ಪಾಕಿಸ್ತಾನದಲ್ಲಿ ಕೋವಿಡ್ 4ನೇ ಅಲೆ ಆತಂಕ – ಮತ್ತೆ ಲಾಕ್ ಡೌನ್ ಘೋಷಣೆಗೆ ಒತ್ತಾಯ  

1 min read

ಪಾಕಿಸ್ತಾನದಲ್ಲಿ ಕೋವಿಡ್ 4ನೇ ಅಲೆ ಆತಂಕ – ಮತ್ತೆ ಲಾಕ್ ಡೌನ್ ಘೋಷಣೆಗೆ ಒತ್ತಾಯ

ಪಾಕಿಸ್ತಾನದಲ್ಲಿ ಕೋವಿಡ್ 4 ನೇ ಅಲೆಯ ಆತಂಕ ಶುರುವಾಗಿದೆ.. ಸತತ ಮೂರು ವಾರಗಳಿಂದ ಕೋವಿಡ್‌ ಪ್ರಕರಣಗಳು ಮೂರು ಪಟ್ಟು ಹೆಚ್ಚು ವರದಿಯಾಗುತ್ತಿದೆ.. ಈ ನಡುವೆ ನಾಲ್ಕನೇ ಅಲೆಯ ಅನುಮಾನ ವ್ಯಕ್ತವಾಗಿದೆ..

ಅಧಿಕೃತ ನಿವಾಸ ತೆರವುಗೊಳಿಸಿದ ಇಸ್ರೇಲ್‌ ಮಾಜಿ ಪ್ರಧಾನಿ ನೆತನ್ಯಾಹು

ಅಲ್ಲದೇ ದೇಶದಲ್ಲಿ ಎಲ್ಲಾ ವ್ಯವಹಾರಗಳು ,ಪ್ರವಾಸೋದ್ಯಮ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ್ದು, ಮತ್ತೆ ಜನ ಮಾಸ್ಕ್ ಧರಿಸದೇ , ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗ್ತಿದೆ.. ಸರ್ಕಾರ ಮತ್ತೆ ಲಾಕ್‌ ಡೌನ್‌ ಘೋಷಿಸಬೇಕು. ಈದುಲ್‌ ಅಜ್ಹಾವನ್ನು ಆರೋಗ್ಯ ಸಂಬಂಧಿತ ನಿರ್ಬಂಧಗಳೊಂದಿಗೆ ಸರಳವಾಗಿ ಆಚರಿಸಬೇಕು ಎಂದು ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.

ಚೀನಾ ಲಸಿಕೆ ಪಡೆದ ಥಾಯ್ಲೆಂಡ್‌ ನ 600 ವೈದ್ಯಕೀಯ ಕಾರ್ಯಕರ್ತರಿಗೆ ಕೊರೊನಾ ಪಾಸಿಟಿವ್  

ಅಲ್ಲದೇ ದೇಶದಲ್ಲಿ ಸೋಂಕು ದೃಢ ಪ್ರಮಾಣವು ಶೇಕಡ 4.09 ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 30ರ ಬಳಿಕ ಮೊದಲ ಬಾರಿ ಸೋಂಕು ದೃಢ ಪ್ರಮಾಣವು ಶೇಕಡ 4ಕ್ಕಿಂತ ಹೆಚ್ಚಿದೆ. ದೇಶದಲ್ಲಿ ಒಟ್ಟು 9,73,284 ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 27 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ಧಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 22,582ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ.

ದಾಂಪತ್ಯದ ಜೀವನದಲ್ಲಿ ಸಮಸ್ಯೆಗಳು ಕಂಡುಬಂದರೆ ತಪ್ಪದೆ ಈ ದೋಷ ಪರಿಹರಿಸಿಕೊಳ್ಳಿ..!!

ಮೋದಿ ಸಂಪುಟದಲ್ಲಿ ಶೇ.42ರಷ್ಟು ಕ್ರಿಮಿನಲ್ಸ್ : ಎಡಿಆರ್ ವರದಿ

ಯೋಗಿನಾಡಲ್ಲಿ ಪೊಲೀಸರ ಮೇಲೆ ಬಿಜೆಪಿಗರ ಹಲ್ಲೆ, ಕೈಯಲ್ಲಿ ಬಾಂಬ್

ಲಖನೌದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಜು.17 ರಿಂದ ಶಬರಿಮಲೆ ಅಯ್ಯಪ್ಪ ದೇವಾಲಯ ಓಪನ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd