ಜನಸಂಖ್ಯೆ ನಿಯಂತ್ರಣಕ್ಕ ಮದುವೆಯನ್ನೇ ನಿಷೇಧಿಸಿ ಬಿಡಿ – ಯುಪಿ ಸರ್ಕಾರವನ್ನ ಟೀಕಿಸಿದ ಬರಾಕ್..!
ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯ ನಾಥ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಜನಸಂಖ್ಯಾ ನಿಯಂತ್ರಣ ಮಸೂದೆ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿದೆ.. ವಿಪಕ್ಷಗಳು ಯೋಗಿ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನ ಮಾಡ್ತಾಯಿದ್ದಾರೆ.. ಈ ನಡುವೆ ಸಮಾಜವಾದಿ ಪಕ್ಷದ ಸಂಸದ ಶಾಫೀಕ್ ಉರ್ ರೆಹಮಾನ್ ಬಾರಕ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ , ಇದು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿಯ ಪ್ರಚಾರದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ದೇ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದರೆ, ರಾಜ್ಯ ಸರ್ಕಾರ ವಿವಾಹಗಳನ್ನೇ ನಿಷೇಧಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ. ಜನಸಂಖ್ಯೆ ನಿಯಂತ್ರಿಸಲು ವಿವಾಹ ನಿಷೇಧಿಸುವುದೇ ಉತ್ತಮ. ಮುಂದಿನ 20 ವರ್ಷಗಳವರೆಗೆ ಯಾರೂ ಮದುವೆಯಾಗಬಾರದು ಎಂದು ಕಾನೂನು ತಂದರಾಯಿತು. ಆಗ ಮಕ್ಕಳ ಜನನದ ವಿಚಾರವೇ ಬರುವುದಿಲ್ಲವಲ್ಲ ಎಂದು ಜನಸಂಖ್ಯಾ ನೀತಿಯನ್ನು ಟೀಕಿಸಿದ್ದಾರೆ.
ಚೀನಾ ಕಂಪನಿಗಳನ್ನ ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕಾ – ಸೇಡು ತೀರಿಸಿಕೊಳ್ಳೋದಾಗಿ ಎಚ್ಚರಿಸಿದ ಚೀನಾ
ಅಲ್ಲದೇ ಇದೆಲ್ಲ ಬಿಜೆಪಿಯವರು ಚುನಾವಣೆ ಪ್ರಚಾರಕ್ಕಾಗಿ ಜಾರಿಗೆ ತಂದಿರುವ ಮಸೂದೆ. ಅವರು ಎಲ್ಲ ವಿಚಾರವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೆ. ಆ ಪಕ್ಷದವರು ಕೈಗೊಳ್ಳುವ ನಿರ್ಧಾರಗಳು ಚುನಾವಣೆ ಗೆಲ್ಲುವ ಉದ್ದೇಶವನ್ನು ಹೊಂದಿರುತ್ತವೆಯೇ ಹೊರತು ಜನರ ಹಿತವನ್ನು ಒಳಗೊಂಡಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಅವರ ಎಲ್ಲ ನಿರ್ಧಾರಗಳು ಚುನಾವಣಾ ಕೇಂದ್ರೀಕೃತವಾಗಿರುತ್ತವೆ. ಅಲ್ಲಾಹ್ ನ ಆಶೀರ್ವಾದದಿಂದ, ಅವರು ಚುನಾವಣೆಯಲ್ಲಿ ಗೆಲ್ಲಲು ನಾವು ಬಿಡುವುದಿಲ್ಲ ಎಂದಿದ್ದಾರೆ.