ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!
ವಿಶ್ವದ ಅತ್ಯಂತ ಅಪಾಯಕಾರಿ , ಅಸುರಕ್ಷಿತ ದೇಶವೆಂಬ ಕುಖ್ಯಾತಿ ಪಡೆದ್ರೂ , ಅಭೂತಪೂರ್ವ ಸೌಂದರ್ಯದಿಂದ ವಿಶ್ವದ ಗಮನ ತನ್ನತ್ತ ಸೆಳೆಯುವ ಸುಂದರ ದೇಶ.. ಈ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗುತ್ತೆ.. ಆದ್ರೆ ವಿಶ್ವದಲಲ್ಲಿ ಅತಿ ಹೆಚ್ಚು ಅಪಗಾತಗಳು ಆಗೋದು ಇದೇ ದೇಶದಲ್ಲೇ ಎನ್ನಲಾಗುತ್ತೆ. ಈ ದೇಶವನ್ನ ಬರ್ಗರ್ ಕಿಂಗ್ ಅಂತಲೇ ಕರೆಯಲಾಗುತ್ತೆ.. ಕಾರಣ ಇಲ್ಲಿನ ಜನ ದಿನದ ಮೂರೂ ಹೊತ್ತು ಬೇಕಿದ್ರೂ ಬರ್ಗರ್ ತಿಂದೇ ಕಾಲ ಕಳೆದುಬಿಡ್ತಾರೆ. ಹಾಗಾದ್ರೆ ಈ ದೇಶ ಯಾವುದು.. ಇಲ್ಲಿನ ವಿಶೇಷತೆಗಳೇನು..?
ಇಲ್ಲಿನ ಕರೆನ್ಸಿ ವೆನಿಜುಲಾನ್ ಬೊಲಿವಾರ್ – ಭಾರತದ ರೂಪಾಯಿ ಮೌಲ್ಯಕ್ಕೆ ಹೋಲಿಸಿದ್ರೆ ಈ ದೇಶದ ಕರೆನ್ಸಿಯ ಮೌಲ್ಯ ತೀರ ದುರ್ಬಲವಾಗಿದೆ. ಹಾಗೆ ನೋಡೋದಾದ್ರೆ ಇಡೀ ವಿಶ್ವದ ಅತ್ಯಂತ ದುರ್ಬಲ ಕರೆನ್ಸಿಗಳ ಪೈಕಿ ಮೊದಲನೇ ಸ್ತಾನದಲ್ಲಿದೆ. ಹೀಗಾಗಿ ಈ ದೇಶದಲ್ಲಿ ಬಾರತೀಯರು ಆರಾಮಾಗಿ ಪ್ರವಾಸಕ್ಕೆ ತೆರಳಿ ಎಂಜಾಯ್ ಮಾಡಬಹುದು.. ಆನ್ ಲೈನ್ ನಲ್ಲಿ ವೀಸಾ ಅಪ್ಲೈ ಮಾಡಿ ಸರಿಯಾದ ಡಾಕ್ಯುಮೆಂಟ್ಸ್ ಗಳನ್ನ ನೀಡಿದ್ರೆ 30-40 ದಿನಗಳ ಒಳಗೆ ವೀಸಾ ದೊರರೆಯುತ್ತದೆ.
ಆದ್ರೆ ತೀರ ಶಾಕಿಂಗ್ ಫ್ಯಾಕ್ಟ್ ಅಂದ್ರೆ ಇಲ್ಲಿನ ಕರೆನ್ಸಿ ಭಾರತದ ಸುಮಾರು 1,570 ರೂಪಾಯಿಗೆ ಸಮ ಈ ದೇಶಕ್ಕೆ ಹೋಲಿಸಿದ್ರೆ ಭಾರತ ಶ್ರೀಮಂತ ರಾಷ್ಟ್ರ.. ಭಾರತದ ಕರೆನ್ಸಿ ಕೂಡ ಪವರ್ ಫುಲ್.
ಈ ಸುಂದರ ದೇಶದ ಹೆಸರು ವೆನೆಜುಲ್ಲಾ. ಇಲ್ಲಿನ ಸೌಂದರ್ಯ ಈ ದೇಶದ ಪ್ರತೀಕ ಅಂದ್ರೂ ತಪ್ಪಾಗಲಾರದು.. ಈ ದೇಶದ ಕೆಲ ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಯೋಣ..
ಈ ದೇಶದ ಅಧಿಕೃತ ಹೆಸರು – ಬೋಲಿವಾರಿಯನ್ ರಿಪಬ್ಲಿಕ್ ಆಫ್ ವೆನೆಜುಲ್ಲಾ
ಈ ದೇಶದ ಜನಸಂಖ್ಯೆ ಸುಮಾರು 2 ಕೋಟಿ 85 ಲಕ್ಷ , ವಿಶೇಷ ಅಂದ್ರೆ ಶೇ 100 % ಜನರು ನಗರದಲ್ಲಿವೇ ವಾಸವಾಗಿದ್ದಾರೆ. ಇಲ್ಲಿನ ಜನಸಂಖ್ಯೆಯ ಪೈಕಿ ಅತಿ ಹೆಚ್ಚು ಮಂದಿ 29 ವಯಸ್ಸಿನ ಒಳಗಿನವರೇ ಆಗಿದ್ದಾರೆ. ರಾಜಧಾನಿ – ಕಾರಾಕಸ್.
ವಿಶ್ವಕ್ಕೆ ಅತಿ ಹೆಚ್ಚು ವಿಶ್ವ ಸುಂದರಿಯರನ್ನು ಕೊಟ್ಟ ದಾಖಲೆ ಈ ದೇಶದ ಹೆಸರಿನಲ್ಲಿದೆ.. ಇಲ್ಲಿಯ ವರೆಗೂ ವೆನೆಜುಲ್ಲಾದವರು 6 ಬಾರಿ ಮಿಸ್ ವರ್ಲ್ಡ್ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ.
ವೈಲ್ಡ್ ಲೈಫ್ ಗೆ ಬೆಸ್ಟ್ ದೇಶ ಇದು.. ಈ ದೇಶದಲ್ಲಿ ಸುತ್ತಲೂ ಬರಿ ಕಾಡು ಗಿಡ ಮರಗಳೇ ಕಾಣಿಸುತ್ತವೆ. ಅತಿ ಹೆಚ್ಚು ಕಾಡುಪ್ರಾಣಿಗಳು ಕಾಣಿಸುತ್ತವೆ.. ಈ ದೇಶದಲ್ಲಿ ಅತಿ ಹೆಚ್ಚು ಇಲಿಗಳು ಹಾಗೂ ಮೊಲಗಳು ನೋಡಲಿಕ್ಕೆ ಸಿಗುತ್ವೆ.
ಆದ್ರೂ ಇಷ್ಟೆಲ್ಲಾ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಈ ದೇಶವನ್ನ ಇಡೀ ವಿಶ್ವದ ಅತಿ ಹೆಚ್ಚು ಡೇಂಜರಸ್ / ಅಪಾಯಕಾರಿ ರಾಷ್ಟ್ರ ಎಂದು ಪರಿಗಣಿಸಲಾಗುತ್ತೆ.. ಕಾರಣ ಕ್ರೈಮ್ ರೇಟ್…
ಕೆಲ ಅಧ್ಯಯನಗಳು ವರದಿಗಳ ಪ್ರಕಾರ ಪ್ರತಿ ಲಕ್ಷ ಜನರ ಪೈಕಿ 8 ಜನರನ್ನ ಗುಂಡಿಟ್ಟು ಕೊಲೆ ಮಾಡಲಾಗುತ್ತೆ.. ಈ ವಿಚಾರದಲ್ಲಿ ಮೊದಲನೇ ಸ್ತಾನದಲ್ಲಿ ಹಾಂಡ್ರಸ್ ನ ನಂತರ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಯಾವಾಗ ಯಾರಿಗೆ ಯಾವ ಕಾರಣಕ್ಕೆ ಗುಮಡು ಹಾರಿಸಲಾಗುತ್ತೆ ಅನ್ನೋದನ್ನೂ ಹೇಳೋದಕ್ಕೆ ಆಗಲ್ಲ.. ಇಲ್ಲಿ ಬಹುತೇಕರ ಬಳಿ ಗನ್ ಗಳು ಇರುತ್ತವೆ.. ಪರವಾನಗಿ ಇದ್ರೂ ಇಲ್ಲದೇ ಇದ್ರೂ ಬಹುತೇಕ ಎಲ್ಲರ ಬಳಿ ಗನ್ ಇರುತ್ತೆ ಎನ್ನಲಾಗುತ್ತೆ.
ಇಂದು ನಮ್ಮ ಭಾರತದಲ್ಲಿ ಅತಿ ದೊಡ್ಡ ಸಮಸ್ಯೆ ಅಂದ್ರೆ ಪೆಟ್ರೋಲ್ ಬೆಲೆ ಏರಿಕೆ 100 ರ ಗಡಿ ದಾಟಿದೆ ಪೆಟ್ರೋಲ್ ಬೆಲೆ.. ಹಾಗೆಯೇ ಅನೇಕ ದೇಶಗಳಲ್ಲಿ ಪೆಟ್ರೋಲ್ ದರ ಹೆಚ್ಚಾಗಿದೆ.. ಆದ್ರೆ ಈ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗುತ್ತೆ. ಕಾರಣ ಈ ದೇಶದಲ್ಲಿ ಪೆಟ್ರೋಲ್ ಹೇರಳವಾಗಿ ಲಭ್ಯವಿದೆ.. ಈ ದೇಶದಿಂದ ಸುಮಾರು 80 % ಪೆಟ್ರೋಲ್ ರಸ್ಫು ಮಾಡಲಾಗುತ್ತೆ. ಆದ್ರೆ ಇಡೀ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆಯಲ್ಲಿ ಈ ದೇಶ 4ನೇ ಸ್ಥಾನದಲ್ಲಿದೆ.
ಬರ್ಗರ್ ಈ ದೇಶದ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗ ಅಂದ್ರೂ ತಪ್ಪಾಗೋದಿಲ್ಲ.. ಈ ದೇಶದ ಜನರು ದಿನ ಮೂರೂ ಹೊತ್ತು ಬೇಕಿದ್ರೂ ಬರ್ಗರ್ ತಿಂದೇ ಕಾಲ ಕಳೆದುಬಿಡ್ತಾರೆ. ಒಟ್ಟಾರೆ ಜನಸಂಖ್ಯೆಯ ಶೇ 88 ರಷ್ಟು ಜನರು ದಿನಕ್ಕೆ ಒಂದು ಬಾರಿಯಾದ್ರೂ ಬರ್ಗರ್ ಮೀಲ್ ಸೇವಿಸುತ್ತಾರೆ ಎಂದು ಸರ್ವೆ ಒಂದರಲ್ಲಿ ತಿಳಿಸಲಾಗಿದೆ.
ಇಡೀ ವಿಶ್ವದ ಅತಿ ಎತ್ತರದ ಜಲಪಾತ ಇರೋದು ಇದೇ ದೇಶದಲ್ಲಿ. ಈ ಫಾಲ್ಸ್ ಅನ್ನ ಏಂಜಲ್ಸ್ ಫಾಲ್ಸ್ ಅಂತ ಕರೆಯಲಾಗುತ್ತೆ… ಇದು ಕನಾಯಿಮಾ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಿತವಾಗಿದೆ. ಸುಮಾರು 979 ಮೀ ಎತ್ತರದಿಂದ ನೀರು ಕೆಲಗೆ ಹರಿಯುತ್ತೆ. ಈ ಜಲಪಾತ ನೋಡೋರ ಕಣ್ಣಿಗೆ ಮುದ ನೀಡುತ್ತೆ.. ರೋಮಾಂಚನಕಾರಿ ಅನುಭೂತಿ ನೀಡುತ್ತೆ.. ಸುತ್ತಲಿನ ದಟ್ಟಾರಣ್ಯದ ನಟ್ಟುನಡುವೆ ರಭಸವಾಗಿ ಧರೆಗಿಳಿಯುವ ಜಲಪಾತ.
ಈ ದೇಶದಲ್ಲಿ ಚುನಾವಣೆಗೂ 21 ಗಂಟೆ ಮುನ್ನ ಯಾರೂ ಕೂಡ ಮದ್ಯ ಸೇವನೆ ಮಾಡುವಂತೆ ಇಲ್ಲ ಎಂಬ ಕಾನೂನಿದೆ. ಈ ದೇಶದಲ್ಲಿ ಒಂದಕ್ಕಿಂತ ಮತ್ತೊಂದು ಭವ್ಯ , ಸುಂದರ ಆಕರ್ಷಣೀಯ ಪ್ರವಾಸಿತಾಣಗಳಿವೆ.. ಆದ್ರೆ ಈ ದೇಶ ಪ್ರವಾಸಿಗರಿಗೆ ಸೇಫ್ ಅಲ್ಲ ಎಂದು ಪರಿಗಣಿಸಲಾಗಿದೆ.. ಕಾರಣ ಇಲ್ಲಿ ಎಲಲ್ಲಿ ಯಾವಾಗ ಪ್ರವಾಸಿಗರನ್ನ ಅಪರಹಣ ಮಾಡಲಾಗುತ್ತೆ ಅನ್ನೋದನ್ನು ಕೂಡ ಹೇಳೋಕಾಗಲ್ಲ. ಗೂಂಡಾಗಾರಿ ಡ್ರಗ್ಸ್ ವಿಚಾರಕ್ಕೆ ಈ ದೇಶ ವಿಶ್ವಾದ್ಯಂತ ಕುಖ್ಯಾತಿ ಪಡೆದಿದೆ. ಇದೇ ಕಾರಣಕ್ಕೆ ಈ ದೇಶಕ್ಕೆ ಹೆಚ್ಚು ಪ್ರವಾಸಿಗರು ಬರುವ ಮನಸ್ಸು ಮಾಡೋದಿಲ್ಲ. ಈ ದೇಶ ವಿಶ್ವದ ಅತಿ ಹೆಚ್ಚು ಅಪಾಯಕಾರಿ ದೇಶಗಳಲ್ಲಿ ಒಂದು.
ಇಲ್ಲಿ ಪುಟ್ಟ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ವಸ್ತು ಖರೀದಿ ಮಾಡ್ಬೇಕಾದ್ರು ಮಕ್ಕಳ ಪೋಷಕರು ಅಥವ ಗಾರ್ಡಿಯನ್ಸ್ ಮಗುವಿನ ಬರ್ತ್ ಸರ್ಟಿಫಿಕೇಟ್ ತೋರಿಸುವುದು ಕಡ್ಡಾಯ..
ಪ್ರವಾಸಿ ತಾಣಗಳು
ಏಂಜಲ್ ಫಾಲ್ಸ್ , ಲಾಸ್ ರಾಕ್ಸ್ ಆರ್ಕಿಪೆಲಾಗೋ ( ಬೀಚ್ ), ಮೋರೋಕೋಯಿ ನ್ಯಾಷನಲ್ ಪಾರ್ಕ್ , ರೋರಾಯಿಮಾ, ಓರಿನೋಕೋ ಡೆಲ್ಟಾ.
ಈ ದೇಶದಲ್ಲಿ ಪ್ರವಾಸ ಮಾಡೋ ಇಚ್ಛೆ ಇದ್ದೋರಿಗೆ ಇದು ಬಜೆಟ್ ಫ್ರೆಂಡ್ಲಿ… ಆದ್ರೆ ಈ ದೇಶ ನಿಜಕ್ಕೂ ಪ್ರವಾಸಕ್ಕೆ ಸುರಕ್ಷಿತ ದೇಶವೇ ಅನನ್ನೋದೆ ಪ್ರಶ್ನೆ..