ಬಾಲಿವುಡ್ ನ ಲೆಜೆಂಡ್ ನಟ ದಿಲೀಪ್ ಕುಮಾರ್ ವಿಧಿವಶ

1 min read

ಬಾಲಿವುಡ್ ನ ಲೆಜೆಂಡ್ ನಟ ದಿಲೀಪ್ ಕುಮಾರ್ ವಿಧಿವಶ

ಮುಂಬೈ:  ಬಾಲಿವುಡ್ ನ ಲೆಜೆಂಡರಿ ನಟ ದಿಲೀಪ್ ಕುಮಾರ್ ಅವರು  ಇಂದು ವಿಧಿವಶರಾಗಿದ್ದಾರೆ.. ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟ್ರ್ಯಾಜಿಡಿ ಕಿಂಗ್  , ಚಿಕಿತ್ಸೆ ಫಲಕಾರಿಯಾಗದೇ ತಮ್ಮ 98ನೇ ವಯಸ್ಸಿನಲ್ಲಿ ಬದುಕಿನ ಪಯಣ ಮುಗಿಸಿದ್ದಾರೆ.

ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದ ನಟ ದಿಲೀಪ್ ಕುಮಾರ್ ಜೂನ್ 29ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಟ ಕೊನೆಯುಸಿರೆಳೆದರು.

ಇತ್ತೀಚಿಗೆ ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬ ದವರು ಮಾಹಿತಿ ನೀಡಿದ್ದರು. ದಿಲೀಪ್ ಕುಮಾರ್ ಆರೋಗ್ಯವಾಗಿದ್ದಾರೆ. ವೈದ್ಯರ ಸಲಹೆಯಂತೆ ಸ್ವಲ್ಪ ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಆರೈಕೆ ಮಾಡಲು ವೈದ್ಯರಿಗೂ ಸಹಾಯವಾಗಲಿದೆ. ಒಂದೆರಡು ದಿನದ ಬಳಿಕ ಡಿಸ್ಚಾರ್ಜ್ ಆಗಲಿದ್ದಾರೆ ಎಂದಿದ್ದರು.

ಇನ್ನೂ  ಹಿರಿಯ ನಟನ ನಿಧನಕ್ಕೆ ಬಾಲಿವುಡ್ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಮಂತ್ರ ನರೇಂದ್ರ ಮೋದಿ ಅವರು ಸಹ ಅಗಲಿದ ಹಿರಿಯ ನಟನಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಡಿಸೆಂಬರ್ 11, 1922ರಲ್ಲಿ ಪೇಶಾವರದಲ್ಲಿ ಜನಿಸಿದ್ದರು. ದಿಲೀಪ್ ಕುಮಾರ್ ಅವರ ಮೂಲ ಹೆಸರು ಮೊಹಮ್ಮದ್ ಯೂಸೂಪ್ ಖಾನ್. ರಾಜ್ ಕಪೂರ್ ಅವರ ಸಮಕಾಲೀನರವರಾಗಿದ್ದರು. ಬಣ್ಣದ ಲೋಕಕ್ಕೆ ದಿಲೀಪ್ ಕುಮಾರ್ ಹೆಸರಿನಿಂದ ಎಂಟ್ರಿ ಪಡೆದುಕೊಂಡಿದ್ದರು. 22ನೇ ವಯಸ್ಸಿನಲ್ಲಿ ಬಣ್ಣ ಹೆಚ್ಚಿದ ದಿಲೀಪ್ ಕುಮಾರ್ ಅವರ ಮೊದಲ ಚಿತ್ರ ‘ಜ್ವಾರಾ ಭಾಟ’ 1944ರಲ್ಲಿ ತೆರಕಂಡಿತ್ತು.

ಮುಘಲ್-ಎ-ಅಜಮ್ , ರಾಮ್ ಔರ್ ಶ್ಯಾಮ್ , ಕೋಹಿನೂರ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಐದು ದಶಕದಲ್ಲಿ ಸುಮಾರು 60ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd