ಚಿತ್ರಮಂದಿರಗಳಿಗೆ ತೆರಗಿ ಪಾವತಿಯಿಂದ ಮುಕ್ತಿ ನೀಡಿದ ಸರ್ಕಾರ – ಈ ಆದೇಶ ಮಲ್ಟಿಪ್ಲೆಕ್ಸ್ ಗಳಿಗೆ ಅನ್ವಯಿಸಲ್ಲ
ಕೊರೊನಾ ಹಾವಳಿಯಿಂದಾಗಿ ದೇಶದಲ್ಲಿ ಅನೇಕರು ತೊಂದರೆ ಅನುಭವಿಸಿದ್ದಾರೆ.. ಅನೇಕ ಕ್ಷೇತ್ರಗಳು ನೆಲಕಚ್ಚಿವೆ.. ಬಹುಮುಖ್ಯವಾಗಿ ಸಿನಿಮಾರಂಗಕ್ಕೆ ಭಾರೀ ನಷ್ಟ ಉಂಟಾಗಿದೆ.. ಸ್ಯಾಂಡಲ್ ವುಡ್ ಬಗ್ಗೆ ಮಾತನಾಡುವುದಾದ್ರೆ ರಾಜ್ಯದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಭಾರೀ ನಷ್ಟ ಅನುಭವಿಸಿದ್ದಾರೆ.
ಈ ನಡುವೆ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಬಂದ ನಂತರ ಲಾಕ್ ಡೌನ್ ಕೂಡ ಸಡಿಲಿಕೆಯಾಗಿದ್ರೂ ಸಿನಿಮಾಮಂದಿರಗಳಿಗೆ ಈವರೆಗೂ ಅವಕಾಶ ಸಿಕ್ಕಿಲ್ಲ.. ಇತ್ತೀಚೆಗೆ ಫಿಲ್ಮ್ ಚೇಂಬರ್ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಸಿನಿಮಾ ಮಂದಿರಗಳ ಪುನರಾರಂಭ ಮತ್ತು ತೆರೆಗಿ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡಿತ್ತು..
ಇದೀಗ ಮನವಿಗೆ ಸ್ಪಂದಿಸಿರುವ ಸರ್ಕಾರ ರಾಜ್ಯದ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 2021-22ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಕೋವಿಡ್ ಮಹಾಮಾರಿಯಿಂದ ರಾಜ್ಯದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಏಕಪರದೆ ಚಿತ್ರಮಂದಿರ ನೌಕರರು, ಮಾಲೀಕರ ಹಿತದೃಷ್ಟಿಯಿಂದಾಗಿ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರವು ಆದೇಶದಲ್ಲಿ ತಿಳಿಸಿದೆ.
ರಾಜ್ಯದಲ್ಲಿ 630 ಏಕಪರದೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಏಕಪರದೆ ಚಿತ್ರಮಂದಿರಗಳಿಗೂ 2021-22 ನೇ ಸಾಲಿನ ಆಸ್ತಿ ತೆರಿಗೆಯಿಂದ ವಿನಾಯಿತಿ ದೊರೆತಿದೆ. ಆದರೆ ಮಲ್ಟಿಫ್ಲೆಕ್ಸ್‌ಗಳಿಗೆ ಯಾವುದೇ ವಿನಾಯಿತಿಯನ್ನು ಸರ್ಕಾರ ನೀಡಿಲ್ಲ. ಆದ್ರೆ ಸಿನಿಮಾಮಂದಿರಗಳ ಪುನರಾರಂಭದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದ್ರೆ ಮುಂದಿನ ವಾರದಿಂದ ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಗುವ ನಿರೀಕ್ಷೆಯಿದೆ.
ಯಾರೂ ಕೂಡ ಮನೆಯ ಬಳಿ ಬರಬೇಡಿ : ಶಿವಣ್ಣ ಮನವಿ
ಜುಲೈ 16ಕ್ಕೆ ರಿಲೀಸ್ ಆಗಲ್ಲ ‘KGF 2’ : ಪ್ರಶಾಂತ್ ನೀಲ್ ಹೇಳಿದ್ದೇನು..?
ಮೊಹಮ್ಮದ್ ಯೂಸೂಪ್ ಖಾನ್ ನಿಂದ ದಿಲೀಪ್ ಕುಮಾರ್ ಆಗಿ ಬದಲಾಗಿದ್ದು ಯಾಕೆ..? ನಡೆದು ಬಂದ ಹಾದಿ








