ನಂಜನಗೂಡು ಜುಬಿಲೆಂಟ್ ಕಾರ್ಖಾನೆ ಕೊರೊನಾ ಪ್ರಕರಣ ಭೇದಿಸಲು ರಾಜ್ಯ ಸರ್ಕಾರ ಮುಂದಾಗಿದೆ.. ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಕೊವಿಡ್-19 ನಿಯಂತ್ರಣ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಹರ್ಷಗುಪ್ತಗೆ ಜವಾಬ್ದಾರಿ ವಹಿಸಿದ್ದಾರೆ.

ಜುಬಿಲೆಂಟ್ ಕಾರ್ಖಾನೆ ಕಾರ್ಮಿಕರಿಗೆ ಹೇಗೆ ಸೋಂಕು ಹರಡಿತು..? ಕಾರ್ಮಿಕರಿಗೆ ಕೊವಿಡ್-19 ಹರಡಲು ಕಾರಣವೇನು..? ಸೋಂಕು ಹರಡಲು ಕಾರ್ಖಾನೆಯ ಹಾಗೂ ಇತರ ಜವಾಬ್ದಾರಿ ಏನು..? ಎಂಬುದರ ಸಮಗ್ರ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವವಂತೆ ಆದೇಶ ಹೊರಡಿಸಿದ್ದಾರೆ..








