ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಪಾಕಿಸ್ತಾನ : ವಕೀಲರ ಮೇಲೆ ದಾಳಿ ಮಾಡಿದ 2 ಸಾಕು ನಾಯಿಗಳಿಗೆ ಮರಣ ದಂಡನೆ – VIDEO VIRAL

Namratha Rao by Namratha Rao
July 14, 2021
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಪಾಕಿಸ್ತಾನ : ವಕೀಲರ ಮೇಲೆ ದಾಳಿ ಮಾಡಿದ 2 ಸಾಕು ನಾಯಿಗಳಿಗೆ ಮರಣ ದಂಡನೆ – VIDEO VIRAL

ಪಾಕಿಸ್ತಾನ :  2 ಜರ್ಮನ್ ಶಪರ್ಡ್ ಗಳು ( ಸಾಕುನಾಯಿಗಳು) ಹಿರಿಯ ವಕೀಲರ   ಮೇಲೆ ದಾಳಿ ಮಾಡಿದ ಕಾರಣಕ್ಕೆ ನಾಯಿಗಳಿಗೆ ಮರಣ ದಂಡನೆ ವಿಧಿಸಲಾಗಿದೆ.. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ನಾಯಿಗಳು ದಾಳಿ ಮಾಡಿದ ಕಾರಣಕ್ಕೆ ಅವುಗಳ ಮಾಲೀಕನಿಗೆ ಸಂಕಷ್ಟ ಎದುರಾಗಿತ್ತು. ನಾಯಿಗಳು ಕಚ್ಚಿದ್ದಕ್ಕೆ ಅವುಗಳ ಮಾಲೀಕನನ್ನ ವಕೀಲರು ನ್ಯಾಯಾಲಯಕ್ಕೆ ಎಳೆತಂದಿದ್ದಾರೆ.

Related posts

subramanya-swamy-vratam-pooja-vidhi-benefits-kuja-dosha-remedy

Astro- ೧೧ ವಾರಗಳ ಸುಬ್ರಹ್ಮಣ್ಯ ಸ್ವಾಮಿ ಪೂಜಾ ವಿಧಾನ..!

August 12, 2026
ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

August 12, 2026

ಹೌದು.. ವಾಕಿಂಗ್ ವೇಳೆ ಹಿರಿಯ ವಕೀಲರ ಮೇಲೆ ನಾಯಿಗಳು ದಾಳಿ ಮಾಡಿವೆ. ಬಳಿಕ ಗಾಯಗೊಂಡಿರುವ ವಕೀಲ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದಾದ ನಂತರ ನಾಯಿಗಳ ಮಾಲೀಕ ಹಾಗೂ ವಕೀಲರು ಸೇರಿ ಒಪ್ಪಂದ ಮಾಡಿಕೊಂಡಿದ್ದು, ನಾಯಿಗಳ ಮರಣದಂಡನೆಗೆ  ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.. ಈ ಘಟನೆ ಕಳೆದ ತಿಂಗಳು ನಡೆದಿತ್ತು. ಕರಾಚಿಯ ಡಿಫೆನ್ಸ್‌ ಹೌಸಿಂಗ್ ಅಥಾರಿಟಿ ಪ್ರದೇಶದಲ್ಲಿ ಬೆಳಗ್ಗಿನ ತನ್ನ ದೈನಂದಿನ ವಾಕ್‌ ವೇಳೆ ಹಿರಿಯ ವಕೀಲ ಮಿರ್ಜಾ ಅಖ್ತರ್ ಅಲಿ ಅವರ ಮೇಲೆ ಅದೇ ಪ್ರದೇಶದ ನಿವಾಸಿ ಹುಮಾಯುನ್ ಖಾನ್ ಅವರ ಎರಡು ನಾಯಿಗಳು ದಾಳಿ ಮಾಡಿದ್ದವು.

ಕಾಲೇಜು ಪ್ರಾರಂಭಕ್ಕೆ ಇಂದೇ ದಿನಾಂಕ ಫಿಕ್ಸ್..?

ಅಖ್ತರ್ ಅಲಿ ಅವರ ಮೇಲೆ ದಾಳಿ ಮಾಡಿದ್ದ ನಾಯಿಗಳು ಬಳಿಕ ಇವರನ್ನು ನೆಲಕ್ಕುರುಳಿಸಿದ್ದವು. ಇದರಿಂದ ಇವರಿಗೆ ತೀವ್ರ ಗಾಯಗಳಾಗಿತ್ತು.ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜೊತೆಗೆ, ಇದು ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೂ ಹರಿದಾಡಿತ್ತು. ಅಲ್ಲದೆ, ಇದು ಬಹುತೇಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷ ತಳಿಗಳ ಶ್ವಾನಗಳನ್ನು ಯಾವುದೇ ಸೂಕ್ತ ತರಬೇತಿ ಇಲ್ಲದೆ ಜನವಸತಿ ಪ್ರದೇಶಗಳಲ್ಲಿ ಇಟ್ಟುಕೊಂಡಿದ್ದಕ್ಕೆ  ಮಾಲಿಕರ ವಿರುದ್ಧ ಹಲವರು  ಆಕ್ರೋಶ ಹೊರಹಾಕಿದ್ದರು.

ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ : VIDEO VIRAL

ಶ್ವಾನಗಳ ದಾಳಿಯಿಂದ ಮಿರ್ಜಾ ಅಖ್ತರ್ ಅವರು ಸಾಕಷ್ಟು ಗಾಯಗೊಂಡಿದ್ದರು. ಜೊತೆಗೆ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವ ನಿರ್ಧಾರಕ್ಕೂ ಇವರು ಬಂದಿದ್ದರು. ಆದರೆ, ಇದಾದ ಬಳಿಕ ಮನಸ್ಸು ಬದಲಾಯಿಸಿದ ಅಖ್ತರ್ ನ್ಯಾಯಾಲಯದ ಆಚೆಗೆ ಸಂಧಾನದ ಮೂಲಕ ಇದನ್ನು ಪರಿಹರಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು. ಜೊತೆಗೆ, ಕೆಲ ಷರತ್ತುಗಳೊಂದಿಗೆ ಶ್ವಾನಗಳ ಮಾಲಿಕ ಹುಮಾಯುನ್‌ ರನ್ನು ಕ್ಷಮಿಸುವುದಾಗಿ ಇವರು ಹೇಳಿದ್ದರು.

ಬೇಷರತ್ತಾಗಿ ಕ್ಷಮೆಯಾಚಿಸುವುದು, ಹುಮಾಯುನ್ ಮತ್ತು ಕುಟುಂಬ ಇನ್ನು ಮುಂದೆ ತಮ್ಮ ಮನೆಯಲ್ಲಿ ಯಾವುದೇ ಅಪಾಯಕಾರಿ ನಾಯಿಗಳನ್ನು ಇಟ್ಟಕೊಳ್ಳದೇ ಇರುವುದು, ದಾಳಿ ಮಾಡಿದ ಎರಡು ನಾಯಿಗಳಿಗೆ ತಕ್ಷಣ ಪಶುವೈದ್ಯರ ಮೂಲಕ ದಯಾಮರಣ ನೀಡುವುದು, ಹುಮಾಯುನ್ ಹೊಂದಿರುವ ಇತರ ಅಪಾಯಕಾರಿ ನಾಯಿಳನ್ನು ಆಶ್ರಯ ಕೇಂದ್ರಕ್ಕೆ ಬಿಡುವುದು. ಜೊತೆಗೆ, ಇತರ ಯಾವುದೇ ನಾಯಿಗಳು ಮನೆಯಲ್ಲಿ ಇದ್ದರೂ ಅವುಗಳನ್ನು ಕ್ಲಿಫ್ಟನ್ ಕಂಟೋನ್ಮೆಂಟ್ ಬೋರ್ಡ್ ನಲ್ಲಿ ನೋಂದಾಯಿಸಬೇಕು ಎಂಬ ಷರತ್ತಿನೊಂದಿಗೆ ಈ ಪ್ರಕರಣವನ್ನು ಇವರಿಬ್ಬರೇ ಇತ್ಯರ್ಥ ಮಾಡಿಕೊಂಡಿದ್ದಾರೆ.

Violent #Dogattack in #DHA Phase 7, Street number 14. #Karachi.#Pakistan pic.twitter.com/TxFhq6TiQL

— Asad Zaman 🇵🇰 (@asadweb) June 27, 2021

 

Tags: Dogspakisthanvideo viral
ShareTweetSendShare
Join us on:

Related Posts

subramanya-swamy-vratam-pooja-vidhi-benefits-kuja-dosha-remedy

Astro- ೧೧ ವಾರಗಳ ಸುಬ್ರಹ್ಮಣ್ಯ ಸ್ವಾಮಿ ಪೂಜಾ ವಿಧಾನ..!

by admin
August 12, 2026
0

ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ವ್ರತವು ಅತ್ಯಂತ ವೈಭವದಿಂದ ತುಂಬಿರುವ ಮತ್ತು ಭಕ್ತರ ಆಸೆಗಳನ್ನು ಪೂರೈಸುವ ದೈವಿಕ ಸೃಷ್ಟಿ. ಈ ಉಪವಾಸವು ಪರಮಶಿವುನಿಯ ಪುತ್ರ, ಜ್ಞಾನದಾತ ಸುಬ್ರಹ್ಮಣ್ಯ ಸ್ವಾಮಿಯ...

ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

by Shwetha
August 12, 2026
0

ವಿಧಾನ ಪರಿಷತ್ ಸಭಾಪತಿ ಹುದ್ದೆಯ ಗೌರವಕ್ಕೆ ಧಕ್ಕೆ ತಂದ ಸರ್ಕಾರದ ನಡೆಗೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ. 1956ರ ನಂತರ ರಾಜ್ಯದ ಇತಿಹಾಸದಲ್ಲೇ ಇಂತಹ...

‘ರಾಹುಲ್ ಗಾಂಧಿ ಚರ್ಚೆಯಿಂದ ಏಕೆ ಓಡಿಹೋಗುತ್ತಿದ್ದಾರೆ?’: ಕಿರಣ್ ರಿಜಿಜು

‘ರಾಹುಲ್ ಗಾಂಧಿ ಚರ್ಚೆಯಿಂದ ಏಕೆ ಓಡಿಹೋಗುತ್ತಿದ್ದಾರೆ?’: ಕಿರಣ್ ರಿಜಿಜು

by Shwetha
August 12, 2026
0

ಸಂಸತ್ತಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಪೊಲೀಸ್ ಕ್ರಮದ ಕುರಿತ ಚರ್ಚೆಯ ನಡುವೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್...

2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ರಾಮಲಿಂಗಾರೆಡ್ಡಿ

2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ರಾಮಲಿಂಗಾರೆಡ್ಡಿ

by Shwetha
August 12, 2026
0

2027ರ ವೇಳೆಗೆ ಎತ್ತಿನಹೊಳೆ ಯೋಜನೆಯ ನೀರು ಕೋಲಾರ ಜಿಲ್ಲೆಗೆ ಹರಿಯಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ...

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

by Shwetha
August 12, 2026
0

ಹೊಸ ದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಬಾಲಿವುಡ್ ನಟಿ ಹಾಗೂ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram