ಯಾರೂ ಕೂಡ ಮನೆಯ ಬಳಿ ಬರಬೇಡಿ : ಶಿವಣ್ಣ ಮನವಿ
ಬೆಂಗಳೂರು : ಜುಲೈ 12 ರಂದು ಸ್ಯಾಂಡಲ್ ವುಡ್ ನ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವಿದೆ.. ಪ್ರತಿ ವರ್ಷ ಶಿವಣ್ಣನ ಅಭಿಮಾನಿಗಳು ಅವರ ಮನೆ ಮುಂದೆ ಬಂದು ಹುಟ್ಟುಹಬ್ಬವನ್ನ ಧೂಮ್ ದಾಮ್ ಆಗಿ ಆಚರಣೆ ಮಾಡ್ತಾಯಿದ್ದರು. ಆದ್ರೆ ಈ ಬಾರಿ ಕೊರೊನಾ ಹಾವಳಿ ಇರೋದ್ರಿಂದ ದಯಮಾಡಿ ಆ ದಿನ ಯಾರೂ ಮನೆಯ ಬಳಿ ಬರಬೇಡಿ ಎಂದು ಶಿವಣ್ಣ ವಿಡಿಯೋ ಮೂಲಕ ಮನವಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..
ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಹೀಗಾಗಿ ಯಾರೂ ಕೂಡ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿರುವ ಶಿವಣ್ಣ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿ ಕೊರೊನಾ ವೈರಸ್ ಕುರಿತು ಜಾಗೃತಿ ಕೂಡ ಮೂಡಿಸಿದ್ದಾರೆ.
“ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕಾಗಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 12ರಂದು ನನ್ನ ಹುಟ್ಟಿದ ದಿನ. ಕಾರಣಾಂತರಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಿಮಗೆಷ್ಟು ಬೇಜಾರಾಗುತ್ತೋ ಅಷ್ಟೇ ಬೇಜಾರು ನನಗೂ ಆಗುತ್ತೆ. ಸೋಶಿಯಲ್ ಮೀಡಿಯಾ ಮುಖಾಂತರ ವಿಶ್ ತಿಳಿಸಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ನನಗೆ ಯಾವಾಗಲೂ ಇರಬೇಕು ಎಂದು ಬಯಸುತ್ತೇನೆ” ಎಂದು ಹೇಳಿದ್ದಾರೆ.
Stay safe everyone 🙏🏼 pic.twitter.com/LZmFyNxw2X
— DrShivaRajkumar (@NimmaShivanna) July 7, 2021
ಅಲ್ಲದೇ “ದಯವಿಟ್ಟು ಎಲ್ಲರೂ ಕೊರೊನಾ ನಿಯಮಗಳನ್ನು ಪಾಲಿಸಿ. ಎಲ್ಲೇ ಹೋದರೂ ಮಾಸ್ಕ್ ಹಾಕಿಕೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕೊರೊನಾ ಲಸಿಕೆ ಪಡೆದುಕೊಳ್ಳಿ. ಆದಷ್ಟು ಬೇಗ ಕೊರೊನಾ ಕಡಿಮೆಯಾಗಿ ನಾವೆಲ್ಲರೂ ಒಟ್ಟು ಸೇರುವಂತೆ ದೇವರಲ್ಲಿ ಪ್ರಾರ್ಥಿಸೋಣ” ಎಂದು ಶಿವರಾಜ್ ಕುಮಾರ್ ಅವರು ಜಾಗೃತಿ ಮೂಡಿಸಿದ್ದಾರೆ.
ಬದುಕು ನಡೆಸಲು ಬೀದಿಯಲ್ಲಿ ಮೀನು ಮಾರಾಟಕ್ಕಿಳಿದ ಕಿರುತೆರೆಯ ಖ್ಯಾತ ನಟ








