BIGGBOSS : 8 2ನೇ ಇನ್ನಿಂಗ್ಸ್ ನಲ್ಲಿ ಹೊರನಡೆದ 3ನೇ ಸ್ಪರ್ಧಿ ಪ್ರಿಯಾಂಕಾ..!
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಅಲ್ವ ಸ್ವಲ್ಪ ಕಿರಿಕ್ ಮಾಡಿಕೊಂಡಿದ್ದ ಪ್ರಿಯಾಂಕಾ ತಿಮ್ಮೇಶ್ 2ನೇ ಇನ್ನಿಂಗ್ಸ್ ನಲ್ಲಿ ಮನೆಯಿಂದ ಆಚೆ ಹೋದ 3ನೇ ಸ್ಪರ್ಧಿಯಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದಾ ತಾಳ್ಮೆಯಿಂದ ವರ್ತಿಸುತ್ತಿದ್ದ ಪ್ರಿಯಾಂಕಾ ಇತ್ತೀಚೆಗೆ ಚಕ್ರವರ್ತಿ ಜೊತೆಗೆ ಕಿತ್ತಾಡಿಕೊಂಡಿದ್ದೇ ಹೆಚ್ಚು..
ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಆಗಾಗ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಕೆಲವು ಬಾರಿ ಚಕ್ರವರ್ತಿ ಅವರ ಜೊತೆ ಏರು ಧ್ವನಿಯಲ್ಲಿ ಜಗಳವನ್ನೂ ಮಾಡಿದ್ದಾರೆ. ಟಾಸ್ಕ್ ವಿಚಾರವಾಗಿ ಅನ್ಯಾಯ ನಡೆದಾಗಲೆಲ್ಲ ಪ್ರಿಯಾಂಕಾ ಅವರು ಧ್ವನಿ ಎತ್ತಿದ್ದಾರೆ. ಕ್ಯಾಪ್ಟನ್ ಕಂಟೆಸ್ಟೆಂಟ್ ಟಾಸ್ಕ್ ವೇಳೆ ಅರವಿಂದ್ ವಿರುದ್ಧ ಕಿಡಿಕಾರಿದ್ದರು. ಹೀಗೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಆ್ಯಕ್ಟಿವ್ ಆಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದ ಪ್ರಿಯಾಂಕಾ ಇದೀಗ ಎಲಿಮಿನೇಟ್ ಆಗುತ್ತಿದ್ದಾರೆ. ಈ ಹಿಂದೆ ನಿಧಿ ಮನೆಯಿಂದ ಹೊರಹೋಗುವಾಗ ಬಿಗ್ ಬಾಸ್ ಕೊಟ್ಟಿದ್ದ ಅಧಿಕಾರ ಬಳಸಿ ಪ್ರಿಯಾಂಕಾ ಅವರನ್ನು ಸೇವ್ ಮಾಡಿದ್ದರು. ಹೀಗಾಗಿ ಮತ್ತುಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಮುಂದುವರಿದಿದ್ದರು.