ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ – ಇಲ್ಲಿದೆ ಮಹತ್ವದ ಮಾಹಿತಿ
ಇದೇ ಜುಲೈ 19 ಮತ್ತು ಜುಲೈ 22ರಂದು ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಜುಲೈ 19 ಸೋಮವಾರ ಕೋರ್ ವಿಷಯ ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದ್ದರೆ ಗುರುವಾರ ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.
ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ನೀಡಲಾಗುತ್ತದೆ. ಒಎಮ್‌ಆರ್ ಶೀಟ್‌ನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್ ಮಾಡಿ ಮೌಲ್ಯಮಾಪನ ಮಾಡುವುದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ತುಂಬಬೇಕು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ಕುರಿತು ತಿಳಿದುಕೊಳ್ಳಲೇಬೇಕಾದ ವಿಷಯ ಇಲ್ಲಿದೆ.
1. ಮೂರು ವಿಷಯಗಳಿಗೆ ಸಂಬಂಧಿಸಿದಂತೆ ತಲಾ 40 ಪ್ರಶ್ನೆಗಳಿರುತ್ತವೆ. ಮೂರು ವಿಷಯ ಆಧಾರಿತ ಒಟ್ಟು 120 ಪ್ರಶ್ನೆಗಳಿಗೆ ಅನುಗುಣವಾಗಿ ಪ್ರತ್ಯೇಕ ಮೂರು ಒಎಂಆರ್ ಶೀಟ್ ಅನ್ನು ನೀಡಲಾಗುತ್ತದೆ.
2. ಮೂರು ವಿಷಯಕ್ಕೆ ಬಣ್ಣವನ್ನು ಆಧರಿಸಿ ಒಎಂಆರ್ ಶೀಟ್ ನೀಡಲಾಗುತ್ತದೆ. ಗಣಿತಕ್ಕೆ ಪಿಂಕ್, ವಿಜ್ಞಾನಕ್ಕೆ ಆರೆಂಜ್, ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ.
ಭಾಷಾ ವಿಷಯಗಳಲ್ಲಿ ಪ್ರಥಮ ಭಾಷೆಗೆ ಪಿಂಕ್, ದ್ವಿತೀಯ ಭಾಷೆಗೆ ಆರೆಂಜ್, ತೃತೀಯ ಭಾಷೆಗೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ.
3. ಒಎಂಆರ್ ಶೀಟ್ ಅನ್ನು ಬಹಳ ಜಾಗರೂಕತೆಯಿಂದ ವಿದ್ಯಾರ್ಥಿಗಳು ಬಳಸಬೇಕು. ಯಾವುದೇ ಕಾರಣಕ್ಕೂ ಒಎಂಆರ್ ಶೀಟ್ ಗೆ ಪಿನ್ ನಿಂದ ಚುಚ್ಚುವುದು, ಮಡಚುವುದು, ಹರಿಯುವುದು ಮಾಡಬಾರದು.
4. ಒಎಂಆರ್ ಶೀಟ್‌ನಲ್ಲಿ ಕೊಟ್ಟಿರುವ ಬಹು ಆಯ್ಕೆಯ ಉತ್ತರದ ವೃತ್ತವನ್ನು ತುಂಬುವಾಗ ಸಹ ಎಚ್ಚರಿಕೆಯಿಂದ ತುಂಬಬೇಕು.
5. ಒಂದು ಪ್ರಶ್ನೆಗೆ ಯಾವುದೇ ಕಾರಣಕ್ಕೂ ಎರಡು ಉತ್ತರವನ್ನು ಆಯ್ಕೆ ಮಾಡಬಾರದು.
6. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಯಾವುದೇ ಕಾರಣಕ್ಕೂ ವೈಟನರ್ ಅನ್ನು ಬಳಸಬಾರದು ಎಂದು ಸೂಚಿಸಿದೆ.
7. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಗೈರು ಹಾಜರಾತಿ (ಎಬಿ) ವೃತ್ತವನ್ನು ತುಂಬಬಾರದು.
8. ಒಎಂಆರ್ ಶೀಟ್ ನಲ್ಲಿ ಪ್ರಶ್ನೆ ಪತ್ರಿಕೆ ವಿಷಯ, ಪರೀಕ್ಷಾ ಕೇಂದ್ರದ ವಿವರ, ವಿದ್ಯಾರ್ಥಿಯ ವಿವರ ಮತ್ತು ಭಾವಚಿತ್ರ ವಿವರ ನೀಡಲಾಗಿದೆ. ಒಎಂಆರ್ ಶೀಟ್‌ನಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯ ಭಾವಚಿತ್ರ ಪ್ರಕಟವಾಗದಿದ್ದರೆ, ಪರೀಕ್ಷೆ ಪರಿವೀಕ್ಷಕರು ವಿದ್ಯಾರ್ಥಿಯಿಂದ ಭಾವಚಿತ್ರ ಸಂಗ್ರಹಿಸಿ ಅಂಟಿಸಿ ಅದರ ಮೇಲೆ ವಿದ್ಯಾರ್ಥಿಯ ಸಹಿ ಪಡೆಯಬೇಕು. ಪೋಟೋ ಅನ್ನು ಯಾವುದೇ ಕಾರಣಕ್ಕೂ ಪಿನ್ ಮಾಡಬಾರದು.
9. ಒಎಂಆರ್ ಶೀಟ್‌ನಲ್ಲಿ ಕೊಟ್ಟಿರುವ ಉತ್ತರ ಆಯ್ಕೆಯ ವೃತ್ತವನ್ನು ಕಪ್ಪು ಮತ್ತು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ತುಂಬಬೇಕು.
10. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರ ನೀಡಿದ್ದು, ಅದರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು.
11. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
12. ಪ್ರಶ್ನೆ ಕ್ರಮ ಸಂಖ್ಯೆ 1 ರಿಂದ 40 ವರೆಗೆ ಗಣಿತ, 41 ರಿಂದ 80 ರ ವರೆಗೆ ವಿಜ್ಞಾನ, 80 ರಿಂದ 120 ರ ವರೆಗೆ ಸಮಾಜ ವಿಜ್ಞಾನ ಪ್ರಶ್ನೆಸಂಖ್ಯೆಯಾಗಿವೆ.
13. ಭಾಷಾ ವಿಷಯಗಳಿಗೆ ಸಹ ಇದೇ ನಿಯಮ ಅನ್ವಯವಾಗಲಿದೆ. ಪ್ರತಿ ವಿಷಯಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಮತ್ತು ಪ್ರತ್ಯೇಕ ಒಎಂಆರ್ ಶಿಟ್ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಸಾಲೆ ಪೋಡಿ ಇಡ್ಲಿ#Saakshatv #cookingrecipe #masalapodiidli https://t.co/3git9QLggt
— Saaksha TV (@SaakshaTv) July 11, 2021
ಕಫದ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದು#Saakshatv #healthtips #homeremedies https://t.co/wCwrSzf1GU
— Saaksha TV (@SaakshaTv) July 12, 2021
ತೊಂಡೆಕಾಯಿ ಮಂಚೂರಿ#Saakshatv #cookingrecipe #thondekayi #Manchurian https://t.co/vVb0KeKRvS
— Saaksha TV (@SaakshaTv) July 12, 2021
ಆಧಾರ್ ಕಾರ್ಡ್ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು/ಸೇರಿಸುವುದು ಹೇಗೆ?#aadhaarcard https://t.co/ay0o2Ylx9B
— Saaksha TV (@SaakshaTv) July 12, 2021
ಬಾಳೆಕಾಯಿ ಮಸಾಲಾ ಪರೋಟ#Saakshatvcookingrecipe https://t.co/qLse8WK2n1
— Saaksha TV (@SaakshaTv) July 13, 2021
#Karnataka #sslcexam