ನಾಚಿಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ : ಸಿದ್ದರಾಮಯ್ಯ ಗುಡುಗು
ಬೆಂಗಳೂರು : ಅಪ್ಪ ಮಗ ಸೇರಿ ರಾಜ್ಯದಲ್ಲಿ ಹಣ ಲೂಟಿ ಮಾಡ್ತಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ ಇವರದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ 10 ಸಾವಿರ ಹಾಗೂ 10 ಕೆಜಿ ಅಕ್ಕಿ ಕೊಡ್ತಿದ್ವಿ. ಇದನ್ನ ಕೊಡಲಿಲ್ಲ ಅಂದ್ರೆ ಏನು..?
ಹಾಗಾದ್ರೆ ಸರ್ಕಾರ ಬರೋದು ದುಡ್ಡು ಹೊಡೆಯೋಕಾ..? ಅಪ್ಪ ಅಮ್ಮ ಮಗ ಇಬ್ಬರು ಸೇರಿ ಜೆಸಿಬಿಯಲ್ಲಿ ತೆಗೆದು ಹಣ ದೋಚುತ್ತಿದ್ದಾರೆ.
ಇಂತಹ ಕೆಟ್ಟ ಸರ್ಕಾರ ನನ್ನ 40 ವರ್ಷದ ರಾಜಕಾರಣದಲ್ಲಿ ನೋಡಿಲ್ಲ. ಅಪ್ಪ ಮಗ ಸೇರಿ ರಾಜ್ಯದಲ್ಲಿ ಹಣ ಲೂಟಿ ಮಾಡ್ತಿದ್ದಾರೆ.
ನಾಚಿಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ ಇವರದ್ದು. ಕೇವಲ ಭಾಷಣ ಮಾಡಿಕೊಂಡು ಕಾಲಕಳೆಯುತ್ತಿದೆ ಸರ್ಕಾರ ಎಂದು ಕಿಡಿಕಾರಿದರು.
ಇನ್ನು ಇದು ಲಂಚದ ಸರ್ಕಾರ- ಎಲ್ಲದಕ್ಕು ಲಂಚ ಕೇಳ್ತಾರೆ. ಅಧಿಕಾರಿಗಳ ವರ್ಗಾವಣೆ, ಕಾಮಗಾರಿಗು ಲಂಚ ಕೇಳ್ತಿದ್ದಾರೆ. ಪೇಮೆಂಟ್ ಮಾಡಲು ಸಹ 10 ಪಸೆರ್ಂಟ್ ಸರ್ಕಾರ.
ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಸರ್ಕಾರ ಯಡಿಯೂರಪ್ಪನದ್ದು. ಹಣ ಘೋಷಣೆ ಮಾಡೋದು ಯಾರಿಗು ಆ ಹಣ ಕೊಡೋದಿಲ್ಲ.
ಇವರದ್ದು ಬಡವರ ವಿರೋಧಿ, ಭ್ರಷ್ಟಾಚಾರ ಸರ್ಕಾರ. ನಾವು ಅಧಿಕಾರಕ್ಕೆ ಬರೋದಕ್ಕಿಂತ ರಾಜ್ಯ ಉಳಿಯುವ ಕೆಲಸ ಆಗಬೇಕಿದೆ.
ಒಂದೂವರೆ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನೂಳಿದ ಕಾಲ ಎರಡೂವರೆ ಲಕ್ಷ ಕೋಟಿ ಸಾಲ ಮಾಡ್ತಾರೆ ಎಂದು ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.









