ಚೀನಾ ಕಂಪನಿಗಳನ್ನ ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕಾ – ಸೇಡು ತೀರಿಸಿಕೊಳ್ಳೋದಾಗಿ ಎಚ್ಚರಿಸಿದ ಚೀನಾ
ಇಡೀ ವಿಶ್ವಕ್ಕೆ ಕೊರೊನಾ ಮಾಹಾಮಾರಿ ಹಬ್ಬಿಸಿರುವ ಚೀನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಬಿಗ್ ಸಾಕ್ ನಿಡಿದೆ.. ಉಯಿಘರ್ ನಾಗರಿಕರು ಮತ್ತು ಇತರೆ ಮುಸ್ಲಿಂ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ನಡೆಸುವಲ್ಲಿ ಚೀನಾದ ಕೆಲವು ಕಂಪನಿಗಳ ಪಾತ್ರವಿದೆ ಎಂದು ಆರೋಪಿಸಿ, ಅಂತಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಆದ್ರೆ ಅಮೆರಿಕದ ನಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚೀನಾ ಎಚ್ಚರಿಸಿದೆ.
ಕಾರಣವಿಲ್ಲದೇ ಚೀನಾದ ಉದ್ಯಮಗಳಿಗೆ ತಡೆಯೊಡ್ಡುವ ಮತ್ತು ಅಂತರರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ಪ್ರತಿಪಾದಿಸಿದೆ. ಅಲ್ಲದೇ ಚೀನಾ ತನ್ನ ಕಂಪನಿಗಳ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ನಿಶ್ಚಿತವಾಗಿ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಮೆರಿಕಾಗೆ ಎಚ್ಚರಿಕೆ ನೀಡಿದೆ.
ಪದ್ಮ ಪ್ರಶಸ್ತಿಗೆ ಅಸಾಧಾರಣ ಕೆಲಸ ಮಾಡಿರುವ ಸೂಕ್ತ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ: ಪ್ರಧಾನಿ ಮೋದಿ
ಇನ್ನೂ ಇದೇ ವೇಳೆ ಕ್ಸಿನ್‌ಜಿಯಾಂಗ್‌ನಲ್ಲಿ ಬಲವಂತವಾಗಿ ಕಾರ್ಮಿಕರನ್ನು ಬಂಧಿಸಿರುವ ಆರೋಪವನ್ನು ಚೀನಾ ಅಲ್ಲಗಳೆದಿದೆ. ಕ್ಸಿಯಾಂಗ್‌ನಲ್ಲಿರುವ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ಸಾಮೂಹಿಕ ಬಂಧನ ಮತ್ತು ಉನ್ನತ-ತಂತ್ರಜ್ಞಾನದೊಂದಿಗೆ ಕಣ್ಗಾವಲನ್ನು ಸಕ್ರಿಯಗೊಳಿಸಲು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಂಸ್ಥೆಗಳು ಮತ್ತು ಇತರ ವ್ಯವಹಾರಗಳು ಚೀನಾಗೆ ನೆರವು ನೀಡುತ್ತಿವೆ ಎಂದು ಅಮೆರಿಕದ ವಾಣಿಜ್ಯ ಇಲಾಖೆ ಶುಕ್ರವಾರ ಹೇಳಿಕೆಯಲ್ಲಿ ಆರೋಪಿಸಿತ್ತು. ಆದ್ರೆ ಈ ಸಂಬಂಧಿತವಾಗಿ ಚೀನಾ ಯಾವುದೇ ರೀತಿಯಾದ ಸ್ಪಷ್ಟ ಉತ್ತರ ನೀಡಿಲ್ಲ.
ಪಾಕಿಸ್ತಾನದಲ್ಲಿ ಕೋವಿಡ್ 4ನೇ ಅಲೆ ಆತಂಕ – ಮತ್ತೆ ಲಾಕ್ ಡೌನ್ ಘೋಷಣೆಗೆ ಒತ್ತಾಯ
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..