ಕೋವಿಡ್ ನಿಯಂತ್ರಣಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ..!
ಉತ್ತರಪ್ರದೇಶ : ಕೋವಿಡ್ ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಸಂಸದರು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಸಹೋಯ ಕೋರಿದ್ದಾರೆ. ಹೌದು.. ರಾಜ್ಯದಲ್ಲಿ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದ್ದಾರೆಂದು ಯೋಗಿ ಆದಿತ್ಯನಾಥ್ ಅವರನ್ನ ಶ್ಲಾಘಿಸಿರುವ ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ ಮಾಹಾಮಾರಿ ವಿರುದ್ಧ ಹೋರಾಡಲು ತಮಗೆ ನೆರವಾಗುವಂತೆ ಕೋರಿದ್ದಾರೆ.
ಕೊರೊನಾ ಸಂಕಷ್ಟ – ಈ ಬಾರಿಯೂ ಕನ್ವರ್ ಯಾತ್ರೆ ರದ್ದು
ಈ ಬಗ್ಗೆ ಟ್ವಿಟ್ ಮಾಡಿರುವ ಅವರು ‘ನಮ್ಮಲ್ಲಿ ಮೊದಲಿದ್ದವರು ಮಾಡಿರುವ ಅವ್ಯವಸ್ಥೆಯನ್ನು ಹೋಗಲಾಡಿಸಿ ಕೊರೋನಾ ಸೋಂಕು ತಡೆಗಟ್ಟಲು ಉತ್ತರ ಪ್ರದೇಶದ ಜನರು ಅವರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಮಗೆ ಸಾಲ ನೀಡಬಹುದೆ?’ ಎಂದು ಕೇಳಿದ್ದಾರೆ. ಅಲ್ಲದೇ ಮತ್ತೊಂದು ಟ್ವೀಟ್‌ನಲ್ಲಿ,’ಕೊರೋನಾ ಅಲೆಯನ್ನು ಹತ್ತಿಕ್ಕುವಲ್ಲಿ ಅವರ ಪರಿಣಾಮಕಾರಿ ನಿರ್ವಹಣೆಗಾಗಿ ಉತ್ತರ ಪ್ರದೇಶ ರಾಜ್ಯ ಮತ್ತು ಅದರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿಜಕ್ಕೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆ ರಾಜ್ಯದ ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಸೋಂಕಿಗೆ ಒಳಗಾದ ಜನರನ್ನು ರಕ್ಷಿಸಿ ಸೋಂಕು ತಡೆಗಟ್ಟುವ ಕ್ರಮ ಅದ್ಭುತ!’ ಎಂದಿದ್ದಾರೆ.
ಪಾಕಿಸ್ತಾನ : ವಕೀಲರ ಮೇಲೆ ದಾಳಿ ಮಾಡಿದ 2 ಸಾಕು ನಾಯಿಗಳಿಗೆ ಮರಣ ದಂಡನೆ – VIDEO VIRAL








