ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ : ಡಿ.ಕೆ.ಶಿವಕುಮಾರ್ ವಿಶ್ವಾಸ
ಬೆಂಗಳೂರು : ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ. ಅವರ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಅದು ಯಾರೋ ಸಾಮಾನ್ಯರ ಆಡಿಯೋ ಅಲ್ಲ.
ನಾನು ಯಾವ ಧ್ವನಿಯಲ್ಲಿ ಮಾತನಾಡ್ತಿನಿ. ಸಿದ್ದರಾಮಯ್ಯ ಕುಮಾರಸ್ವಾಮಿ ದೇವೇಗೌಡರು ಯಾವ ರೀತಿ ಮಾತಾಡ್ತಾರೆ ಅಂತಾ ಎಲ್ಲರಿಗೂ ಗೊತ್ತು.
ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ. ಅವರ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ ಎಂದಿದ್ದಾರೆ. ಅಲ್ಲದೆ ಆಡಿಯೋ ತನಿಖೆಗೆ ಕೊಡಬೇಕು ಅಂತಾರೆ.
ತನಿಖೆಗೆ ಆಫೀಸರ್ ನ ನೇಮಕ ಮಾಡ್ತಾರೆ. ಅವರು ಅದನ್ನ ಫೇಕ್ ಅಂತಾರೆ. ಈ ಹಿಂದೆ ಯಡಿಯೂರಪ್ಪಂದು ಏನಾಯ್ತು..? ಇತ್ತಿಚಿಗೆ ಆ ಪ್ರಕರಣ ಏನಾಯ್ತು? ನಾವಂತು ಈ ಪ್ರಕರಣದಲ್ಲಿ ಇಲ್ಲ ಎಂದು ಸ್ಪಷ್ಟಪಸಿದರು.
ಮಿಮಿಕ್ರಿ ಮಾಡಿದ್ದಾರೆ ಎಂಬ ಸಚಿವ ಸುಧಾಕರ್ ಹೇಳಿಕೆ ಟಾಂಗ್ ನೀಡಿದ ಡಿಕೆಶಿವಕುಮಾರ್, ಅವರದ್ದು ಮಾಡಿಸೋಣ ಮಿಮಿಕ್ರಿ ನಾವೇನು ಮಿಮಿಕ್ರಿ ಇಟ್ಟುಕೊಂಡಿದ್ದಿವಾ..? ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ಕಿತ್ತೊಗೆಯ ಬೇಕು ಅಂತಾ ಜನ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.