ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮ – ಪಾರ್ಶ್ವವಾಯುಗೆ ಕಾರಣವಾಗಬಹು : ಎಫ್‌ಡಿಎ
ಅಮೆರಿಕಾ : ವಿಶ್ವಾದ್ಯಂತ ಕೊರೊನಾ ವೈರಸ್ , ರೂಪಾಂತರ ತಳಿಗಳ ಹಾವಳಿಯ ನಡುವೆ ಕೊರೊನಾ ಲಸಿಕೆ ಅಭಿಯಾನವೂ ಹೆಚ್ಚಾಗಿದೆ.. ಈ ನಡುವೆ ಅನೇಕ ಲಸಿಕೆಗಳ ಬಗ್ಗೆ ಹಲವಾರು ಗೊಂದಲಗಳಿದ್ದು, ಅದ್ರಲ್ಲಿ ಚೀನೀಯ ಲಸಿಕೆಯೂ ಒಂದಾಗಿದೆ.. ಈ ನಡುವೆ ಅನೇಕರಿಗೆ ಇನ್ನೂವರೆಗೂ ಯಾವುದೇ ಲಸಿಕೆ ಮೇಲೂ ನಂಬಿಕೆ ಬಂದಿಲ್ಲ.. ಅಡ್ಡಪರಿಣಾಮಗಳಾಗಬಹುದಾದ ಆತಂಕದಲ್ಲೇ ಲಸಿಕೆ ಪಡೆಯೋದಕ್ಕೆ ಹಿಂದೂ ಮುಂದು ನೋಡ್ತಿದ್ದಾರೆ..ಇದೇ ಪರಿಸ್ಥಿ ಬಾರತದಲ್ಲೂ ಇದೆ.
ಆದ್ರೆ ಇದೀಗ ಕೋವಿಡ್-19 ನಿಯಂತ್ರಣಕ್ಕಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ನರ ಆರೋಗ್ಯಕ್ಕೆ ಸಂಬಂಧಿಸಿದ ಅಪರೂಪದ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ. ಹೌದು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದ್ದು, ಕೆಲವೊಮ್ಮೆ ಪಾರ್ಶ್ವವಾಯುವಿಗೆ ಕಾರಣವಾಗುವ ಗುಲೇನ್-ಬೇರ್ ಸಿಂಡ್ರೋಮ್ (ಜಿಬಿಎಸ್) ಅನ್ನು ವರದಿಗಳಲ್ಲಿ ಗಮನಿಸಲಾಗಿದೆ. ಇನ್ನೂ ಖಚಿತ ನಿರ್ಧಾರಕ್ಕೆ ಬಂದಿಲ್ಲ ಎಂದು ಎಫ್‌ಡಿಎ ಹೇಳಿದೆ.
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆ ಪಡೆದುಕೊಂಡವರ ಆರೋಗ್ಯ ಸ್ಥಿತಿ ಕುರಿತ ವಾಸ್ತವ ಅಂಕಿ-ಅಂಶಗಳ ಪರಿಶೀಲನೆ ನಡೆಸಲಾಗಿದ್ದು, ಲಸಿಕೆ ಪಡೆದವರಲ್ಲಿ ಗುಲೇನ್-ಬೇರ್ ಸಿಂಡ್ರೋಮ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಫ್‌ಡಿಎ ಮಾಹಿತಿ ನೀಡಿದೆ. ತುರ್ತು ಬಳಕೆಗೆ ಅನುಮತಿ ಇರುವ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದ 42 ದಿನಗಳಲ್ಲಿ ಕೆಲವರಲ್ಲಿ ಜಿಬಿಎಸ್ ಕಾಣಿಸಿಕೊಂಡಿದೆ. ಆದರೆ, ಇದರಿಂದ ಮೃತಪಟ್ಟ ಪ್ರಕರಣಗಳು ವರದಿಯಾಗಿಲ್ಲ. ಮಾಡೆರ್ನಾ ಮತ್ತು ಫೈಜರ್-ಬಯೋಟೆಕ್ ಲಸಿಕೆ ಹಾಕಿಸಿಕೊಂಡವರಲ್ಲಿ ಇಂತಹ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆಇದುವರೆಗೆ 1.28 ಕೋಟಿ ಲಸಿಕೆ ವಿತರಿಸಲಾಗಿದ್ದು, ಜಿಬಿಎಸ್ ಕಾಣಿಸಿಕೊಂಡ 100ಕ್ಕೂ ಹೆಚ್ಚು ಪ್ರಕರಣಗಳ ಪ್ರಾಥಮಿಕ ವರದಿಗಳನ್ನು ಯುಎಸ್ ಲಸಿಕೆ ಪ್ರತಿಕೂಲ ವರದಿ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ. ಜಿಬಿಎಸ್ ನರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದರಿಂದಾಗಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನರಕೋಶಗಳಿಗೆ ಹಾನಿ ಮಾಡುತ್ತದೆ ಮತ್ತು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಪಾರ್ಶ್ವವಾಯು ಆಗಬಹುದು ಎಂದು ಎಚ್ಚರಿಸಿದೆ.