ಆಕ್ಲಾಂಡ್ ನ ಮೃಗಾಲಯದಲ್ಲಿ ಪ್ರಾಣಿಗಳಿಗೆ ಕೋವಿಡ್ ಲಸಿಕೆ
ಅಮೆರಿಕಾ : ಆಕ್ಲೆಂಡ್ ನಲ್ಲಿನ ಮೃಗಾಲಯದಲ್ಲಿ ಪ್ರಾಣಿಗಳ ರಕ್ಷಣೆಗಾಗಿ , ಪ್ರಾಣಿಗಳಿಗೆ ಕೋವಿಡ್ ಲಸಿಕೆ ನೀಡಲಾಗ್ತಿದೆ. ಹೌದು ಕೊರೊನಾ ಸೋಂಕಿನಿಂದ ರಕ್ಷಿಸಲು ಸ್ಯಾನ್ ಫ್ರಾನ್ಸಿಸ್ಕೊದ ಬೇ ಏರಿಯಾದ ಮೃಗಾಲಯದಲ್ಲಿರುವ ಕರಡಿ, ಸಿಂಹ, ಚಿರತೆ ಮತ್ತಿತರ ಪ್ರಾಣಿಗಳಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲು ಆರಂಭಿಸಲಾಗಿದೆ.
ಈ ವಾರ ಮೊದಲಿಗೆ ಹೆಣ್ಣು ಹುಲಿ ಮತ್ತು ಮೊಲ್ಲಿ ಪ್ರಾಣಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ ಪತ್ರಿಕೆ ಶನಿವಾರ ವರದಿ ಮಾಡಿದೆ. ವಿವಿಧ ಪ್ರಾಣಿ ಪ್ರಭೇದಗಳನ್ನು ರಕ್ಷಿಸುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಕೈಗೊಂಡಿರುವ ಅಭಿಯಾನಕ್ಕೆ ನ್ಯೂಜೆರ್ಸಿಯ ಪಶುವೈದ್ಯಕೀಯ ಔಷಧ ಕಂಪನಿ ಜೊಯಿಟಿಸ್, ಲಸಿಕೆಯನ್ನು ಅಭಿವೃದ್ಧಿಪಡಿಸಿ ದೇಣಿಗೆಯಾಗಿ ನೀಡಿದೆ.
ಮೃಗಾಲಯದ ಪಶುವೈದ್ಯಕೀಯ ಸೇವೆಗಳ ಉಪಾಧ್ಯಕ್ಷ ಅಲೆಕ್ಸ್ ಹರ್ಮನ್, ಮೃಗಾಲಯದಲ್ಲಿರುವ ಯಾವುದೇ ಪ್ರಾಣಿಗಳಿಗೆ ವೈರಾಣು ಸೋಂಕು ತಗುಲಿಲ್ಲ. ಅವುಗಳನ್ನು ಸೋಂಕಿನಿಂದ ರಕ್ಷಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ. ಈಗ ಹುಲಿಗಳು, ಕಪ್ಪು, ಕರಡಿಗಳು, ಸಿಂಹಗಳು ಮತ್ತು ಫೆರೆಟ್‌ಗಳಿಗೆ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಮುಂದೆ ಸಸ್ತನಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
‘ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್ 3ನೇ ಅಲೆ ಗರಿಷ್ಟ ಮಟ್ಟಕ್ಕೆ ಏರಿಕೆ’