ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್, ಸೆಹ್ವಾಗ್, ಬ್ರಿಯಾನ್ ಲಾರಾನ ಆಟವನ್ನು ನೆನಪು ಮಾಡುತ್ತಿರುವ ಪೃಥ್ವಿ ಶಾ…!

admin by admin
July 19, 2021
in Newsbeat, Sports, ಕ್ರೀಡೆ
prithvi shaw team india saakshatv
Share on FacebookShare on TwitterShare on WhatsappShare on Telegram

Related posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026
ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

March 20, 2026

ಸಚಿನ್, ಸೆಹ್ವಾಗ್, ಬ್ರಿಯಾನ್ ಲಾರಾನ ಆಟವನ್ನು ನೆನಪು ಮಾಡುತ್ತಿರುವ ಪೃಥ್ವಿ ಶಾ…!

prithvi shaw team india saakshatvನೋಡೋಕೆ ವಾಮನ ಮೂರ್ತಿ.. ವಯಸ್ಸು ಇನ್ನೂ 21.. ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಕ್ರೀಸ್‍ಗೆ ಆಗಮಿಸುವಾಗ ಬ್ರಿಯಾನ್ ಲಾರಾನನ್ನು ನೆನಪಿಸುತ್ತಾರೆ.. ಬ್ಯಾಟಿಂಗ್ ಶೈಲಿಯ ಹಾವಭಾವವನ್ನು ನೋಡಿದಾಗ ಸಚಿನ್ ತೆಂಡುಲ್ಕರ್ ನೆನಪಾಗುತ್ತಾರೆ.. ಆಕ್ರಮಣಕಾರಿ ಪ್ರವೃತ್ತಿಯ ಆಟವನ್ನು ಗಮನಿಸಿದಾಗ ವೀರೇಂದ್ರ ಸೆಹ್ವಾಗ್ ಆಟದ ವೈಖರಿ ಕಣ್ಣ ಮುಂದೆ ಹಾದು ಹೋಗುತ್ತದೆ.
ಇದು ಪೃಥ್ವಿ ಶಾ ಆಟದ ಖದರ್.. ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ, ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ಈ ಜನರೇಷನ್ ನಲ್ಲಿ ನೆನಪಿಸಿಕೊಳ್ಳುವಂತೆ ಆಡುತ್ತಿದ್ದಾರೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮೆನ್ ಪೃಥ್ವಿ ಶಾ.
ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ, ಗಾಯ, ಡೋಪಿಂಗ್, ಕಳಪೆ ಫಾರ್ಮ್ ನಿಂದಾಗಿ ಅಷ್ಟೇ ವೇಗವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗಿದ್ದರು. ಮೂರು ವರ್ಷಗಳ ಹಿಂದೆಯೇ ಟೀಮ್ ಇಂಡಿಯಾಗೆ ಎಂಟ್ರಿಯಾಗಿದ್ರೂ ಕೂಡ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿರಲಿಲ್ಲ.
ಅದ್ಭುತ ಪ್ರತಿಭೆ, ಚೆಂಡಿನ ಗತಿಯನ್ನು ಅರಿತುಕೊಂಡು ಆಡುವ ಕಲೆ, ಟೈಮಿಂಗ್, ಬ್ಯಾಟಿಂಗ್ ಕೌಶಲ್ಯತೆ ಎಲ್ಲವೂ ಅದ್ಭುತವಾಗಿದೆ. ಆದ್ರೆ ಪೃಥ್ವಿ ಶಾ ಕೆಲವೊಂದು ತಾನಾಗೇ ಮಾಡಿಕೊಂಡಿರುವ ಪ್ರಮಾದದಿಂದಾಗಿ ಕಳೆದ ಮೂರು ವರ್ಷಗಳ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡಿದ್ದರು.
ಆದ್ರೆ ಕಳೆದ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದ ನಂತರ ಪೃಥ್ವಿ ಶಾ ಬುದ್ದಿ ಕಲಿತುಕೊಂಡ್ರು. ದೇಸಿ ಪಂದ್ಯಗಳಲ್ಲಿ ರನ್ ಮಳೆಯನ್ನು ಸುರಿಸಿದ್ರು. ಜೊತೆ ಐಪಿಎಲ್ ನಲ್ಲೂ ಲಯವನ್ನು ಕಳೆದುಕೊಂಡು ಮತ್ತೆ ಟೀಮ್ ಇಂಡಿಯಾದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಟೆಸ್ಟ್ ಸರಣಿಗೆ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಬಹುಶಃ ಶ್ರೀಲಂಕಾ ಸರಣಿ ಮುಗಿದ ನಂತರ ಪೃಥ್ವಿ ಶಾ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಬಹುದು.
prithvi shaw team india saakshatvಇನ್ನೊಂದೆಡೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ ರೀತಿಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಎಲ್ಲರೂ ಭೇಷ್ ಅನ್ನುತ್ತಿದ್ದಾರೆ. ಪೃಥ್ವಿ ಶಾ ಕೇವಲ 24 ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು. 9 ಬೌಂಡರಿಗಳ ಸಹಾಯದಿಂದ 43 ರನ್ ಗಳಿಸಿದ್ದ ಪೃಥ್ವಿ ಶಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು. ಅಂದ ಮೇಲೆ ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿ ಯಾವ ಮಟ್ಟದಲ್ಲಿತ್ತು ಎಂಬುದುನ್ನು ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ.
ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಂತೂ ಫುಲ್ ಫಿದಾ ಆಗಿದ್ದಾರೆ. ಸಚಿನ್, ಬ್ರಿಯಾನ್ ಲಾರಾ ಮತ್ತು ತನ್ನ (ಸೆಹ್ವಾಗ್) ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪೆಹ್ಲೆ 5.3 ಓವರ್ ಹಮಾರ ಜಲ್ವಾ ರಹಾ ಅಂತ ಬರೆದುಕೊಂಡಿದ್ದಾರೆ.
ಒಂದಂತೂ ನಿಜ, ಪೃಥ್ವಿ ಶಾ ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಚೆಂದ.. ಶಾ ಬ್ಯಾಟ್ ನಿಂದ ರನ್‍ಗಳು ಮೆಷಿನ್ ನಂತೆ ಹರಿದು ಬರುತ್ತವೆ. ಪೃಥ್ವಿ ಶಾ ಬ್ಯಾಟಿಂಗ್ ಸ್ಟೈಲ್, ನಡೆಯುವ ಶೈಲಿ, ಕೌಶಲ್ಯಗಳು ಎಲ್ಲವೂ ಕಣ್ಣಿಗೆ ಆನಂದವನ್ನುಂಟು ಮಾಡುತ್ತಿವೆ.
lara veeru sachin saakshatvಒಟ್ಟಿನಲ್ಲಿ ಪೃಥ್ವಿ ಶಾ ಹಳೆಯ ತಪ್ಪುಗಳನ್ನು ಮಾಡದೇ ಇದೇ ರೀತಿ ಮುಂದುವರಿದ್ರೆ ಭವಿಷ್ಯದ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರನಾಗಬಹುದು. ಸಚಿನ್ ನಂತರ ಕೊಹ್ಲಿ ಹೇಗೆ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿದ್ದಾರೋ ಅದೇ ರೀತಿ ಕೊಹ್ಲಿ ನಂತರ ಪೃಥ್ವಿ ಶಾ ಕ್ರಿಕೆಟ್ ಜಗತ್ತನ್ನು ಆಳಬಹುದು.. ಆದ್ರೆ ಬದ್ಧತೆ, ಏಕಾಗ್ರತೆ, ಕ್ರಿಕೆಟ್ ಮೇಲಿನ ಪ್ರೀತಿ ಇರಬೇಕು. ಅಹಂಕಾರ ಇರಬಾರದು ಅಷ್ಟೇ…!

Tags: #Prithvi Shaw#saakshatvbcciBrian LaraCricketICCsachin tendualkarSportssrilankateam indiaVirender Sehwag
ShareTweetSendShare
Join us on:

Related Posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

by Shwetha
March 20, 2026
0

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram