ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಷಡ್ಯಂತ್ರ ಹೂಡಿದ್ದಾರೆ – ಉಮಾಪತಿ
ಬೆಂಗಳೂರು: ಸ್ಯಾಂಡವುಡ್ ನಲ್ಲಿ ಸಂಚನಲ ಸೃಷ್ಟಿ ಮಾಡಿರುವ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಉಮಾಪತಿ , ಆರೋಪಿ ಅರುಣಕುಮಾರಿ ಸ್ಪೋಟಕ ಮಾಹಿತಿಗಳನ್ನ ಹೊರ ಹಾಕ್ತಲೇ ಇದ್ದು, ಕೆಲ ಆಡಿಯೋಗಳು ರಿಲೀಸ್ ಆಗಿವೆ.. ಪ್ರಕರಣಕ್ಕೆ ಟಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ನಿನ್ನೆ ದರ್ಶನ್ ಸುದ್ದಿಗೋಷ್ಠಿ ನಡೆಸಿ ಉಮಾಪತಿ ವಿರುದ್ಧ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ ನಂತರ ಉಮಾಪತಿ ಹಾಗೂ ಪ್ರಕರಣದ ಮುಖ್ಯ ಆರೋಪಿ ಅರುಣಾ ಕುಮಾರಿ ನಡುವಿನ ವಾಟ್ಸ್‌ಆಪ್ ಚಾಟ್, ಆಡಿಯೋಗಳು ಲೀಕ್ ಆಗಿವೆ.
ಇದೀಗ ಉಮಾಪತಿ ಮತ್ತೊಂದು ಸುದ್ದಿಗೋಷ್ಠಿ ನಡೆಸಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ದರ್ಶನ್ ಗೆಳೆಯರು ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದಿದ್ಧಾರೆ. ಅಲ್ಲದೇ ಹರಾಜು ಬಂದ ಆಸ್ತಿಗಳನ್ನು ಕೊಂಡುಕೊಳ್ಳುವುದು ನನ್ನ ವ್ಯಾಪಾರಗಳಲ್ಲಿ ಒಂದು.
ಅದೇ ವಿಷಯವಾಗಿ ಆ ಮಹಿಳೆ ಏಪ್ರಿಲ್ ತಿಂಗಳಲ್ಲಿ ಪರಿಚಯ ಆಗಿದ್ದರು. ಜೂನ್ ತಿಂಗಳಲ್ಲಿ ಆಕೆಯೇ ಸಂದೇಶ ಕಳಿಸಿ, ದರ್ಶನ್ ಸರ್ ಗ್ಯಾರಂಟಿಯರ್ ಆಗಿ ಹರ್ಷ ಹಾಗೂ ವಿನಯ್ ಎಂಬುವರು ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾನು, ಅದರ ಮಾಹಿತಿ ನೀಡಿ ನಾನು ದರ್ಶನ್ ಅವರಿಗೆ ವಿಷಯ ತಿಳಿಸುತ್ತೇನೆ ಎಂದಿದ್ದೆ. ಅಂತೆಯೇ ದರ್ಶನ್ ಸಹ ಆ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರ ಅನುಮತಿ ಪಡೆದುಕೊಂಡೇ ನಾನು ಆಕೆಗೆ ದರ್ಶನ್ ಅವರ ಆಧಾರ್ ಕಾರ್ಡ್‌ನ ಚಿತ್ರ ಕಳಿಸಿದ್ದೆ ಎಂದಿದ್ದಾರೆ.
ಇದೇ ವೇಳೆ ಹರ್ಷ ಮೆಲಂಟಾ ತಪ್ಪು ದೂರವಾಣಿ ಸಂಖ್ಯೆ ಕೊಟ್ಟಿರುವುದು ಏಕೆ..? ದರ್ಶನ್ ಗೆಳೆಯರ ಬಗ್ಗೆ ಮಾತನಾಡಿರುವ ಉಮಾಪತಿ, ಹರ್ಷಾ ಮೆಲಂಟಾ ನೀಡಿರುವ ದೂರಿನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ಏಕೆ ನಮೂದಿಸಿದ್ದಾರೆ ಹರ್ಷಾ, ರಾಕೇಶ್ ಪಾಪಣ್ಣ ಹಾಗೂ ಇತರರು ಏಕೆ ಆ ಮಹಿಳೆಯನ್ನು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾತನಾಡಿದರು. ಆಕೆಯ ಮೊಬೈಲ್ ಅನ್ನು ಏಕೆ ಕಿತ್ತುಕೊಂಡರು. ಜೂನ್ 18 ರಂದು ದರ್ಶನ್ ಎದುರು ಆಕೆಯನ್ನು ಕರೆದುಕೊಂಡು ಹೋದಾಗ ನನ್ನನ್ನು ಏಕೆ ಕರೆಯಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇದು ನನ್ನ ತೇಜೋವಧೆ ಮಾಡುವ ಪ್ರಯತ್ನ , ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಹೂಡಿರುವ ಷಡ್ಯಂತ್ರದಂತೆ ಅನ್ನಿಸುತ್ತಿದೆ. ನನಗೆ ದೇವರು ಒಳ್ಳೆಯ ವ್ಯಾಪಾರ ಕೊಟ್ಟಿದ್ದಾನೆ. 25 ಕೋಟಿ ಹಣ ನನಗೆ ದೊಡ್ಡದ್ದೇನೂ ಅಲ್ಲ. ನಾನು ತಪ್ಪು ಮಾಡಿದ್ದಿದ್ದರೆ ನಾನು ನಿನ್ನೆ ವಿಚಾರಣೆಗೆ ಹೋಗುತ್ತಿರಲಿಲ್ಲ. ಅಥವಾ ಲಾಯರ್ ಅನ್ನು ಕರೆದುಕೊಂಡೇ ಹೋಗುತ್ತಿದ್ದೆ. ನಾನು ತಪ್ಪು ಮಾಡಿಲ್ಲ. ದರ್ಶನ್ ಹೇಳಿರುವಂತೆ ಪ್ರಕರಣದ ಸತ್ಯಾಂಶ ಹೊರಗೆ ಬರುವವರೆಗೂ ಕಾಯುತ್ತೀನಿ. ನನಗೆ ಮೈಸೂರು ಪೊಲೀಸರ ಮೇಲೂ ನಂಬಿಕೆ ಇದೆ, ಬೆಂಗಳೂರು ಪೊಲೀಸರ ಮೇಲೂ ನಂಬಿಕೆ ಇದೆ ಎಂದಿದ್ದಾರೆ.
ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ, ಸತ್ಯ ಗೊತ್ತಾಗಲೇ ಬೇಕಿದೆ – ಉಮಾಪತಿ
ವಂಚನೆ ಪ್ರಕರಣ : ದರ್ಶನ್ ಪರ ನಿಂತ ಸಂಸದೆ ಸುಮಲತಾ
ಪ್ರಕರಣದಲ್ಲಿ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ : ಅರುಣಾ ಕುಮಾರಿ
ನನ್ನ ಹಣೆಬರಹ ಯಾರೂ ಕಿತ್ಕೊಳೋಕಾಗೊಲ್ಲ : ಉಮಾಪತಿ