ಆಟೋ ಹಿಂದೆ ‘ ಡಿಂಪಲ್ ಕ್ವೀನ್’ ಫೊಟೋ – ಫೋಟೋ ಅನಾವರಣಗೊಳಿಸಿದ ರಚಿತಾ
ಆಟೋ ಚಾಲಕನೊಬ್ಬ ಡಿಂಪಲ್ ಕ್ವೀನ್ ರಚಿತಾ ರಾಮ್ ಪೋಟೋವನ್ನ ತನ್ನ ಆಟೋ ಮೇಲೆ ಹಾಕಿಸಿಕೊಂಡಿದ್ದು, ಈ ಫೋಟೋವನ್ನ ಸ್ವತಃ ರಚಿತಾ ರಾಮ್ ಅನಾವರಣಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ರಚಿತಾ ರಾಮ್ ಸಹ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಆಟೋ ಚಾಲಕ ರಿಜ್ವಾನ್‌ಗೆ ಜಾಗರೂಕತೆಯಿಂದ ಆಟೋ ಚಾಲನೆ ಮಾಡಿ ಎಂದು ಶುಭ ಹಾರೈಸಿದ್ದಾರೆ.
ಹೌದು ಸಾಮಾನ್ಯವಾಗಿ ಆಟೋಗಳ ಮೇಲೆ ಉಪೇಂದ್ರ, ಶಂಕರ್ ನಾಗ್ , ವಿಷ್ಣುವರ್ಧನ್ , ದರ್ಶನ್ ಹೀಗೆ ನಟರ ಫೋಟೋಗಳು ರಾರಾಜಿಸುತ್ತವೆ.. ಇದೀಗ ಆಟೋ ಮೇಲೆ ರಚಿತಾ ರಾಮ್ ಫೋಟೋಗಳು ಕೂಡ ಹೆಚ್ಚು ಮಿಂಚುತ್ತಿವೆ. ಈ ಬಗ್ಗೆ ವಿಡಿಯೋ ಶೇರ್ ಮಾಡಿರುವ ರಚಿತಾ ‘ಈ ರೀತಿ ಪ್ರೀತಿ ತೋರಿಸಿದಾಗ, ನಿಜಕ್ಕೂ ಬಹಳ ಖುಷಿ ಆಗುವುದು. ನನ್ ಮನಸಾರೆ #ಥ್ಯಾಂಕ್ ಯೂ ರಿಜ್ವಾನ್, ಗಾಡಿಯನ ಜೋಪಾನವಾಗಿ ಓಡಿಸಿ ಗಾಡಿಯನ ಜೋಪಾನವಾಗಿ ಓಡಿಸಿ’ ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದ್ರೆ ರಚಿತಾ ಸದ್ಯ ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಏಕ್ ಲವ್ ಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ರಮೇಶ್ ಅರವಿಂದ್ ಅಭಿನಯದ ‘100’ ಸಿನಿಮಾದಲ್ಲಿಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆ ‘ವೀರಂ’ ಸಿನಿಮಾ ಮಾಡ್ತಿದ್ದಾರೆ. ಸತೀಶ್ ನೀನಾಸಂ ಜೊತೆ ‘ಮ್ಯಾಟ್ನಿ’ ಸೇರಿದಂತೆ , ಲವ್ ಯೂ ರಚ್ಚು, ಏಪ್ರಿಲ್, ಮಾನ್ಸೂನ್ ರಾಗಾ, ಲಿಲ್ಲಿ, ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮೀ ಔರ್ ಹೇಟ್ ಮೀ, ರವಿ ಭೋಪಣ್ಣ, ಡಾಲಿ, ಪಂಕಜ ಕಸ್ತೂರಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್ ಬ್ಯುಸಿಯಾಗಿದ್ಧಾರೆ.