ADVERTISEMENT
Friday, June 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Karavali Karnataka

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ – ಇಲ್ಲಿದೆ ಮಹತ್ವದ ಮಾಹಿತಿ

Shwetha by Shwetha
July 14, 2021
in Karavali Karnataka, Newsbeat, ಎಸ್ ಸ್ಪೆಷಲ್, ನ್ಯೂಸ್ ಬೀಟ್
Kerala State board plans no changes in SSLC Plus Two exam
Share on FacebookShare on TwitterShare on WhatsappShare on Telegram

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ – ಇಲ್ಲಿದೆ ಮಹತ್ವದ ಮಾಹಿತಿ

ಇದೇ ಜುಲೈ 19 ಮತ್ತು ಜುಲೈ 22ರಂದು ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಜುಲೈ 19 ಸೋಮವಾರ ಕೋರ್ ವಿಷಯ ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದ್ದರೆ ಗುರುವಾರ ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

Related posts

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

June 19, 2026
ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

June 19, 2026

ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ನೀಡಲಾಗುತ್ತದೆ. ಒಎಮ್‌ಆರ್ ಶೀಟ್‌ನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್ ಮಾಡಿ ಮೌಲ್ಯಮಾಪನ ಮಾಡುವುದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ತುಂಬಬೇಕು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ಕುರಿತು ತಿಳಿದುಕೊಳ್ಳಲೇಬೇಕಾದ ವಿಷಯ ಇಲ್ಲಿದೆ.
puc
1. ಮೂರು ವಿಷಯಗಳಿಗೆ ಸಂಬಂಧಿಸಿದಂತೆ ತಲಾ 40 ಪ್ರಶ್ನೆಗಳಿರುತ್ತವೆ. ಮೂರು ವಿಷಯ ಆಧಾರಿತ ಒಟ್ಟು 120 ಪ್ರಶ್ನೆಗಳಿಗೆ ಅನುಗುಣವಾಗಿ ಪ್ರತ್ಯೇಕ ಮೂರು ಒಎಂಆರ್ ಶೀಟ್‌ ಅನ್ನು ನೀಡಲಾಗುತ್ತದೆ.

2. ಮೂರು ವಿಷಯಕ್ಕೆ ಬಣ್ಣವನ್ನು ಆಧರಿಸಿ ಒಎಂಆರ್ ಶೀಟ್ ನೀಡಲಾಗುತ್ತದೆ. ಗಣಿತಕ್ಕೆ ಪಿಂಕ್, ವಿಜ್ಞಾನಕ್ಕೆ ಆರೆಂಜ್, ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ.
ಭಾಷಾ ವಿಷಯಗಳಲ್ಲಿ ಪ್ರಥಮ ಭಾಷೆಗೆ ಪಿಂಕ್, ದ್ವಿತೀಯ ಭಾಷೆಗೆ ಆರೆಂಜ್, ತೃತೀಯ ಭಾಷೆಗೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ.

3. ಒಎಂಆರ್ ಶೀಟ್ ಅನ್ನು ಬಹಳ ಜಾಗರೂಕತೆಯಿಂದ ವಿದ್ಯಾರ್ಥಿಗಳು ಬಳಸಬೇಕು. ಯಾವುದೇ ಕಾರಣಕ್ಕೂ ಒಎಂಆರ್ ಶೀಟ್ ‌ಗೆ ಪಿನ್ ನಿಂದ ಚುಚ್ಚುವುದು, ಮಡಚುವುದು, ಹರಿಯುವುದು ಮಾಡಬಾರದು.

4. ಒಎಂಆರ್ ಶೀಟ್‌ನಲ್ಲಿ ಕೊಟ್ಟಿರುವ ಬಹು ಆಯ್ಕೆಯ ಉತ್ತರದ ವೃತ್ತವನ್ನು ತುಂಬುವಾಗ ಸಹ ಎಚ್ಚರಿಕೆಯಿಂದ ತುಂಬಬೇಕು.

5. ಒಂದು ಪ್ರಶ್ನೆಗೆ ಯಾವುದೇ ಕಾರಣಕ್ಕೂ ಎರಡು ಉತ್ತರವನ್ನು ಆಯ್ಕೆ ಮಾಡಬಾರದು.

6. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಯಾವುದೇ ಕಾರಣಕ್ಕೂ ವೈಟನರ್ ಅನ್ನು ಬಳಸಬಾರದು ಎಂದು ಸೂಚಿಸಿದೆ.
7. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಗೈರು ಹಾಜರಾತಿ (ಎಬಿ) ವೃತ್ತವನ್ನು ತುಂಬಬಾರದು.

8. ಒಎಂಆರ್ ಶೀಟ್ ನಲ್ಲಿ ಪ್ರಶ್ನೆ ಪತ್ರಿಕೆ ವಿಷಯ, ಪರೀಕ್ಷಾ ಕೇಂದ್ರದ ವಿವರ, ವಿದ್ಯಾರ್ಥಿಯ ವಿವರ ಮತ್ತು ಭಾವಚಿತ್ರ ವಿವರ ನೀಡಲಾಗಿದೆ. ಒಎಂಆರ್ ಶೀಟ್‌ನಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯ ಭಾವಚಿತ್ರ ಪ್ರಕಟವಾಗದಿದ್ದರೆ, ಪರೀಕ್ಷೆ ಪರಿವೀಕ್ಷಕರು ವಿದ್ಯಾರ್ಥಿಯಿಂದ ಭಾವಚಿತ್ರ ಸಂಗ್ರಹಿಸಿ ಅಂಟಿಸಿ ಅದರ ಮೇಲೆ ವಿದ್ಯಾರ್ಥಿಯ ಸಹಿ ಪಡೆಯಬೇಕು. ಪೋಟೋ ಅನ್ನು ಯಾವುದೇ ಕಾರಣಕ್ಕೂ ಪಿನ್ ಮಾಡಬಾರದು.

9. ಒಎಂಆರ್ ಶೀಟ್‌ನಲ್ಲಿ ಕೊಟ್ಟಿರುವ ಉತ್ತರ ಆಯ್ಕೆಯ ವೃತ್ತವನ್ನು ಕಪ್ಪು ಮತ್ತು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ತುಂಬಬೇಕು.

10. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರ ನೀಡಿದ್ದು, ಅದರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು.

11. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

12. ಪ್ರಶ್ನೆ ಕ್ರಮ ಸಂಖ್ಯೆ 1 ರಿಂದ 40 ವರೆಗೆ ಗಣಿತ, 41 ರಿಂದ 80 ರ ವರೆಗೆ ವಿಜ್ಞಾನ, 80 ರಿಂದ 120 ರ ವರೆಗೆ ಸಮಾಜ ವಿಜ್ಞಾನ ಪ್ರಶ್ನೆಸಂಖ್ಯೆಯಾಗಿವೆ.

13. ಭಾಷಾ ವಿಷಯಗಳಿಗೆ ಸಹ ಇದೇ ನಿಯಮ ಅನ್ವಯವಾಗಲಿದೆ. ಪ್ರತಿ ವಿಷಯಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಮತ್ತು ಪ್ರತ್ಯೇಕ ಒಎಂಆರ್ ಶಿಟ್ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ‌ನೀಡಿದೆ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

ಮಸಾಲೆ ಪೋಡಿ ಇಡ್ಲಿ#Saakshatv #cookingrecipe #masalapodiidli https://t.co/3git9QLggt

— Saaksha TV (@SaakshaTv) July 11, 2021

ಕಫದ ಸಮಸ್ಯೆಗೆ ಪರಿಣಾಮಕಾರಿ ‌ಮನೆಮದ್ದು#Saakshatv #healthtips #homeremedies https://t.co/wCwrSzf1GU

— Saaksha TV (@SaakshaTv) July 12, 2021

https://twitter.com/SaakshaTv/status/1414438195593420813?s=19

https://twitter.com/SaakshaTv/status/1414382278688575493?s=19

https://twitter.com/SaakshaTv/status/1414789775039533059?s=19

#Karnataka #sslcexam

Tags: Karnataka sslc exam
ShareTweetSendShare
Join us on:

Related Posts

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

by Shwetha
June 19, 2026
0

ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇದು ಇಡೀ ದಕ್ಷಿಣ ಭಾರತದ ಪಾಲಿನ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಾವು ನೆರೆ...

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

by Shwetha
June 19, 2026
0

ರೈತರ ವಾಹನಗಳ ಮೇಲೆ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಹಾಗೂ ಕೃಷಿ ವಾಹನಗಳಿಗೆ ಟೋಲ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಜೂನ್...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಅರ್ಜಿ ನಮೂನೆಯಲ್ಲಿ ಬದಲಾವಣೆ; ಹೆಚ್ಚುವರಿ ಮಾಹಿತಿಗೆ ಸರ್ಕಾರ ಸಿದ್ಧತೆ

by Shwetha
June 19, 2026
0

ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ಅರ್ಜಿ ನಮೂನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲು ಮುಂದಾಗಿದೆ. ಪ್ರಸ್ತುತ ಅರ್ಜಿ ನಮೂನೆಯಲ್ಲಿ ಫಲಾನುಭವಿಯ ಹೆಸರು, ವಿಳಾಸ, ಆಧಾರ್...

ಪಾಕಿಸ್ತಾನಿಗಳಿಂದ ಲೈಂಗಿಕ ಶೋಷಣೆ ಪ್ರಕರಣಗಳ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ; ಕಠಿಣ ಕ್ರಮಕ್ಕೆ ಆಗ್ರಹ

ಪಾಕಿಸ್ತಾನಿಗಳಿಂದ ಲೈಂಗಿಕ ಶೋಷಣೆ ಪ್ರಕರಣಗಳ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ; ಕಠಿಣ ಕ್ರಮಕ್ಕೆ ಆಗ್ರಹ

by Shwetha
June 19, 2026
0

ಬ್ರಿಟನ್ ಸಂಸದ ರೂಪರ್ಟ್ ಲೋವ್ ಅವರು ಪಾಕಿಸ್ತಾನ ಮೂಲದ ಪುರುಷರಿಂದ ಬ್ರಿಟನ್‌ನಲ್ಲಿ ನಡೆದಿರುವ ಲೈಂಗಿಕ ಶೋಷಣೆ ಪ್ರಕರಣಗಳ ಕುರಿತು ಸಂಸತ್ತಿನಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ...

ಮಂಡ್ಯ ಮೇಡಂಗೆ ಟಿಕೆಟ್ ಕೊಟ್ಟಿದ್ರೆ ನಾವೇನು ಬೇಡ ಅಂತಿದ್ವಾ? ಸುಮಲತಾ ಪರ ಬ್ಯಾಟ್ ಬೀಸಿದ ರೇವಣ್ಣ! ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿ: ರೇವಣ್ಣ ಅವರ ಈ ಅಚ್ಚರಿ ಮಾತಿನ ಹಿಂದಿದೆಯೇ ದೊಡ್ಡ ಪ್ಲಾನ್?

ಮಂಡ್ಯ ಮೇಡಂಗೆ ಟಿಕೆಟ್ ಕೊಟ್ಟಿದ್ರೆ ನಾವೇನು ಬೇಡ ಅಂತಿದ್ವಾ? ಸುಮಲತಾ ಪರ ಬ್ಯಾಟ್ ಬೀಸಿದ ರೇವಣ್ಣ! ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿ: ರೇವಣ್ಣ ಅವರ ಈ ಅಚ್ಚರಿ ಮಾತಿನ ಹಿಂದಿದೆಯೇ ದೊಡ್ಡ ಪ್ಲಾನ್?

by Shwetha
June 19, 2026
0

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಾಗೂ ರಾಜ್ಯ ರಾಜಕೀಯದ ಬೆಳವಣಿಗೆಗಳ ಕುರಿತು ಮಾಜಿ ಸಚಿವ ಮತ್ತು ಶಾಸಕ ಹೆಚ್ ಡಿ ರೇವಣ್ಣ ಅವರು ಇಂದು ವಿಧಾನಸೌಧದಲ್ಲಿ ಸ್ಫೋಟಕ ಹೇಳಿಕೆಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram