ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಅಗತ್ಯವಸ್ತುಗಳ ಮೇಲೆ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.. ನಗರದ ಕೆಪಿಸಿಸಿ ಕಚೇರಿಯಿಂದ ಬಿಬಿಎಂಪಿ ಕಚೇರಿ ವರೆಗೂ ಸೈಕಲ್ ಜಾತಾ ಹಮ್ಮಿಕೊಂಡಿದ್ದು, ಸೈಕಲ್ ಜಾತಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹಮದ್ ಸೇರಿ ಇನ್ನಿತರ ನಾಯಕರು ಭಾಗಿಯಾಗಿದ್ದರು..
ನೂರಾರು ಕಾರ್ಯಕರ್ತರೊಂದಿ ಸೈಕಲ್ ಮೂಲಕ ಬಿಬಿಎಂಪಿ ಕಚೇರಿಯತ್ತ ಪ್ರತಿಭಟನಾಕಾರರು ತೆರಳುತ್ತಿದ್ದರು.. ಆದ್ರೆ ಕೋವಿಡ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ಕೈಗೊಂಡಿದ್ದ ಹಿನ್ನೆಲೆಪೊಲೀಸರು ಕೆಪಿಸಿಸಿ ಕಚೇರಿ ಎದುರೆ ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆದು ಬಿಎಂ ಟಿಸಿ ಬಸ್ ಮೂಲಕ ಕರೆದೊಯ್ದಿದ್ದಾರೆ. ಮತ್ತೊಂದೆಡೆ ಸೈಕಲ್ ಜಾತಾ ಹಿನ್ನೆಲೆ ಕ್ವೀನ್ಸ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಸಮಸ್ಯೆಎದುರಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.








