ಕ್ಲಾಸ್ ಕೇಳದೆ ವಾಟ್ಸಾಪ್ ನೋಡಿದ್ದಕ್ಕೆ ತಂಗಿಯನ್ನ ಕೊಂದ ಅಣ್ಣ
ಚೆನ್ನೈ : ಆನ್ ಲೈನ್ ಕ್ಲಾಸ್ ಕೇಳದ ವಾಟ್ಸಾಪ್ ಸ್ಟೇಟಸ್ ವಿಡಿಯೋಗಳನ್ನು ನೋಡುತ್ತಿದ್ದ ತಂಗಿಯನ್ನ ಸ್ವಂತ ಅಣ್ಣನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ವಾಸವಪುರಂನಲ್ಲಿ ನಡೆದಿದೆ. ಕವಿತ ಮೃತ ಯುವತಿಯಾಗಿದ್ದು, ಮಲೈರಾಜ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕೊರೊನಾ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಆನ್ ಲೈನ್ ತರಗತಿಗಳಿಗೆ ಒತ್ತು ನೀಡಿಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕವಿತ, ತನ್ನ ಅಣ್ಣನಾದ ಮಲೈರಾಜ ಬಳಿ ಮೊಬೈಲ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾಳೆ. ಅದರಂತೆ ಆನ್ ಲೈನ್ ತರಗತಿಗಳು ಕೇಳಲು ಕವಿತಾಗೆ ಅಣ್ಣ ಮಲೈರಾಜ ಸೆಲ್ ಫೋನ್ ತಂದುಕೊಟ್ಟಿದ್ದಾನೆ. ಆದ್ರೆ ಕವಿತ ಫೋನ್ ನಲ್ಲಿ ತರಗತಿಗಳನ್ನು ಕೇಳದೇ ವಾಟ್ಸಾಪ್ ಸ್ಟೇಟಸ್ ಗಳನ್ನು ನೋಡುತ್ತಾ ಟೈಂ ಪಾಸ್ ಮಾಡುತ್ತಿದ್ದಳಂತೆ. ಈ ಬಗ್ಗೆ ಮಲೈರಾಜ್ ಕವಿತಾಳನ್ನು ಅನೇಕ ಬಾರಿ ಎಚ್ಚರಿಸಿದ್ದಾನೆ.
ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳಗಳು ಕೂಡ ನಡೆದಿವೆ. ಆದರೂ ಕವಿತಾ ವಾಟ್ಸಾಪ್ ನಲ್ಲಿ ತಲ್ಲೀನಳಾಗುತ್ತಿರುವುದನ್ನ ಗಮಿಸಿದ ಮಲೈರಾಜ ಕೋಪಗೊಂಡು ಚಾಕುವಿನಿಂದ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಕವಿತ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.