ಡೆಲ್ಟಾ ಪ್ಲಸ್ – ಓರ್ವ ಸೋಂಕಿತ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು..?
ಅಮೆರಿಕಾ : ವಿಶ್ವಾದ್ಯಂತ ಕೋವಿಡ್ ಆತಂಕ ಕಡಿಮೆಯಾಗುತ್ತಿದೆ ಎಂಬ ಹೊತ್ತಲ್ಲೇ ಕೋವಿಡ್ ರೂಪಾಂತರಿ ಡೆಲ್ಟಾ ಆತಂಕ ಸೃಷ್ಟಿ ಮಾಡಿದೆ.. ಈ ನಡುವೆ ಮತ್ತೊಂದು ಆಘಾತಕಾರಿ ಮಾಹಿತಿಯನ್ನ WHO ಬಹಿರಂಗಪಡಿಸಿದೆ. ಅದೇನೆಂದ್ರೆ ಒಬ್ಬ ಡೆಲ್ಟಾ ಸೋಂಕಿತ ವ್ಯಕ್ತಿಯಿಂದ ಈ ಸೋಂಕು 8 ಮಂದಿಗೆ ಸೋಂಕು ಹರಡಬಲ್ಲದು ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮೂಲ ಕೊರೊನಾ ಸೋಂಕಿತ ಮೂರು ಮಂದಿಗೆ ಸೋಂಕು ಹರಡಬಲ್ಲ, ಆದರೆ ಡೆಲ್ಟಾ ಸೋಂಕಿತರ ಬರೋಬ್ಬರಿ 8 ಮಂದಿಗೆ ಸೋಂಕು ಹರಡಬಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಬರ್ತಿದೆ ಸೌರ ತೂಫಾನ್
ಕೊರೊನಾ ಸೋಂಕು ಹರಡುವಿಕೆಗೆ ಇರುವ ನಾಲ್ಕು ಪ್ರಮುಖ ಕಾರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವಿ ಡೆಲ್ಟಾ ರೂಪಾಂತರಿ ಹರಡುವಿಕೆ ಹಾಗೂ ಕೊರೊನಾ ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವುದರಿಂದ ಸೋಂಕು ಹೆಚ್ಚಾಗುತ್ತಿದೆ. ಅಲ್ಲದೇ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವ ಮಾತು ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಕೊರೊನಾ ಸೋಂಕು ಹರಡುವಿಕೆಗೆ ಇರುವ ಕೆಲವು ಪ್ರಮುಖ ಕಾರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರಿಯು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ, ಹಾಗೂ ಇದು ಅತ್ಯಂತ ಅಪಾಯಕಾರಿಯಾಗಿದೆ.
ಜನಸಂಖ್ಯೆ ನಿಯಂತ್ರಣಕ್ಕ ಮದುವೆಯನ್ನೇ ನಿಷೇಧಿಸಿ ಬಿಡಿ – ಯುಪಿ ಸರ್ಕಾರವನ್ನ ಟೀಕಿಸಿದ ಬರಾಕ್..!
ಮೂಲ ವೈರಸ್ ಸೋಂಕಿತನಿಂದ ಮೂರು ಜನರಿಗೆ ಸೋಂಕು ತಗುಲಿದರೆ ಡೆಲ್ಟಾ ರೂಪಾಂತರಿ ಸೋಂಕಿತನಿಂದ 8 ಮಂದಿಗೆ ಸೋಂಕು ತಗುಲಲಿದೆ. ಕೆಲವು ದೇಶಗಳಲ್ಲಿ ಡೆಲ್ಟಾ ರೂಪಾಂತರಿ, ಲಸಿಕೆ ವಿತರಣೆ ಕಡಿಮೆ, ಆಸ್ಪತ್ರೆಗಳ ಕೊರೆತೆ, ಆಮ್ಲಜನಕ ಕೊರತೆ, ಹಾಸಿಗೆಗಳ ಕೊರತೆಯಿಂದಾಗಿ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.