ಜಗತ್ತಿನ ಅತಿ ಶಕ್ತಿಶಾಲಿ ಪಾಸ್ ​ಪೋರ್ಟ್ಗಳ  ಪಟ್ಟಿ ರಿಲೀಸ್ : ಭಾರತಕ್ಕೆ ಎಷ್ಟನೇ ಸ್ಥಾನ..?

1 min read

ಜಗತ್ತಿನ ಅತಿ ಶಕ್ತಿಶಾಲಿ ಪಾಸ್ ​ಪೋರ್ಟ್ಗಳ  ಪಟ್ಟಿ ರಿಲೀಸ್ : ಭಾರತಕ್ಕೆ ಎಷ್ಟನೇ ಸ್ಥಾನ..?

2021ನೇ ಸಾಲಿನ ಜಗತ್ತಿನ ಅತಿ ಶಕ್ತಿಶಾಲಿ ಪಾಸ್ ​ಪೋರ್ಟ್ಗಳ  ಪಟ್ಟಿ ರಿಲೀಸ್ ಆಗಿದೆ.. ವಿಶ್ವದ ಹೆಚ್ಚು ಶಕ್ತಿಶಾಲಿ ಪಾಸ್ ​​ಪೋರ್ಟ್​​​ ಹೊಂದಿರುವ ದೇಶಗಳ   ಪೈಕಿ ಭಾರತ 90ನೇ ಸ್ಥಾನಪಡೆದುಕೊಂಡಿದೆ.. ಹೌದು ಹೆನಲ್ ಪಾಸ್​ಪೋರ್ಟ್ ಇಂಡೆಕ್ಸ್​ ಪ್ರಕಾರ ಕಳೆದ ವರ್ಷ ಭಾರತದ ಈ ಲಿಸ್ಟ್ ನಲ್ಲಿ 84ನೇ ಸ್ಥಾನದಲ್ಲಿತ್ತು.. ಆದ್ರೆ ಈ ಬಾರಿ 6 ಅಂಕ ಕುಸಿದಿದೆ..

ಇನ್ನೂ ಮೊದಲನೇ ಸ್ಥಾನದಲ್ಲಿ ಜಪಾನ್ , 2ನೇ ಸ್ಥಾನದಲ್ಲಿ  ಸಿಂಗಾಪುರ್​ ,  3ನೇ ಸ್ತಾನದಲ್ಲಿ ಜರ್ಮನಿ ಮತ್ತು ದಕ್ಷಿಣ ಕೊರಿಯಾ  ಇದೆ.. ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಯುನೈಟೆಡ್ ಕಿಂಗ್ ​ಡಮ್ 7ನೇ ಸ್ಥಾನದಲ್ಲಿವೆ. ಇನ್ನೂ ಚೀನಾ 68ನೇ ಸ್ಥಾನಕ್ಕೆ ಬಂದಿದೆ. ಯುಎಇ  2011ರಲ್ಲಿ 65ನೇ ಸ್ಥಾನದಲ್ಲಿತ್ತು. ಈಗ  15ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಪಕ್ಕದ ಪಾಕಿಸ್ತಾನ ಈ ಪಟ್ಟಿಯಲ್ಲಿ ಕೊನೆಯಿಂದ ​​​ 4ನೇ (113)ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಕೊನೆಯ ಸ್ಥಾನ 116ನೇ ಸ್ಥಾನ ಪಡೆದಿರುವುದು ಅಫ್ಘಾನಿಸ್ತಾನ.

ಭಾರತೀಯರು 58 ದೇಶಗಳಿಗೆ ಮಾತ್ರವೇ ವೀಸಾ ಇಲ್ಲದೇ ಹೋಗಬಹುದು. ಜಪಾನ್ ಪಾಸ್​ಪೋರ್ಟ್​ ಹೊಂದಿರೋರಿಗೆ 193 ದೇಶಗಳಲ್ಲಿ ಫ್ರೀ ವೀಸಾ ಅಥವಾ ವೀಸಾ ಆನ್ ಅರೈವಲ್ ಇದೆ.  ಸಿಂಗಾಪುರ್​​​ ಪಾಸ್​ಪೋರ್ಟ್​ ಇರೋರಿಗೆ 192 ದೇಶಗಳಲ್ಲಿ ಫ್ರೀ ವೀಸಾ ಅಥವಾ ವೀಸಾ ಆನ್ ಅರೈವಲ್ ಇದೆ.   ಸೌತ್ ಕೊರಿಯಾ ಮತ್ತು ಜರ್ಮನಿ ಪಾಸ್​ಪೋರ್ಟ್​ ಹೊಂದಿರೋರಿಗೆ 191 ದೇಶಗಳಲ್ಲಿ ಈ ಸೌಲಭ್ಯ ಇದೆ. ಯುಎಇ ಪಾಸ್​ಪೋರ್ಟ್​ ಹೊಂದಿರೋರು 174 ದೇಶಗಳಿಗೆ  ಪ್ರವೇಶ ಪಡೆಯಬಹುದು. ಪಾಕಿಸ್ತಾನದಲ್ಲಿ 32 ದೇಶಗಳಿಗೆ ಹೋಗುವ ಅವಕಾಶವಿದೆ.  ಅಫ್ಗಾನಿಸ್ತಾನದಲ್ಲಿ 26 ದೇಶಗಳಿಗೆ ವೀಸಾ ಇಲ್ಲದೆ ಹೋಗುವ ಅವಕಾಶವಿದೆ.

ರಷ್ಯಾದಲ್ಲಿ ನಾಪತ್ತೆಯಾಗಿದ್ದ ವಿಮಾನ ಪತನ – ಮೃತದೇಹಗಳು ಪತ್ತೆ

ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಬರ್ಬರ ಹತ್ಯೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd