ಸಲ್ಮಾನ್ ಖಾನ್ ವಿರುದ್ಧ ವಂಚನೆ ಪ್ರಕರಣ : ‘ಬ್ಯಾಡ್ ಬಾಯ್’ ಬಗ್ಗೆ ಸ್ಪಷ್ಟನೆ ಕೊಟ್ಟ ಸಂಸ್ಥೆ..!
ಬಾಲಿವುಡ್ ನ ಸುಲ್ತಾನಾ ಸಲ್ಮಾನ್ ಖಾನ್ , ಸಹೋದರಿ ಅಲ್ವಿರಾ ಖಾನ್ ಸೇರಿ 9 ಮಂದಿ ವಿರುದ್ಧ ವಂಚನೆ ಪ್ರಕರಣದ ಕೇಸ್ ದಾಖಲಾಗಿದೆ.. ಚಂಡೀಘಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈಗಾಗಲೇ ಸಮನ್ಸ್ ಜಾರಿ ಮಾಡಿದ್ದಾರೆ. ಜುಲೈ 13ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಇದೀಗ ಈ ಬಗ್ಗೆ ‘ಬಿಯಿಂಗ್ ಹ್ಯೂಮನ್’ ಅಧಿಕೃತ ಹೇಳಿಕೆ ಹೊರಡಿಸಿದ್ದು, ಅರುಣ್ ಗುಪ್ತಾ ಜೊತೆಗೆ ಆಗಿರುವ ಒಪ್ಪಂದಕ್ಕೂ ಸಲ್ಮಾನ್ ಖಾನ್ ಗೂ ಸಂಬಂಧವಿಲ್ಲ ಎಂದಿದೆ. ಸಲ್ಮಾನ್ ಖಾನ್‌ಗೆ ಮಾತ್ರವಲ್ಲ ದೂರಿನಲ್ಲಿ ಉಲ್ಲೇಖಿಸಲಾದ ಯಾರಿಗೂ ಈ ಪ್ರಕರಣಕ್ಕೆ ಸಂಬಂಧವಿಲ್ಲ ಎಂದಿದೆ ಸಂಸ್ಥೆ. ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣ ಈ ಪ್ರಕರಣದ ಬಗ್ಗೆ ಹೆಚ್ಚಿನ ವಿಷಯ ಹೇಳಲಾಗುವುದಿಲ್ಲ ಎಂದು ಸಹ ಸಂಸ್ಥೆ ಹೇಳಿದೆ.
ಆಟೋ ಹಿಂದೆ ‘ ಡಿಂಪಲ್ ಕ್ವೀನ್’ ಫೊಟೋ – ಫೋಟೋ ಅನಾವರಣಗೊಳಿಸಿದ ರಚಿತಾ
ಸಲ್ಮಾನ್ ಖಾನ್ ಒಡೆತನದ ‘ಬೀಯಿಂಗ್ ಹ್ಯೂಮನ್’ ಸಂಸ್ಥೆಯಿಂದ ವಂಚನೆ ಆಗಿದೆ ಎಂದು ಚಂಡೀಘಡದ ವ್ಯಾಪ್ಯಾರಿಯೊಬ್ಬ ಸಲ್ಮಾನ್ ಖಾನ್, ಸೇರಿದಂತೆ 9 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಖಾನ್ ಸಹ ಸೇರಿದ್ದಾರೆ.
ಚಂಡೀಘಡದ ಆಭರಣ ವ್ಯಾಪಾರಿ ಅರುಣ್ ಗುಪ್ತಾ ಎಂಬುವರನ್ನು ಸಂಪರ್ಕಿಸಿದ್ದ ‘ಬೀಯಿಂಗ್ ಹ್ಯೂಮನ್’ ಸಂಸ್ಥೆಯ ಕೆಲವು ಸಿಬ್ಬಂದಿ ‘ಬೀಯೀಂಗ್ ಹ್ಯೂಮನ್’ ಬ್ರ್ಯಾಂಡ್‌ನ ಆಭರಣ ಬಿಡುಗಡೆ ಆಗಿದ್ದು ನಿಮ್ಮ ಅಂಗಡಿಗೆ ಅದನ್ನು ಕೊಡಲಾಗುತ್ತದೆ ಎಂದಿದ್ದರು. ಅಂತೆಯೇ 2018 ರಲ್ಲಿ ಎರಡು ಕೋಟಿ ಹಣ ನೀಡಿ ಆಭರಣ ದಾಸ್ತಾನು ಕೊಡುವಂತೆ ಕೋರಿದ್ದರು, ಹಾಗೂ ಅಂಗಡಿಯನ್ನು ನವೀಕರಣಗೊಳಿಸಿದ್ದರು.
ಖ್ಯಾತ ಧಾರಾವಾಹಿ ‘ಜೊತೆ ಜೊತೆಯಲಿ’ ಇಂದ ನಟಿ ಮೇಘಾ ಶೆಟ್ಟಿ ಔಟ್..!
ಅಂಗಡಿ ತೆರೆಯುವ ವೇಳೆಗೆ, ವಿಶೇಷ ಆಭರಣಗಳನ್ನು ಅಂಗಡಿಗೆ ಸಪ್ಲೈ ಮಾಡುವ ಜೊತೆಗೆ ಸಲ್ಮಾನ್ ಖಾನ್ ಖುದ್ದಾಗಿ ಬಂದು ಅಂಗಡಿ ಉದ್ಘಾಟನೆ ಮಾಡುತ್ತಾರೆ ಎಂದು ಸಹ ಅರುಣ್‌ಗೆ ಹೇಳಲಾಗಿತ್ತು. ಆದರೆ ಆಭರಣಗಳು ಬಂದಿಲ್ಲ, ಸಲ್ಮಾನ್ ಖಾನ್ ಸಹ ಬಂದಿಲ್ಲ ಎಂದು ಅರುಣ್ ಗುಪ್ತಾ ದೂರು ನೀಡಿದ್ದಾರೆ.