ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

“ನಿರ್ದೇಶಕರು ಸಿನಿಮಾ ಮಾಡಿದ್ರೇನೇ ನಟ ಸ್ಟಾರ್ ಆಗೋದು” : ದರ್ಶನ್ ವಿರುದ್ಧ ಪ್ರೇಮ್ ಬೇಸರ

Namratha Rao by Namratha Rao
July 18, 2021
in Cinema, Newsbeat, ಮನರಂಜನೆ
Jogi Prem
Share on FacebookShare on TwitterShare on WhatsappShare on Telegram

“ನಿರ್ದೇಶಕರು ಸಿನಿಮಾ ಮಾಡಿದ್ರೇನೇ ನಟ ಸ್ಟಾರ್ ಆಗೋದು” : ದರ್ಶನ್ ವಿರುದ್ಧ ಪ್ರೇಮ್ ಬೇಸರ

ಬೆಂಗಳೂರು : ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ  ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..

Related posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026
ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

March 5, 2026

ಈ ನಡುವೆ ಡಿ ಬಾಸ್ ಪರ ಅಭಿಮಾನಿಗಳು , ಕೆಲ ಸೆಲೆಬ್ರಿಟಿಗಳು , ರಾಜಕಾರಣಿಗಳು ಬೆಂಬಲಕ್ಕೆ ನಿಂತಿದ್ದಾರೆ.. ಆದ್ರೆ ಹಲವರು ದರ್ಶನ್ ಅವರ ಹೇಳಿಕೆಗಳ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ..  ಪ್ರಕರಣದ ನಡುವೆ ಹಲವರ ಹೆಸರುಗಳನ್ನ ತರಲಾಗ್ತಿರೋದು ಬೇಸರಕ್ಕೆ ಕಾರಣವಾಗಿದೆ..  ಈ ನಡುವೆ ದರ್ಶನ್ ಅವರು  ನಟ , ನಿರ್ದೇಶಕ  ಪ್ರೇಮ್  ಅವರ ಹೆಸರನ್ನೂ ಎಳೆತಂದು “ಪ್ರೇಮ್ ಏನು ದೊಡ್ಡ ಪುಡುಂಗಾ, ಅವನಿಗೇನು ಎರಡು ಕೊಂಬು ಇದ್ಯಾ..?” ಎಂದು ಪ್ರಶ್ನೆ ಮಾಡಿದ್ದಾರೆ.

ದರ್ಶನ್ ಅವರ ಈ ಮಾತಿನಿಂದ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಕೂಡ ಇದು  ತೀರಾ ಬೇಸರಗೊಂಡು ಇನ್ಸ್ಟಾಗ್ರಾಮ್ ನಲ್ಲಿಯೂ ಬೇಸರವನ್ನ ಹೊರಹಾಕಿದ್ದಾರೆ.. ಇದೇ ವಿಷಯವಾಗಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಪ್ರೇಮ್, ನಿರ್ದೇಶಕರ ಬಗ್ಗೆ ಪುಡಾಂಗ್ ಎಂದು ಹೇಳಿದ್ದು ನೋವಾಯ್ತು. ಅದಕ್ಕೆ ರಿಯಾಕ್ಟ್ ಮಾಡಿದೆ. ನಿರ್ದೇಶಕ ಸಿನಿಮಾ ಮಾಡಿದರೆ ನಟ ಸ್ಟಾರ್ ಆಗೋದು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ಇದೇ ವೇಳೆ ನಿರ್ದೇಶಕರ ಬಗ್ಗೆ ದರ್ಶನ್ ಪುಡಾಂಗ್ ಎಂದು ಹೇಳಿದ್ದಕ್ಕೆ ಬೇಸರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದೆ. ಅದನ್ನು ಬಿಟ್ಟು ದರ್ಶನ್‌ ಜೊತೆಗೆ ಬೇರೆ ಮನಸ್ತಾಪವಿಲ್ಲ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್ ಎಂದಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಮಾತನಾಡುವಾಗ ನೋಡಿಕೊಂಡು ಮಾತಾಡ್ಬೇಕು. ಮತ್ತೊಬ್ಬರಿಗೆ ಬೇಸರ ಉಂಟಾಗುವಂತೆ ಮಾತಾಡಬಾರದು, ನಾನು ಯಾರ ತಂಟೆಗೂ ಹೋಗೋದಿಲ್ಲ, ಆದರೆ ಸುಖಾಸುಮ್ಮನೆ ನನ್ನ ಹೆಸರು ಯಾಕೆ ತಂದರೋ ಗೊತ್ತಿಲ್ಲ ಎಂದಿದ್ದಾರೆ.

ಮೂರು ಬಿಟ್ಟವರ ಜೊತೆ ಏನು ಮಾತನಾಡೋದು : ದಾಸನ ವಿರುದ್ಧ ಇಂದ್ರಜಿತ್ ಕಿಡಿ

ಅಲ್ಲದೇ ಉಮಾಪತಿನ ಪರಿಚಯ ಮಾಡಿಕೊಟ್ಟಿದ್ದು ನಾನೇ, ಸಿನಿಮಾ ಮಾಡಬೇಕು ಅಂದುಕೊಂಡಿದ್ವಿ, ಆದರೆ ದಿ ವಿಲನ್ ಸಿನಿಮಾ ಡಿಲೇ ಆದ ಕಾರಣ ದರ್ಶನ್, ಉಮಾಪತಿ ಹಾಗೂ ನನ್ನ ಕಾಂಬಿನೇಷನ್ ಸಿನಿಮಾ ಆಗಲಿಲ್ಲ, ರಾಬರ್ಟ್ ಸಿನಿಮಾಗೆ ಮೊದಲು ವಿಶ್ ಮಾಡಿದ್ದು ನಾನೇ, ಆ ಸಿನಿಮಾ ಬಳಿಕವೂ ಐದಾರು ಬಾರಿ ದರ್ಶನ್ ಮತ್ತು ನಾನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ ಆಗೆಲ್ಲ ಚೆನ್ನಾಗಿಯೇ ಮಾತನಾಡಿದ್ದೆವೆ ಎಂದಿದ್ದಾರೆ. ಮುಂದುವರೆದು ದರ್ಶನ್ ಅಭಿಮಾನಿಗಳು ನನ್ನ ಕ್ಷಮೆ ಕೇಳೋದು ಬೇಡ. ನಟ, ನಿರ್ದೇಶಕ, ನಿರ್ಮಾಪಕ ಯಾರೇ ಆಗಲಿ ಬೆಳೆಯೋದ ಅಭಿಮಾನಿಗಳಿಂದ. ನಿನ್ನೆಯಿಂದ ಸಾಕಷ್ಟು ಮಂದಿ ಅಭಿಮಾನಿಗಳು ಸಂದೇಶ ಕಳಿಸುತ್ತಿದ್ದಾರೆ. ದರ್ಶನ್ ಯಾಕೆ ಹಾಗೆ ಮಾತನಾಡಿದರು ಗೊತ್ತಿಲ್ಲ. ಬೇಸರ ಮಾಡಿಕೊಳ್ಳಬೇಡಿ, ನಿಮ್ಮ ಹಾಗೂ ದರ್ಶನ್ ಕಾಂಬಿನೇಶನ್‌ ನಲ್ಲಿ ಸಿನಿಮಾ ಮಾಡಿ ಎನ್ನುತ್ತಿದ್ದಾರೆ ಎಂದಿದ್ದಾರೆ.

ಅಂದ್ಹಾಗೆ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಸುಧೀರ್ಘವಾಗಿ ಬರೆದುಕೊಂಡಿದ್ದ ಪ್ರೇಮ್ “ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ. Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ”.. ಎಂದು  ಸುಧೀರ್ಘವಾಗಿ ಬರೆದುಕೊಂಡು ಅಸಮಾದಾನ ಹೊರಹಾಕಿದ್ದರು.

ಸಿನಿಮಾಮಂದಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ನಾಳೆಯಿಂದ ಚಿತ್ರಮಂದಿರಗಳು ಓಪನ್

‘ಪುಡಾಂಗ್’ ಎಂದು ನನ್ನ ಬಗ್ಗೆ ಹೇಳಿದ್ದು ಸರಿಯಲ್ಲ : ಜೋಗಿ ಪ್ರೇಮ್

ಡಿ ಬಾಸ್ ವಿರುದ್ಧ ಬೇಸರ ಹೊರಹಾಕಿದ ರಕ್ಷಿತಾ..!

 

Tags: DarshanIndrajith LankeshPremSandalwood
ShareTweetSendShare
Join us on:

Related Posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

by Shwetha
March 5, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram