ಪತಿ ಸತ್ತಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ವಿಮೆಯ 18.5 ಲಕ್ಷ ರೂ. ಹಣ ಪಡೆದಿದ್ದ ಮಹಿಳೆ
ಗುಜರಾತ್ : ಮಹಿಳೆಯೊಬ್ಬಳು ತನ್ನ ಪತಿಸಾವನಪ್ಪಿರೋದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರಿಂದ 18.5 ಲಕ್ಷ ರೂ.ಗಳನ್ನು ಪಡೆದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾಳೆ.. ಈ ಘಟನೆ ಗುಜರಾತ್ ನಲ್ಲಿ ನಡೆದಿದ್ದು, 35 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆಕೆಗೆ ಸಹಾಯ ಮಾಡಿದ್ದ ವೈದ್ಯಯನ್ನ ಅರೆಸ್ಟ್ ಮಾಡಿದ್ದಾರೆ. ಮೋಸ ಮತ್ತು ವಂಚನೆ ಆರೋಪದ ಮೇಲೆ ಆರೋಪಿ ಮಹಿಳೆ ನಂದಾ ಮರಾಠಿ ಮತ್ತು ವೈದ್ಯ ಹರಿಕೃಷ್ಣ ಸೋನಿ ಎಂಬಾತನನ್ನು ನಗರ ಅಪರಾಧ ವಿಭಾಗ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಸ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
2019ರಲ್ಲಿ ತಾನು ಮೃತಪಟ್ಟಿರುವುದಾಗಿ ತೋರಿಸುವ ಮೂಲಕ ತನ್ನ ಪತ್ನಿ ತಮ್ಮ ಜೀವ ವಿಮಾ ಪಾಲಿಸಿಯಿಂದ 18.5 ಲಕ್ಷ ರೂ. ಪಡೆದಿರುವುದಾಗಿ ತಿಳಿದ ನಿಮೇಶ್ ಮರಾಠಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ನಡೆಸಿದ ಪೊಲೀಸರಿಗೆ ನಂದಾ ಮರಾಠಿ 2019ರಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತಪಟ್ಟಿರುವುದಾಗಿ ಹೇಳಿ ವೈದ್ಯ ಸೋನಿಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಪತಿಗೆ ಅರಿವಿಲ್ಲದೆ ಆರೋಪಿ 18.5 ಲಕ್ಷ ರೂ.ಗಳನ್ನು ಪಡೆಯಲು ಎರಡು ವಿಮಾ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.








