ಸಚಿವ ಸ್ಥಾನಕ್ಕೆ ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್ ರಾಜೀನಾಮೆ
ನವದೆಹಲಿ : ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ್ ಪ್ರಸಾದ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಚಿವರ ಸಂಖ್ಯೆ 12 ಕ್ಕೆ ಏರಿದೆ.
ಪ್ರಕಾಶ್ ಜಾವಡೇಕರ್, ಮಾಹಿತಿ ಮತ್ತು ಪ್ರಸಾರ ಜೊತೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನ ನಿರ್ವಹಿಸುತ್ತಿದ್ದರು. ಇನ್ನು ರವಿಶಂಕರ್ ಪ್ರಸಾದ್ ಅವ್ರಿಗೆ ಕಾನೂನು ಮತ್ತು ಐಟಿ ಸಚಿವಾಲಯದ ಜವಾಬ್ದಾರಿಯೂ ಇತ್ತು.
ರಾಜೀನಾಮೆ ಕೊಟ್ಟವರು ಯಾರು..?
ಹರ್ಷ ವರ್ಧನ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ರವಿಶಂಕರ್ ಪ್ರಸಾದ್ : ಮಾಹಿತಿ ಮತ್ತು ತಂತ್ರಜ್ಞಾನ
ರಮೇಶ್ ಪೋಖ್ರಿಯಾಲ್ : ಶಿಕ್ಷಣ
ಪ್ರಕಾಶ್ ಜಾವಡೇಕರ್ : ಪರಿಸರ ಮತ್ತು ಅರಣ್ಯ ಸಚಿವ
ಸಂತೋಷ್ ಗಂಗ್ವಾರ್ : ಕಾರ್ಮಿಕ
ಸದಾನಂದ ಗೌಡ : ರಾಸಾಯನಿಕ ಮತ್ತು ರಸಗೊಬ್ಬರ
ಬಾಬುಲ್ ಸುಪ್ರಿಯೋ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ಸಂಜಯ್ ಧೋತ್ರೆ : ಶಿಕ್ಷಣ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ
ರಾವಾಸಾಹೇಬ್ ಪಾಟೀಲ್ ದನ್ವೆ : ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ
ರತನ್ ಲಾಲ್ ಕಟಾರಿಯಾ : ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಪ್ರತಾಪ್ ಚಂದ್ರ ಸಾರಂಗಿ : ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ
ದೇಬಶ್ರೀ ಚೌಧುರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಥಾವರ್ ಚಂದ್ ಗೆಹ್ಲೋಟ್ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ









