ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ : VIDEO VIRAL
ಮಹಾರಾಷ್ಟ್ರ : ಮದುವೆ ಸಂದರ್ಭಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ , ಮೆರವಣಿಗೆ, ಮಾಡಬೇಕು ಅನ್ನೋದು ಎಲ್ಲರ ಆಸೆಯಾರುತ್ತೆ.. ಆದ್ರೆ ಡಿಫರೆಂಟ್ ಆಗಿರಬೇಕು ಅನ್ನೋದಕ್ಕೆ ಅನೇಕರು ಎಡವಟ್ಟುಗಳನ್ನ ಮಾಡಿಕೊಂಡಿರೋದನ್ನು ನೋಡಿದ್ದೇವೆ.. ಇದೀಗ ಮಹಾಹಾರಾಷ್ಟ್ರದ ಪುಣೆಯಲ್ಲಿ ಮಧುಮಗಳೊಬ್ಬಳು ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಹೊರಟ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಅಲ್ಲದೇ ವಧುವಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
23 ವರ್ಷದ ವಧು ಎಸ್ ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಮೆರವಣಿಗೆ ಹೊರಟಿದ್ದಳು. ಪುಣೆ- ಸಾಸ್ವಾಡ್ ರಸ್ತೆಯಲ್ಲಿ ಕಾರು ಸಂಚರಿಸಿತ್ತು. ಇದನ್ನ ಪಾದಾಚಾರಿಯೊಬ್ಬರು ಮೊಬೈನಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಂತೆ ವಿಡಿಯೋ ವೈರಲ್ ಆಗಿದೆ.
https://twitter.com/i/status/1415157366383906818
ಈ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಅಡಿ ಕಾರಿನ ಮಾಲೀಕ, ಯುವತಿ, ಚಾಲಕ, ವಿಡಿಯೋಗ್ರಾಫರ್ ಮೇಲೆ ದಂಡ ವಿಧಿಸಿದ್ದಾರೆ. ಅದು ಅಲ್ಲದೇ ಕೊರೊನಾ ನಡುವೆಯೂ ಅಲ್ಲಿದ್ದವರು ರೂ ಮಾಸ್ಕ್ ಧರಿಸಿರಲಿಲ್ಲ ಎಂದು ಸಹ ಪೊಲೀಸರು ತಿಳಿಸಿದ್ದಾರೆ.