50 ಸಾವಿರ ಪಡೆದು ಆರೋಪಿಗೆ ಹೊಡೆಯಿರಿ, ಪ್ರಕರಣ ಮುಕ್ತಾಯಗೊಳಿಸಿ ಅತ್ಯಾಚಾರ ಸಂತ್ರಸ್ತೆಗೆ ಪಂಚಾಯಿತಿ ಸಲಹೆ
ಉತ್ತರಪ್ರದೇಶ : ಈಗಿನ ದಿನಗಳಲ್ಲೂ ಹಲವೆಡೆ ಪಂಚಾಯ್ತಿಗಳೇ ಸುಪ್ರೀಂ ಆಗಿವೆ.. ಪಂಚಾಯ್ತಿಗಳ ನಿರ್ಣಯವೇ ಅಂತಿಮವೆಂಬಂತಹ ಪರಿಸ್ಥಿತಿ ಿದೆ.. ಅದು ತಪ್ಪಾಗಿರಲಿ ಸರಿಯಾಗಿರಲಿ.. ಕಾನೂನಿನ ಚೌಕಟ್ಟಿಗೆ ಬರದೇ ಅನೇಕ ಪ್ರಕರಣಗಳು ಪಂಚಾಯ್ತಿಯಲ್ಲೇ ಇತ್ಯರ್ಥಗೊಂಡಿದ್ದು, ಸರಿಯಾಗಿ ನೋಡಿದ್ರೆ ಸಂತ್ರಸ್ತರಿಗೆ ಸೂಕ್ತ ಪರಿಹಾರವೂ ಸಿಕ್ಕಿಲ್ಲ..
ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.. ಅತ್ಯಾಚಾರ ಆರೋಪಿಯೊಬ್ಬನಿಗೆ 50 ಸಾವಿರ ದಂಡ ವಿಧಿಸಿ , ಆತನನ್ನ 5 ಬಾರಿ ಚಪ್ಪಲಿಯಿಂದ ಹೊಡೆದು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದೇಶ ನೀಡಲಾಗಿದೆ..
ಅತ್ಯಾಚಾರ ಸಂತ್ರಸ್ತೆಗೆ ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಈ ರೀತಿಯಾದ ಸಲಹೆ ನೀಡಿದ್ದು, ಈ ವಿಚಾರ ಸೋಷಿಯಲ್ ಮೀಡಿಯಾದಲ್ಲೂ ಬಾರೀ ವೈರಲ್ ಆಗಿದೆ.. ಪಂಚಾಯ್ತಿ ನೀತಿಯನ್ನ ಧಿಕ್ಕರಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತೆಯು ಮಹಾರಾಜ್‌ಗಂಜ್ ಜಿಲ್ಲೆಯ ಕೋತಿಭರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಅತ್ಯಾಚಾರ ನಡೆದ ಬಗ್ಗೆ ಅವರ ತಾಯಿಯು ಗ್ರಾಮ ಪಂಚಾಯಿತಿಗೆ ಜೂನ್ 23ರಂದು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಂಚಾಯಿತಿಯು ಆರೋಪಿಯಿಂದ ಹಣ ಪಡೆದು ಅಧಿಕಾರಿಗಳ ಎದುರಿನಲ್ಲೇ ಬೂಟಿನಿಂದ ಹೊಡೆದು ಪ್ರಕರಣ ಮುಕ್ತಾಯಗೊಳಿಸುವಂತೆ ಹೇಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಳಿಕ ಜೂನ್ 25ರಂದು ಸಂತ್ರಸ್ತೆಯ ಕುಟುಂಬದವರು ಕೋತಿಭರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಮಹಾರಾಜ್‌ಗಂಜ್ ಎಸ್‌ಪಿ ಪ್ರದೀಪ್ ಗುಪ್ತಾ ಸೂಚಿಸಿದ್ದಾರೆ. ಅಲ್ಲದೇ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ಸಾಬೀತಾದರೆ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.