ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!

1 min read

ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!

ಏಷ್ಯಾದ ಅತ್ಯಂತ  ಸುಂದರ , ಹಾಗೂ ಅನೇಕ ಸಂಪ್ರದಾಯ ಪರಂಪರೆಗಳನ್ನ ಈಗಲೂ ಅನುಸರಿಸುತ್ತಾ ಬಂದಿರುವ ದೇಶ ಥೈಲ್ಯಾಂಡ್.. ಈ ದೇಶ ಪ್ರವಾಸಿಗರ ಹಾಟ್ ಫೇವರೇಟ್ ತಾಣ… ಅದ್ರಲ್ಲ ವಿಶ್ವಾದ್ಯಂತ ಪ್ರವಾಸಿಗರನ್ನ ತನ್ನತ್ತ ಆಕರ್ಶಿಸುವ  ಬ್ಯಾಂಗ್ ಕಾಕ್ ಇರುವುದು ಕೂಡ  ಇದೇ ದೇಶದಲ್ಲಿ.

ಈ ದೇಶದ ರಾಜಧಾನಿ ಬ್ಯಾಂಗ್ ಕಾಕ್ – ಮೋಜು ಮಸ್ತಿ , ಯುವಕರು ಪಾರ್ಟಿ ಮಾಡುತ್ತಾ ಕುಣಿದು ಕುಪ್ಪಳಿಸುವ , ಮೋಜು ಮಸ್ತಿಯ ತಾಣ ಈ ಬ್ಯಾಂಗ್ ಕಾಕ್. ಇಲ್ಲಿನ ನೈಟ್ ಲೈಫ್ , ಆಕರ್ಷಕ ಬೀಚ್ ಗಳು ಅಷ್ಟೇ ಅಲ್ಲ ಇಲ್ಲಿನ ಥೈ ಮಸಾಜ್ ವರ್ಲ್ಡ್ ಫೇಮಸ್..

ಈ ದೇಶದ ನಿಜವಾದ ಹೆಸರು ವಿಶ್ವದ ಅತಿ ಉದ್ದ ಹೆಸರು..   ಈ ಹೆಸರಿನಲ್ಲಿ 21 ಪದಗಳಿವೆ.. ಇಷ್ಟು ಉದ್ದವಾದ ಹೆಸರನ್ನ ಓದೋದಕ್ಕೂ ಸಾಕಷ್ಟು ಸಮಯ ಬೇಕಾಗುತ್ತೆ.. ಅಷ್ಟೇ ಅಲ್ಲ  ಇಲ್ಲಿನ ಜನರ ಹೆಸರುಗಳು ಸಹ  ತುಂಬಾನೇ ಉದ್ದವಾಗಿರುತ್ತೆ..  ಹೀಗಾಗಿ ಇಲ್ಲಿನ ಜನರು   ಅಡ್ಡ ಹೆಸರುಗಳಿಂದಲೇ  ಕರೆಯುತ್ತಾರೆ..

ದಕ್ಷಿಣ ಪೂರ್ವ ಏಷ್ಯಾದಲ್ಲಿ ಸ್ಥಿತವಾಗಿರುವ ಈ ದೇಶವನ್ನ ಮೊದಲಿಗೆ ಸಿಯಾಮ್ ಹೆಸರಿಂದ ಗಗುರುತಿಸಲಾಗುತ್ತಿತ್ತು. ನಂತರದ ವರ್ಷಗಳಿಗೆ ಹೆಸರು ಬದಲಾಯಿಸಿ ಥಾಯ್ ಲ್ಯಾಂಡ್ ಎಂದು ಮರು ನಾಮಕರಣ ಮಾಡಲಾಯ್ತು.

ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!  

ಥಾಯ್ ಲ್ಯಾಂಡ್ ಪದದ ಅರ್ಥ  ಸ್ವಾತಂತ್ರ್ಯ ಭೂಮಿ – ಹೌದು ಈ ದೇಶ ಎಂದಿಗೂ ಯಾರ ಅಧೀನಕ್ಕೂ ಒಳಪಡದೇ ಇರುವ ದೇಶಗಳಲ್ಲಿ ಒಂದು..  ಥಾಯ್ ಲ್ಯಾಂಡ್ ಹಾಗೂ ಭಾರತದ ನಡುವೆ ಅನೇಕ ಸ್ವಾಮ್ಯತೆಗಳಿವೆ.. ಆಚಾರ ವಿಚಾರಗಳು , ದೇವರಲ್ಲಿ ನಂಬಿಕೆ , ಪೂಜೆ ಪುನಸ್ಕಾರ , ಒಟ್ಟಾರೆ ಥಾಯ್ ಲ್ಯಾಂಡ್ ನ ಜನರು ಹಿಂದೂಗಳಂತೆಯೇ ಆಚರಣೆಗಳನ್ನ ಮಾಡುತ್ತಾರೆ.. ಇಲ್ಲಿಯಂತೆಯೇ ಅಲ್ಲಿಯೂ ಸಾಕಷ್ಟು ಮೂನಂಬಿಕೆಗಳಿವೆ. ಆದ್ರೆ ಎಲ್ಲಕ್ಕಿಂತ ವಿಶೇಷ ಅಂದ್ರೆ  ನಮ್ಮ ದೇಶದ ರೀತಿಯಲ್ಲೇ ಥಾಯ್ ಲ್ಯಾಂಡ್ ನಲ್ಲಿಯೂ ರಾಮಾಯಣವನ್ನ ಬೋಧನೆ ಮಾಡಲಾಗುತ್ತದೆ..

ಹೌದು.. ಈ ದೇಶದ ರಾಷ್ಟ್ರೀಯ ಗ್ರಂಥದ ಹೆಸರು ರಾಮ್ ಕಿಯೇರ್ , ಇದು ರಾಮಾಯಣದ ಥಾಯ್ ಸಂಸ್ಕರಣೆಯಾಗಿದೆ..      ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ. ಇಲ್ಲಿನ ಬಹುತೇಕರು ಬೌದ್ಧ ಧರ್ಮದ ಅನುಯಾಯಿಗಳಾಗಿದ್ದು,  ಈ ದೇಶ ಬುದ್ಧದ ಮಂದಿಗಳಿಗೆ ಪ್ರಸಿದ್ಧಿ ಪಡೆದಿದೆ.. ಆದ್ರೂ ವಿಸೇಷ ಅಂದ್ರೆ ಇಲ್ಲಿ ಇಂದಿಗೂ ರಾಮ – ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ಅಸಲಿಗೆ ಇಲ್ಲಿನ ರಾಜಪರಿವಾರ ತಮ್ಮನ್ನ ತಾವು ರಾಮನ ಮಗ ಕುಷ್ಕಾ ವಂಶಸ್ಥರು ಅಂತ ಪರಿಗಣಿಸುತ್ತಾರೆ.. ಈ ದೇಶದಲ್ಲಿ 40, 000 ಹೆಚ್ಚು ದೇವಾಲಯಗಳಿದ್ದು, ನಮ್ಮ ದೇಶದಂತೆಯೇ ಇಲ್ಲೂ ಮಂದಿರಗಳಲ್ಲಿ ಚಪ್ಪಲಿ – ಶೂ ಧರಿಸಿ ಪ್ರವೇಶ ಮಾಡುವ ಅನುಮತಿ ಇಲ್ಲ.

ಈ ದೇಶದಲ್ಲಿ ವಿಚಿತ್ರ ಎನಿಸುವಂತಹ ಕಾನೂನಿದೆ.. ಈ ದೇಶದಲ್ಲಿ ಯಾರೂ ಸಹ  ಒಳ ಉಡುಪುಗಳು ಇಲ್ಲದೇ ಕೇವಲ ಮೇಲೆ ಮಾತ್ರ ಬಟ್ಟೆಗಳನ್ನ ಧರಿಸಿ ರಸ್ತೆಗಿಳಿದ್ರೆ ಕಠಿಣ ಶಿಕ್ಷೆ ವಿಧಿಸಿ ಜೈಲಿಗೂ ಅಟ್ಟಲಾಗುತ್ತೆ.. ಅಂದ್ಹಾಗೆ ಒಳ ವಸ್ತ್ರಗಳನ್ನ ಧರಿಸಿಲ್ಲವೆಂದರೆ  ಅದನ್ನ ಕಂಡುಹಿಡಿಯೋದಕ್ಕೆ ಥಾಯ್ ಲ್ಯಾಂಡ್ ನಲ್ಲಿ ಎಲ್ಲೆಡೆ ಸ್ಕ್ಯಾನರ್ ಗಳನ್ನ ಅಳವಡಸಲಾಗಿದೆ..  ಇದೇ ಕಾರಣಕ್ಕೆ ಸುಮಾರು 3000 ಜನ ಪ್ರತಿ ವರ್ಷ ಸೆರೆವಾಸವನ್ನೂ ಅನುಭವಿಸುತ್ತಾರೆ..

ಇಲ್ಲಿನ ಕರೆನ್ಸಿ – ಥೈ ಭಾಟ್  : ಅಂದ್ರೆ 1 ಥೈ ಭಾಟ್ ಭಾರತದ ಸುಮಾರು 2.30 ರೂಪಾಯಿಗೆ ಸಮ

ಬಾರತದಲ್ಲಿಯೇ ಅತಿ ಹೆಚ್ಚು ಅಂದ ವಿಶ್ವಾಸ ಅಥವ ಮೂಡನಂಬಿಕೆಯಿದೆ ಎಂದು ಅನೇಕರು ಅಂದುಕೊಂಡಿದ್ದಾರೆ.. ಆದ್ರೆ ಥಾಯಯ್ ಲ್ಯಾಂಡ್ ಈ ವಿಚಾರದಲ್ಲಿ ಭಾರತಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ.. ಇಲ್ಲಿನ ಅನೇಕ ಜನರು ಭೂಪ ಪ್ರೇತಗಳಲ್ಲಿ ವಿಶ್ವಾವಿಟ್ಟುಕೊಂಡಿರುತ್ತಾರೆ.. ಸಾಲದಕ್ಕೆ ಎಷ್ಟೋ ಜನ ಭೂತ ಪ್ರೇತಗಳಿಗಾಗಿಯೇ ತಮ್,ಮ ಮನೆಗಳಲ್ಲಿ ವಿಶೇಷವಾಗಿ ಕೋಣೆಗಳನ್ನ ಕಟ್ಟಿಸಿರ್ತಾರೆ…

ಇನ್ನೂ ಭಾರತದಲ್ಲಿ ಹಿರಿಯರಿಗೆ , ದೊಡ್ಡವರಿಗೆ ಗೌರವ ಕೊಡುವುದಕ್ಕೆ ನಮಸ್ಕರಿಸುತ್ತೇವೆ.. ಆದ್ರೆ ಅಸಲಿಗೆ ಭಾರತಕ್ಕೆ ಎಷ್ಟೋ ಪಟ್ಟು ಅಧಿಕ  ಈ ಪದ್ದತಿಯನ್ನ ಥಾಯ್ ಲ್ಯಾಂಡ್ ಜನ ಅನುಸರಿಸುತ್ತಾರೆ.. ಅಷ್ಟೇ ಅಲ್ಲ ಅಲ್ಲಿನ ಜನರ ಪ್ರತಿನಿತ್ಯ ದಿನಚರಿಯ ಅವಿಭಾಜ್ಯ ಅಂಗ ಅಂದ್ರೂ ತಪ್ಪಾಗೋದಿಲ್ಲ.. ಇಲ್ಲಿನ ಜನ ತಮಗಿಂತ ಹಿರಿಯರು , ದೊಡ್ಡವರು ತಂದೆ ತಾಯಿ  ಎದುರು ಬಮದಾಗ ಅವರಿಗೆ ಗ್ರೀಟ್ ಮಾಡುವುದಕ್ಕೆ ತಲೆ ಹಾಗೂ ಅರ್ಧ ದೇಹವನ್ನ ಬಾಗಿಸಿ ನಮಸ್ಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಅವರ ಮುಮದೆ ಇರುವ ವ್ಯಕ್ತಿಯೂ ಅದೇ ರೀತಿ ಗ್ರೀಟ್ ಮಾಡುತ್ತಾರೆ…    

ಇಲ್ಲಿ ರಾಜಮನೆತನಕ್ಕೆ ಅಗೌರವ ಸೂಚಿಸಿದ್ರೆ , ಅವಮಾನಿಸಿದ್ರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ನಯಿಮ ವಿದೇಶಿಗರು , ಪ್ರವಾಸಿಗರಿಗೂ ಅನ್ವಯವಾಗುತ್ತದೆ.. ವಿಶ್ವದ ಅತಿ ದೊಡ್ಡ ಹಲ್ಲಿ ಅಥವ  ಉಡ ಹೆಚ್ಚಾಗಿ ಇರುವುದು ಇದೇ ದೇಶದಲ್ಲಿಯೇ.. ವಿಶ್ವದ ಅತಿ ದೊಡ್ಡ ಮೀನುಗಳು  ವೇಲ್ ಶಾರ್ಕ್ ಗಳು  ಹೆಚ್ಚಾಗಿರುವುದು ಇದೇ ದೇಶದಲ್ಲಿ.

ವಿಶ್ವದ ಅತಿ ಉದ್ದವಾದ ಹಾವು ಇರೋದು ಇದೇ ದೇಶದಲ್ಲಿ – ರೆಕ್ವಿಟ್ವಿಯೇಟೆಡ್ ಪೈಥಾನ್ ಇದರ ಹೆಸರು..

ವಿಶ್ವದ ಒಟ್ಟಾರೆ ಪಕ್ಷಿ ಪ್ರಜಾತಿಯ ಪಕ್ಷಿಗಳ 10 % ರಷ್ಟು ಥಾಯ್ ಲ್ಯಾಂಡ್ ನಲ್ಲಿವೆ..

ವಿಶ್ವದ ಅತ್ಯಂತ ದೊಡ್ಡ ಚಿನ್ನದ ಬುದ್ಧ ಈ ದೇಶದಲ್ಲಿದೆ – ಇದರ ತೂಕ ಬಂದು 5,500 ಕೆಜಿ – ಇದರ ಬೆಲೆ ನೂರಾರು ಮಿಲಿಯನ್ ಡಾಲರ್ ಗಳು

ಥೈಲ್ಯಾಂಡ್  ಸುಮಾರು 1300ಕ್ಕೂ ಹೆಚ್ಚು ದ್ವೀಪಗಳಿಂದ ಕೂಡಿದೆ. ಪ್ರತಿ ವರ್ಷ ೀ ದೇಶಕ್ಕೆ ಸುಮಾರು 6 ಮಿಲಿಯನ್ ಪ್ರವಾಸಿಗರು ಪ್ರವಾಸಕ್ಕೆ ಬರುತ್ತಾರೆ..

ಪ್ರವಾಸಿ ತಾಣಗಳು

ಬ್ಯಾಂಗ್ ಕಾಕ್ : ಸುತ್ತಲೂ ಬೀಚ್ ಗಳಿಂದ ಆವೃತವಾಗಿರುವ ಸುಂದರ ನಗರ .

ಇಲ್ಲಿನ  ಹೆಚ್ಚಿನ ಆಕರ್ಷಣೆ – ಸಫಾರಿ ವರ್ಲ್ಡ್ , ಮರೀನ್ ಪಾರ್ಕ್ ನಲ್ಲಿ ಡಾಲ್ಫಿನ್ ಗಳು ನಡೆಸುವ ಕಸರುತ್ತು ಮನಸೆಳೆದ್ರೆ, ಸಫಾರಿ ವರ್ಲ್ಡ್  ವಿಶ್ವದ ಅತಿ ದೊಡ್ಡ ಓಪನ್ ಮೃಗಾಲಯ

ಇನ್ನುಳಿದಂತೆ ಪಟ್ಟಾಯಾ, ಪುಕೆಟ್ , ಕಾವ್ ಲಾಕ್ , ಚಿಯಾಂಗ್ ಮೈ ಇನ್ನೂ ಅನೇಕ ಸುಂದಾರ ಪ್ರವಾಸಿ ತಾಣಗಳಿವೆ..

ಭಾರತದ ಆಪ್ತಮಿತ್ರ ರಾಷ್ಟ್ರ , ವಿಶ್ವದ ಶಕ್ತಿಶಾಲಿ ರಾಷ್ಟ್ರ , ವಿಶ್ವದ ಅತಿ ದೊಡ್ಡ ರಾಷ್ಟ್ರ ರಷ್ಯಾದ..! INTERESTING FACTS  

ಜಗತ್ತಿನ ಅತಿ ಶಕ್ತಿಶಾಲಿ ಪಾಸ್ ​ಪೋರ್ಟ್ಗಳ  ಪಟ್ಟಿ ರಿಲೀಸ್ : ಭಾರತಕ್ಕೆ ಎಷ್ಟನೇ ಸ್ಥಾನ..?

ಕೊಲಂಬಿಯಾ ಇಡೀ ವಿಶ್ವದ್ಯಂತ ನಶೆಯ ಕಾರಣಕ್ಕೆ ಕುಖ್ಯಾತಿ ಪಡೆದಿದೆ.. ಇಲ್ಲಿನ ಕರೆನ್ಸಿ ಮೌಲ್ಯ ಭಾರತದ ರೂಪಾಯಿಗಿಂತಲೂ ಕಡಿಮೆ – INTERESTING FACTS   

ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd