ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಮುಗಿದು ಹಲವು ದಿನಗಳೇ ಮುಗಿದಿದೆ. ಕೋಟಿಗೊಬ್ಬ-3 ಸಿನಿಮಾದ ಟ್ರೇಲರ್, ಹಾಡುಗಳಿಗಾಗಿ ಕಿಚ್ಚನ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತಿದ್ದಾರೆ. ಇದೀಗ ಚಿತ್ರತಂಡ ಬಾದ್ ಷಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಮೊದಲ ರಿಲಿಕಲ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದೆ.
#k3 title track lyrical video on 27th,10am.#AakaashaaneAdharisuva on @aanandaaudio pic.twitter.com/vrR9rqGv1a
— Kichcha Sudeepa (@KicchaSudeep) April 24, 2020
ಏಪ್ರಿಲ್ 27ರಂದು ಕೋಟಿಗೊಬ್ಬ-3 ಸಿನಿಮಾದ ‘ಆಕಾಶವೇ ಆರಾಧಿಸುವ’ ಎಂಬ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ. ಬೆಳಿಗ್ಗೆ 10 ಗಂಟೆ 1 ನಿಮಿಷಕ್ಕೆ ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವ್ಯಾಸರಾಜ್ ಈ ಹಾಡನ್ನು ಹಾಡಿದ್ದಾರೆ. ಕಿಚ್ಚ ಸುದೀಪ್ ಕೂಡ ಈ ವಿಚಾರವನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.








