಮದುವೆಯಾಗಬಹುದು “ – ಬಹುಪತಿತ್ವ ಕಾನೂನು ತರಲು ಚಿಂತನೆ
ದಕ್ಷಿಣ ಆಫ್ರಿಕಾ : ದಕ್ಷಿಣ ಆಫ್ರಿಕಾದಲ್ಲಿ ಇಲ್ಲಿಯವರೆಗೆ ಒಬ್ಬ ವ್ಯಕ್ತಿ ಬಹುಪತ್ನಿಯರನ್ನು ಹೊಂದಲು ಅನುಮತಿ ಇದೆ. ಬಹುಪತ್ನಿತ್ವ ಕಾನೂನುಬದ್ಧವಾಗಿದೆ. ಆದ್ರೆ ಇಲ್ಲಿಯವರೆಗೆ ಪುರುಷರಿಗೆ ಮಾತ್ರವೇ ಈ ಅವಕಾಶವಿತ್ತು. ಆದ್ರೆ ಈಗ ಅಲ್ಲಿನ ಸರ್ಕಾರ ಸ್ರ್ಈಯಯರಿಗೂ ಎಷ್ಟು ಬೇಕಾದರೂ ಮದುವೆಯಾಗಬಹುದು ಎಂಬ ಕಾನೂನು ತರಲು ಚಿಂತನೆ ನಡೆಸಿದ್ದು, ಈ ಕುರಿತು ಸಕಲ ಸಿದ್ಧತೆ ನಡೆಸಿದೆ.
ಹೌದು ಎಷ್ಟು ಹೆಣ್ಣನ್ನಾದರೂ ಮದುವೆಯಾಗಬಹುದು ಎಂಬ ಕಾನೂನು ಜಾರಿಗೆ ಬಂದಾಗ ಅದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು.. ಆದ್ರೆ ಬಹುತೇಕ ಪುರುಷರು ಖುಷಿಯಾಗಿದ್ರು.. ಇದೀಗ ಮಹಿಳೆಯರು ಸಹ ಬಹುಪತಿತ್ವ ಹೊಂದುವ ಅವಕಾಶ ನೀಡುವ ಚಿಂತನೆ ನಡೆಸಲಾಗ್ತಿದ್ದು, ಮೂಲಕ ಅಲ್ಲಿನ ಪುರುಷರ ಖುಷಿ ಕಿತ್ತುಕೊಂಡಿದೆ ಸರ್ಕಾರ..
ಇದರ ನಡುವೆಯೇ ವಿವಾಹಕ್ಕೆ ಸಂಬಂಧಪಟ್ಟಂತೆ ಹೊಸ ಕಾಯ್ದೆಯನ್ನು ರಚಿಸಲು ಮುಂದಾಗಿರುವ ದಕ್ಷಿಣ ಆಫ್ರಿಕಾ ಗೃಹ ವ್ಯವಹಾರಗಳ ಸಚಿವಾಲಯ ಈ ಬಹುಪತಿತ್ವದ ಪ್ರಸ್ತಾಪವನ್ನು ಇಟ್ಟಿದೆ. ಆದ್ರೆ ಇದು ಅಂಗೀಕಾರಗೊಳ್ಳುತ್ತದೆಯೋ ಇಲ್ವೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ..








