ಯೋಗಿನಾಡಲ್ಲಿ ಪೊಲೀಸರ ಮೇಲೆ ಬಿಜೆಪಿಗರ ಹಲ್ಲೆ, ಕೈಯಲ್ಲಿ ಬಾಂಬ್ BJP
ಲಖನೌ : ಬ್ಲಾಕ್ ಪಂಚಾಯಿತಿ ಅಧ್ಯಕ್ಷರ ಚುನಾವಣೆ ವೇಳೆ ಉತ್ತರ ಪ್ರದೇಶದಲ್ಲಿ ಭಾರಿ ಹಿಂಸಾಚಾರ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಅವರು ಕೈಯಲ್ಲಿ ಬಾಂಬ್ ಹಿಡಿದುಕೊಂದಿದ್ದರು ಎಂದು ಆಪಾದಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಇಟಾವಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಹಿರಿಯ ಅಧಿಕಾರಿಗೆ ಘಟನಾ ಸ್ಥಳದಿಂದ ಫೋನ್ ಮೂಲಕ ಮಾಹಿತಿ ನೀಡುತ್ತಿದ್ದು, ಬಿಜೆಪಿ ಬೆಂಬಲಿಗರ ಕೈಯಲ್ಲಿ ಬಾಂಬ್ ಇತ್ತು ಎಂದೂ ಆಪಾದಿಸುತ್ತಾರೆ.
https://twitter.com/i/status/1413793417356713990
ಈ ಘಟನೆ ಲಖನೌ ಜಿಲ್ಲೆಯ ಬಾರ್‍ಪುರ ಬ್ಲಾಕ್‍ನಲ್ಲಿ ನಡೆದಿದೆ. ಈ ಸಂಬಂಧ ಗುರುತಿಸಲಾಗಿರುವ ಒಬ್ಬ ವ್ಯಕ್ತಿಯ ವಿರುದ್ಧ ಹಾಗೂ ಗುರುತು ಪತ್ತೆಯಾಗದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.