ಅಧಿಕೃತ ನಿವಾಸ ತೆರವುಗೊಳಿಸಿದ ಇಸ್ರೇಲ್ ಮಾಜಿ ಪ್ರಧಾನಿ ನೆತನ್ಯಾಹು
ಇಸ್ರೇಲ್ ನಲ್ಲಿ 12 ವರ್ಷದ ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಅಧಿಕೃತ ನಿವಾಸವನ್ನು ಭಾನುವಾರ ತೆರವುಗೊಳಿಸಿದರು. ಅಧಿಕಾರ ಕಳೆದುಕೊಂಡ ಒಂದೂ ತಿಂಗಲಾದ್ರೂ ಸಹ ನೆತನ್ಯಾಹು ಇಷ್ಟು ದಿನಗಳ ಕಾಲ ಅಧಿಕೃತ ನಿವಾಸದಲ್ಲೇ ಇದ್ದರು.. ಅಲ್ಲದೇ ಅಧಿಕಾರ ಹೋದ್ರೂ ಇಷ್ಟು ಸುದೀರ್ಘ ಅವಧಿಗೆ ಅಧಿಕೃತ ನಿವಾಸದಲ್ಲೇ ಉಳಿದಿದ್ದ ಮಾಜಿ ಪ್ರಧಾನಿ ಎಂಬ ಕುಖ್ಯಾತಿಗೆ ನೆತನ್ಯಾಹು ಪಾತ್ರರಾಗಿದ್ದಾರೆ.
ಚೀನಾ ಲಸಿಕೆ ಪಡೆದ ಥಾಯ್ಲೆಂಡ್ ನ 600 ವೈದ್ಯಕೀಯ ಕಾರ್ಯಕರ್ತರಿಗೆ ಕೊರೊನಾ ಪಾಸಿಟಿವ್
ಇಸ್ರೇಲ್‌ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಅವರು ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಬಳಿಕ ಬೆಂಜಮಿನ್ ಅವರು ಜೆರುಸಲೇಂನಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸಿದ್ದಾರೆ. ಶನಿವಾರ ತಡರಾತ್ರಿ ನೆತನ್ಯಾಹು ಅವರ ಕುಟುಂಬವು ಬಾಲ್ಫೋರ್ ಸ್ಟ್ರೀಟ್ ನಲ್ಲಿರುವ ನಿವಾಸದಿಂದ ಹೊರ ನಡೆದಿದ್ದಾರೆ ಎಂದು ನೆತನ್ಯಾಹು ವಕ್ತಾರರು ತಿಳಿಸಿದ್ಧಾರೆ.