ADVERTISEMENT
Sunday, June 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಡಿ ಬಾಸ್ ವಿರುದ್ಧ ಬೇಸರ ಹೊರಹಾಕಿದ ರಕ್ಷಿತಾ..!

Namratha Rao by Namratha Rao
July 18, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಡಿ ಬಾಸ್ ವಿರುದ್ಧ ಬೇಸರ ಹೊರಹಾಕಿದ ರಕ್ಷಿತಾ..!

ಬೆಂಗಳೂರು: ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ  ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..darshan

Related posts

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

June 28, 2026
ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

June 28, 2026

ಈ ನಡುವೆ ಡಿ ಬಾಸ್ ಪರ ಅಭಿಮಾನಿಗಳು , ಕೆಲ ಸೆಲೆಬ್ರಿಟಿಗಳು , ರಾಜಕಾರಣಿಗಳು ಬೆಂಬಲಕ್ಕೆ ನಿಂತಿದ್ದಾರೆ.. ಆದ್ರೆ ಹಲವರು ದರ್ಶನ್ ಅವರ ಹೇಳಿಕೆಗಳ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ..  ಪ್ರಕರಣದ ನಡುವೆ ಹಲವರ ಹೆಸರುಗಳನ್ನ ತರಲಾಗ್ತಿರೀಓದು ಬೇಸರಕ್ಕೆ ಕಾರಣವಾಗಿದೆ.. ಇದೀಗ ಸ್ಯಾಂಡಲ್ ವುಡ್ ನಟಿ ರಕ್ಷಿತಾ (ಪ್ರೇಮ್ ಪತ್ನಿ ) ನಿರ್ದೇಶಕ , ನಟ ಪ್ರೇಮ್ ಹೆಸರನ್ನ ಮಧ್ಯೆ ಎಳೆತಂದಿರೋದಕ್ಕೆ ದರ್ಶನ್ ವಿರುದ್ಧ ಬೇಸರ ಹೊರಹಾಕಿದ್ದಾರೆ.. ಚಿತ್ರರಂಗ ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ ಎಂದು  ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ದರ್ಶನ್ ವಿಚಾರದಲ್ಲಿ ಪ್ರೇಮ್ ಹೆಸರು ಥಳುಕು ಹಾಕಿಕೊಂಡಿದ್ದಕ್ಕೆ ಪ್ರೇಮ್ ಇನ್ಸ್ಟಾಗ್ರಾಮ್ ಮೂಲಕ ಬೇಸರ ಹೊರಹಾಕಿದ ಬೆನ್ನಲ್ಲೇ ರಕ್ಷಿತಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ರಕ್ಷಿತಾ ಕೂಡ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. “ ಕನ್ನಡ ಚಿತ್ರರಂಗ ನಮ್ಮದು, ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ. ಎಲ್ಲರೂ ಸಮಾನರು. ಆದರೆ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆಯೇ ಎಲ್ಲರಿಗೂ ಗೌರ ಕೊಡುತ್ತೇವೆ. ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ. ಇಲ್ಲಿ ದುರದೃಷ್ಟಕರ ಕೆಲವೊಂದು ವಿಚಾರಗಳು ತೆರೆದುಕೊಳ್ಳುತ್ತಿರುವುದು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತಿದೆ”  ಎಂದಿದ್ದಾರೆ.. ಅಂದ್ಹಾಗೆ ಇದಕ್ಕೂ ಮುನ್ನ ಪ್ರೇಮ್ ಅವರು ಕೂಡ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ  ಬಗ್ಗೆ  ಸುಧೀರ್ಘವಾಗಿ ಬರೆದು ಬೇಸರ ಹೊರಹಾಕಿದ್ದರು..

“ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ. Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ” ಎಂದು ಅಸಾಮಾಧಾನ ಹೊರಹಾಕಿದ್ದರು..

ಪ್ರೇಮ್ ಹೆಸರು ಮಧ್ಯೆ ತಂದಿದಕ್ಕೆ ಅಸಾಮಾಧಾನ : ‘ದರ್ಶನ್ ಅವ್ರೇ ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ’  – ನಿರ್ದೇಶಕ ಪ್ರೇಮ್

ದರ್ಶನ್ ಹಲ್ಲೆ ಪ್ರಕರಣ : ಹಲ್ಲೆಗೊಳಗಾದವನಿಗೆ ಸಹಾಯ ಮಾಡಿದ್ರೆ ದರ್ಶನ್ ದೊಡ್ಡವರಾಗ್ತಿದ್ದರು – ಇಂದ್ರಜಿತ್

“ದರ್ಶನ್ ವಿಚಲಿತರಾಗಿದ್ದಾರೆ, ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಲಿ” – ಇಂದ್ರಜಿತ್

ಹೋಟೆಲಲ್ಲಿ ಯಾರ್ ಜತೆ ಇದ್ರೀ.. ಗಂಡಸ್ತನ ಪ್ರೂವ್ ಮಾಡಕೋದ್ರಾ? : ದಾನಿಗೆ `ಇಂದ್ರ ಬಾಣ’

Tags: DarshanindrajithPremraksithaSandalwood
ShareTweetSendShare
Join us on:

Related Posts

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

by Shwetha
June 28, 2026
0

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಾಹನ ಪ್ರೇಮ ಇಡೀ ದೇಶಕ್ಕೇ ಗೊತ್ತು. ಅವರ ಬಳಿ ಇರುವ ಐಷಾರಾಮಿ ಕಾರುಗಳ ಸಾಲಿಗೆ ಈಗ ವಿಮಾನದಂತಹ...

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

by Shwetha
June 28, 2026
0

ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರೋಬ್ಬರಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಘೋಷಿಸುವ ಮೂಲಕ...

ಗ್ಯಾಂಗ್‌ಸ್ಟರ್ ಅವತಾರದಲ್ಲಿ ವಿನೋದ್ ಪ್ರಭಾಕರ್ ಅಬ್ಬರ: 80ರ ದಶಕದ ಭೂಗತ ಲೋಕಕ್ಕೆ ಮತ್ತೆ ಕರೆದೊಯ್ದ ಬಲರಾಮ

ಗ್ಯಾಂಗ್‌ಸ್ಟರ್ ಅವತಾರದಲ್ಲಿ ವಿನೋದ್ ಪ್ರಭಾಕರ್ ಅಬ್ಬರ: 80ರ ದಶಕದ ಭೂಗತ ಲೋಕಕ್ಕೆ ಮತ್ತೆ ಕರೆದೊಯ್ದ ಬಲರಾಮ

by Shwetha
June 28, 2026
0

2007 ರಲ್ಲಿ ತೆರೆಕಂಡ ಆ ದಿನಗಳು ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಮೈಲಿಗಲ್ಲು. ರಕ್ತಪಾತವಿಲ್ಲದೆಯೂ ಭೂಗತ ಲೋಕದ ಕಥೆಯನ್ನು ಎಷ್ಟು ಕಲಾತ್ಮಕವಾಗಿ ಹೇಳಬಹುದು ಎಂದು ನಿರ್ದೇಶಕ...

ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪೊಲೀಸರಿಗೆ ಬಿತ್ತು ಪೆಟ್ಟು : ಪ್ರದೀಪ್ ಈಶ್ವರ್ ಹಾವಭಾವಕ್ಕೆ ಕೆರಳಿದ ಜೆಡಿಎಸ್ ಕಾರ್ಯಕರ್ತರು

ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪೊಲೀಸರಿಗೆ ಬಿತ್ತು ಪೆಟ್ಟು : ಪ್ರದೀಪ್ ಈಶ್ವರ್ ಹಾವಭಾವಕ್ಕೆ ಕೆರಳಿದ ಜೆಡಿಎಸ್ ಕಾರ್ಯಕರ್ತರು

by Shwetha
June 28, 2026
0

ಚಿಕ್ಕಬಳ್ಳಾಪುರ:ನಗರದ ಕನ್ನಡ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿತು. ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಹಾಗೂ ಅವರ ವಿರುದ್ಧ ಒಕ್ಕಲಿಗ...

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

by Shwetha
June 28, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ ಸಂಘಟನೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯೂತ್ ಕಾಂಗ್ರೆಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram