ನಾಳೆಯಿಂದ ಮತ್ತಷ್ಟು ಸಡಿಲಿಕೆ : ಯಾವುದಕ್ಕೆ ಅನುಮತಿ..? ಯಾವುದಕ್ಕೆ ನಿರ್ಬಂಧ..?
ಬೆಂಗಳೂರು : ನಾಳೆಗೆ ಮೂರನೇ ಹಂತದ ಅಲ್ ಲಾಕ್ ಅವಧಿ ಮುಗಿಯಲಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಇನ್ನಷ್ಟು ಲಾಕ್ ಡೌನ್ ಸಡಿಲಿಕೆಗೆ ನಿರ್ಧರಿಸಿದ್ದಾರೆ.
ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ರ ಕುರಿತು ಚರ್ಚೆ ನಡೆಸಿದರು. ಈ ಸಭೆಯಲ್ಲಿ ಅನ್ ಲಾಕ್ 4.0ರಲ್ಲಿ ಯಾವುದಕ್ಕೆ ಅನುಮತಿ ನೀಡಬೇಕು..? ಯಾವುದಕ್ಕೆ ನಿರ್ಬಂಧ ಹೇರಬೇಕು ಅನ್ನೋದ್ರ ಬಗ್ಗೆ ಚರ್ಚಿಸಲಾಗಿದೆ.
ಯಾವುದಕ್ಕೆಲ್ಲ ಅನುಮತಿ?
ಸಿನಿಮಾ ಮಂದಿರ ತೆರೆಯಲು 50 ಪಸೆರ್ಂಟ್ ಅನುಮತಿ
ಜುಲೈ 26ರಿಂದ ಪದವಿ ಕಾಲೇಜ್ ಓಪನ್ (ಒಂದು ಡೋಸ್ ವ್ಯಾಕ್ಸಿನ್ ಕಡ್ಡಾಯ)
ನೈಟ್ ಕಫ್ರ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ (ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕಫ್ರ್ಯೂ)
ಬಾರ್ ಗಳಲ್ಲಿ ಮಾತ್ರ ಮದ್ಯ ಸೇವನೆಗೆ ಶೇ.50 ರ ಮಿತಿ, 10 ತನಕ ಮದ್ಯ ಸೇವನೆಗೆ ಅವಕಾಶ
ಮದುವೆಗೆ 100 ಜನರ ಮಿತಿ, ಅಂತ್ಯ ಸಂಸ್ಕಾರಕ್ಕೆ 20 ಜನರ ಮಿತಿ ಮುಂದುವರಿಕೆ
ಜಾತ್ರೆ ಹೊರೆತುಪಡಿಸಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ
ಏನಿರಲ್ಲ?
ಈಜುಕೊಳಗಳಿಗೆ ನೋ ಪರ್ಮಿಷನ್
ಪಬ್ಗಳಲ್ಲಿ ಮದ್ಯ ಸೇವನೆ, ನೈಟ್ ಪಾರ್ಟಿಗಳಿಗೆ ಅವಕಾಶ ಇಲ್ಲ
ಒಳಾಂಗಣ ಚಿತ್ರೀಕರಣ ಮತ್ತು ಕ್ರೀಡಾಂಗಣಗಳಿಗೂ ಅನುಮತಿ ಇಲ್ಲ
ಮುಖ್ಯಮಂತ್ರಿಗಳ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಸಂಜೆ ವೇಳೆಗೆ ಅಧಿಕೃತ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ.