ಪ್ರೇಮ್ ಹೆಸರು ಮಧ್ಯೆ ತಂದಿದಕ್ಕೆ ಅಸಾಮಾಧಾನ : ‘ದರ್ಶನ್ ಅವ್ರೇ ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ’  – ನಿರ್ದೇಶಕ ಪ್ರೇಮ್

1 min read
Jogi Prem

ಪ್ರೇಮ್ ಹೆಸರು ಮಧ್ಯೆ ತಂದಿದಕ್ಕೆ ಅಸಾಮಾಧಾನ : ‘ದರ್ಶನ್ ಅವ್ರೇ ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ’  – ನಿರ್ದೇಶಕ ಪ್ರೇಮ್

ಬೆಂಗಳೂರು : ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ  ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..darshan

ಈ ನಡುವೆ ಡಿ ಬಾಸ್ ಪರ ಅಭಿಮಾನಿಗಳು , ಕೆಲ ಸೆಲೆಬ್ರಿಟಿಗಳು , ರಾಜಕಾರಣಿಗಳು ಬೆಂಬಲಕ್ಕೆ ನಿಂತಿದ್ದಾರೆ.. ಆದ್ರೆ ಹಲವರು ದರ್ಶನ್ ಅವರ ಹೇಳಿಕೆಗಳ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ.. ಇದೀಗ ನಟ , ನಿರ್ದೇಶಕ ಪ್ರೇಮ್  ಅವರು ‘ದಾಸ’ನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.   ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾರದಲ್ಲಿ ತನ್ನ ಹೆಸರು ಥಳುಕು ಹಾಕಿಕೊಂಡಿದ್ದಕ್ಕೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಬರೆದು ,  ನನಗೆ ಯಾವ ಕೊಂಬೂ ಬಂದಿಲ್ಲ. ಇನ್ನೊಬ್ರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತನಾಡಿ ಎಂದು ದರ್ಶನ್ ಗೆ ಸಲಹೆ ನೀಡಿದ್ದಾರೆ.

ಹೌದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಪ್ರೇಮ್  “ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ. Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ”.. ಎಂದು  ಸುಧೀರ್ಘವಾಗಿ ಬರೆದುಕೊಂಡು ಅಸಮಾದಾನ ಹೊರಹಾಕಿದ್ದಾರೆ.

ದರ್ಶನ್ ಹಲ್ಲೆ ಪ್ರಕರಣ : ಹಲ್ಲೆಗೊಳಗಾದವನಿಗೆ ಸಹಾಯ ಮಾಡಿದ್ರೆ ದರ್ಶನ್ ದೊಡ್ಡವರಾಗ್ತಿದ್ದರು – ಇಂದ್ರಜಿತ್

“ದರ್ಶನ್ ವಿಚಲಿತರಾಗಿದ್ದಾರೆ, ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಲಿ” – ಇಂದ್ರಜಿತ್

BIGGBOSS : 8 2ನೇ ಇನ್ನಿಂಗ್ಸ್ ನಲ್ಲಿ ಹೊರನಡೆದ 3ನೇ ಸ್ಪರ್ಧಿ ಪ್ರಿಯಾಂಕಾ..!  

ದೊಡ್ಮನೆ ಮುಂದೆ ನಾವು ಹುಲ್ಲಿಗೆ ಸಮ : ಪ್ರಾಪರ್ಟಿ ಬಗ್ಗೆ ದಾಸ ಸ್ಪಷ್ಟನೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd