ಬೆಂಗಳೂರು: ಭಾನುವಾರ ಲಾಕ್‍ಡೌನ್ ಸೇರಿದಂತೆ ರಾಜ್ಯ ಸರ್ಕಾರ ಕೊರೊನಾ ಹೆಮ್ಮಾರಿ ತಡೆಗೆ ನಡೆಸುತ್ತಿರುವ ಪ್ರಯತ್ನಗಳು ಫಲ ನೀಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ನಿವಾಸದಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಡಿಸಿಎಂ ಅಶ್ವತ್ಥ ನಾರಾಯಣ್ ಜತೆ ತುರ್ತು ಸಭೆ ನಡೆಸಿದ ಯಡಿಯೂರಪ್ಪ, ಸಂಜೆಯೊಳಗೆ ಅಭಿಪ್ರಾಯ ತಿಳಿಸುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸದ್ಯ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಇದೊಂದೇ ಮಾರ್ಗ ಕೊರೊನಾ ತಡೆಯಲು ¸ಸಾಕಾಗುವುದಿಲ್ಲ. ಹೀಗಾಗ ಮುಂದಿನ 3 ವಾರ ಶನಿವಾರ ಹಾಗೂ ಭಾನುವಾರ ಎರಡು ದಿನ ಲಾಕ್‍ಡೌನ್ ಮಾಡಿದರೆ ಹೇಗೆ ಎಂದು ಯಡಿಯೂರಪ್ಪ ಸಚಿವರ ಮುಂದೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಬಗ್ಗೆ ಶೀಘ್ರವಾಗಿ ತಜ್ಞರ ಜತೆ ಚರ್ಚೆ ನಡೆಸಿ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್ಗೆ ವಿ.ಸೋಮಣ್ಣ ತಿರುಗೇಟು.
ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ...








