ಮೋದಿ ಸಂಪುಟದಲ್ಲಿ ಶೇ.42ರಷ್ಟು ಕ್ರಿಮಿನಲ್ಸ್ : ಎಡಿಆರ್ ವರದಿ
ನವದೆಹಲಿ : ಮೊನ್ನೆಯಷ್ಟೆ ನಡೆದ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಿದ್ದು, 43 ಸಂಸದರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಿಗೆ ಈಗಾಗಲೇ ಖಾತೆ ಹಂಚಿಕೆ ಕೂಡ ನಡೆದಿದೆ. ಇದೀಗ ಮೋದಿ ಸಂಪುಟದಲ್ಲಿ ಶೇಕಡಾ 42 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಕೇಸ್ ಇರುವುದು ಬಹಿರಂಗವಾಗಿದೆ.
ಎಡಿಆರ್ ವರದಿ ಪ್ರಕಾರ ಕೇಂದ್ರ ಸಂಪುಟದಲ್ಲಿ ಶೇ. 90ರಷ್ಟು ಸಚಿವರು ಕೋಟ್ಯಾಧಿಪತಿಗಳಿದ್ದು, 78 ಸಚಿವರ ಪೈಕಿ 33 ಮಂತ್ರಿಗಳು ಮೇಲೆ ಕ್ರಿಮಿನಲ್ ಕೇಸ್ ಇದೆ. ಈ 33 ಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ನಾಲ್ವರ ವಿರುದ್ಧ ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ.
ಸಚಿವ ನಿಸಿತ್ ಪ್ರಮಾಣಿಕ್, ಜಾನ್ ಬರ್ಲಾ, ಪಂಕಜ್ ಚೌಧರಿ ಹಾಗೂ ವಿ. ಮುರಳೀಧರನ್ ವಿರುದ್ಧ ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುವುದಾಗಿ ಘೋಷಣೆ ಮಾಡಿದ್ದಾರೆ.