ಬದುಕು ನಡೆಸಲು ಬೀದಿಯಲ್ಲಿ ಮೀನು ಮಾರಾಟಕ್ಕಿಳಿದ ಕಿರುತೆರೆಯ ಖ್ಯಾತ ನಟ

1 min read

ಬದುಕು ನಡೆಸಲು ಬೀದಿಯಲ್ಲಿ ಮೀನು ಮಾರಾಟಕ್ಕಿಳಿದ ಕಿರುತೆರೆಯ ಖ್ಯಾತ ನಟ

ಕೋವಿಡ್ ಹಾವಳಿದಿಂದಾಗಿ ಕಳೆದೆರೆ ವರ್ಷಗಳಿಂದ ಸತತವಾಗಿ ಲಾಕ್ ಡೌನ್ ಮಾಡಲಾಗ್ತಿದೆ.. ಈ ನಡುವೆ ಅನೇಕರ ಬದುಕು ಮೂರಾಬಟ್ಟೆಯಾಗಿದೆ.. ಅನೇಕರ ಕನಸು ನುಚ್ಚುನೂರಾಗಿದೆ.. ಅನೇಕರ ಜೀವ ಹೋಗಿದೆ.. ಇನ್ನೂ ಕೆಲವರು ಬೀದಿಗೆ ಬಿದ್ದಿದ್ದಾರೆ.. ಸಿನಿಮಾರಂಗದವರೂ ಕೂಡ ಜೀವನಕ್ಕಾಗಿ  ಬಣ್ಣದ ಜಗತ್ತಿನಿಂದ ದೂರಾಗಿ ಬೀದಿ ಬದಿ ಕೆಲಸಗಳನ್ನ ಮಾಡುತ್ತಾ ಇದ್ದಾರೆ..

ಅಂಥವರ ಪೈಕಿಯೇ ಖ್ಯಾತ ಕಿರುತೆರೆ ನಟನೊರೊಬ್ಬರು ಜೀವನ ಸಾಗಿಸುವುದಕ್ಕೆ ಬೀದಿಯಲ್ಲಿ ಮೀನು ವ್ಯಾಪಾರಕ್ಕಿಳಿದ್ದಾರೆ. ಹೌದು.. ಬೆಂಗಾಳಿ ಕಿರುತೆರೆ ನಟರೊಬ್ಬರು ತಮ್ಮ ಬದುಕಿನ ಬಂಡಿ ಓಡಿಸಲು ಮೀನು ಮಾರಾಟಕ್ಕಿಳಿದಿದ್ದಾರೆ. ಕಿರುತೆರೆ ಲೋಕದಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿರುವ ಅರಿಂದರ್ ಪ್ರಮಣಿಕ್  ರಸ್ತೆ ಬದಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.  ಇದ್ರಿಂದಾಗಿ  ನಟನ  ಅಭಿಮಾನಿಗಳು ಸಹ  ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ನಟ, ನನ್ನ ತಂದೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಆಗ ನಾನು ಜನಪ್ರಿಯ ನಟನಾಗಬೇಕೆಂಬ ಕನಸು ಕಂಡಿದ್ದೆ. ಹೀಗೆ ನಟನೆಗೆ ಇಳಿದೆ. ನಾನು ನಟನೆ ಮಾಡಲು ಆರಂಭಿಸುತ್ತಿದ್ದಂತೆಯೇ ನಮ್ಮ ತಂದೆ ತರಕಾರಿ ಮಾರಾಟ ಮಾಡುವುದುನ್ನು ನಿಲ್ಲಿಸಿದ್ದರು. ಆದರೆ ಇದೀಗ ಕೊರೊನಾದಿಂದ ನನಗೂ ಕೆಲಸ ಸಿಗುತ್ತಿಲ್ಲ. ಇತ್ತ ಕುಟುಂಬವೂ ತೀವ್ರ ಸಂಕಷ್ಟಕ್ಕೀಡಾಯಿತು. ಹೀಗಾಗಿ ನನ್ನ ಕುಟುಂಬ ನೋಡಿಕೊಳ್ಳಲು ನಾನು ಮೀನು ಮರಾಟಕ್ಕೆ ಇಳಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಬೀದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಜೀವನ ನಡೆಸಬೇಕೆಂದರೆ ಇದನ್ನು ಮಾಡಲೇಬೇಕಿತ್ತು, ನನಗೆ ಬೇರೆ ದಾರಿ ಇರಲಿಲ್ಲ ಎಂದು ಪ್ರಮಣಿಕ್ ತಮ್ಮ ಪರಿಸ್ಥಿತಿ ನೆನೆದು ಕಣ್ಣೀರಾಕಿದ್ದಾರೆ.

ಪ್ರಮಣಿಕ್ ಅವರು ತಾವು ಪ್ರಥಮ ಪಿಯುಸಿ ಓದುತ್ತಿದ್ದಾಗಲೇ ನಟನೆ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು. ನಾಟಕಕಾರ ಹಾಗೂ ನಿರ್ದೇಶಕ ಚಂದನ್ ಸೇನ್ ಅವರ ತಂಡ ಸೇರಿ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ನಂತರ ಅಲ್ಲಿಂದ ಧಾರಾವಾಹಿ ಲೋಕಕ್ಕೆ ಪ್ರವೇಶಿಸಿದ್ದು, ಅನನ್ಯ ಚಟರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸುಬರ್ನಲತಾ’ ಧಾರಾವಾಹಿ ಸೇರಿದಂತೆ ಬೆಂಗಾಳಿಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.

ಬಾಲಿವುಡ್ ನ ಲೆಜೆಂಡ್ ನಟ ದಿಲೀಪ್ ಕುಮಾರ್ ವಿಧಿವಶ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd