ADVERTISEMENT
Sunday, August 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪೆಗಾಸಸ್ ಬೇಹುಗಾರಿಕಾ ಸಾಫ್ಟ್ ​ವೇರ್  –  ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕಮೊಬೈಲ್ ಮಾಹಿತಿ ಕಳವು..!

Namratha Rao by Namratha Rao
July 20, 2021
in National, Newsbeat, ದೇಶ - ವಿದೇಶ
National Helpline
Share on FacebookShare on TwitterShare on WhatsappShare on Telegram

ಪೆಗಾಸಸ್ ಬೇಹುಗಾರಿಕಾ ಸಾಫ್ಟ್ ​ವೇರ್  –  ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕಮೊಬೈಲ್ ಮಾಹಿತಿ ಕಳವು..!

ನವದೆಹಲಿ : ಇಸ್ರೇಲ್ ಮೂಲದ ಪೆಗಾಸಸ್ ಬೇಹುಗಾರಿಕಾ ಸಾಫ್ಟ್ ​ವೇರ್ ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕ ಜನರ ಮೊಬೈಲ್ ಮಾಹಿತಿಯನ್ನು ಕದ್ದು ಅದರ ಮಾಹಿತಿಗಳನ್ನು ಆಯಾ ದೇಶದ ಸರಕಾರಗಳಿಗೆ ಸರಬರಾಜು ಮಾಡಿರುವ ಗಂಭೀರವಾದ ಆರೋಪವನ್ನ ಎದುರಿಸುತ್ತಿದೆ.

Related posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

August 22, 2026
mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

August 22, 2026

ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವ್ಯಾಪಾರ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಸರಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಗಳ ಡಾಟಾಗಳನ್ನು ಸಂಗ್ರಹಿಸಿ ತಲುಪಿಸುವ ಕೆಲಸವನ್ನು ಪೆಗಾಗಸ್ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇಡೀ ವಿಶ್ವವೇ ಬೆಚ್ಚಿ ಬೀಳುವಂತಾಗಿದೆ.

ಭಾರತದ ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಪೆಗಾಸಸ್ ದಾಳಿ ನಡೆದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.. ಅದರಲ್ಲೂ ಪ್ರಮುಖ ರಾಜಕಾರಣಿಗಳಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಭಾರತದಲ್ಲಿ ಕನಿಷ್ಠ 300 ಜನರ ಮೊಬೈಲ್ ಫೋನ್ ಖಾತೆಗಳನ್ನು ಈ ಸಾಫ್ಟ್​ ವೇರ್ ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗಿದೆ. ಅದರಲ್ಲಿ ಪ್ರಮುಖವಾಗಿ ರಾಹುಲ್ ಗಾಂಧಿ ಹಾಗೂ ಪ್ರಶಾಂತ್ ಕಿಶೋರ್ ಹೆಸರು ಕೇಳಿ ಬಂದಿದೆ. ಉಳಿದಂತೆ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರಧಾನಿ ಮೋದಿಯವರ ಸಂಪುಟ ಸಚಿವರಾಗಿರುವ ಪ್ರಹ್ಲಾದ್ ಪಟೇಲ್ ಹಾಗೂ ಅಶ್ವಿನಿ ವೈಷ್ಣವ್ ಸೇರಿದಂತೆ ಪಕ್ಷದ ಅನೇಕ ಮುಖಂಡರ ಫೋನ್ ಈ ಸ್ಪೈವೇರ್ ​ನ ಗುರಿಯಾಗಿದೆ ಎನ್ನಲಾಗಿದೆ.

ಇದೇ ವರ್ಷ ಜೂನ್ 14ರಂದು ಅಮ್ನೆಸ್ಟಿಯ ಸೆಕ್ಯುರಿಟಿ ಲ್ಯಾಬ್ ಒಂದು ವಿಧಿವಿಜ್ಞಾನದ ವಿಶ್ಲೇಷಣೆಯನ್ನು ನಡೆಸಿತ್ತು. ಮಮತಾ ಅವರ ಗೆಲುವಿಗೆ ಕಾರಣವಾಗಿದ್ದ ಪ್ರಶಾಂತ್ ಅವರ ಮೊಬೈಲ್ ಪೆಗಾಸಸ್ ಸಾಫ್ಟ್​ವೇರ್ ಸುಳಿಗೆ ಸಿಕ್ಕಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಹಾಗೆಯೇ ರಾಹುಲ್ ಗಾಂಧಿಯವರ ಎರಡು ಮೊಬೈಲ್ ಸಂಖ್ಯೆಗಳು 2018ರ ಮಧ್ಯದಿಂದ 2019ರ ಮಧ್ಯದವರೆಗೆ ಬೇಹುಗಾರಿಕೆಯಾಗಿರುವುದಾಗಿ ಹೇಳಲಾಗಿದೆ.

ಸೋಮವಾರ ಲೋಕಸಭಾ ಸಂಸತ್ ಕಲಾಪದ ಮೊದಲ ದಿನವೇ ಭಾರೀ ಗದ್ಧಲಕ್ಕೆ ಕಾರಣವಾದ ಸ್ಪೈವೇರ್ ಪೆಗಾಗಸ್, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಿನ್ನಮತೀಯರ ಮೇಲೆ ಕಣ್ಣಿಡಲು ಸಹಾಯ ಮಾಡಿದೆ ಎಂದು 2016ರಲ್ಲಿ ಮೊದಲ ಬಾರಿ ಸಂಶೋಧಕರು ಆರೋಪಿಸಿದ್ದರು.  ಎನ್‌ಎಸ್‌ಒ ಗ್ರೂಪ್ ಮತ್ತು ಪೆಗಾಸಸ್ ಮಾಲ್ವೇರ್ – ಫೋನ್‌ನ ಕ್ಯಾಮೆರಾ ಅಥವಾ ಮೈಕ್ರೊಫೋನ್ ಅನ್ನು ಬದಲಾಯಿಸುವ ಮತ್ತು ಅದರ ಡೇಟಾ ಪಡೆಯುತ್ತದೆ ಸಾಮರ್ಥ್ಯವಿದೆ ಎಂದು ಆರೋಪ ಕೇಳಿಬಂದಿತ್ತು.

ಪೊಲೀಸ್ ಅಧೀಕ್ಷಕರಿಗೆ ಧಮ್ಕಿ ಹಾಕಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ..!

ದಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೆ ಮಾಂಡೆ ಮತ್ತು ಇತರ ಮಾಧ್ಯಮಗಳ ಸಹಯೋಗದ ತನಿಖೆ ಗೌಪ್ಯತೆ ಕಾಳಜಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಖಾಸಗಿ ಸಂಸ್ಥೆಯ ಸಾಫ್ಟ್‌ವೇರ್ ಗಳನ್ನು ಎಷ್ಟು ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಬಹಿರಂಗಪಡಿಸಿದೆ. 2016ರಿಂದ ಎನ್‌ಎಸ್‌ಒಯಿಂದ ಸುಮಾರು 50,000ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಸಂಖ್ಯೆಗಳು ಸೋರಿಕೆಯಾಗಿದೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ. ಆದರೂ ಎಷ್ಟು ಸಾಧನಗಳನ್ನು ನಿಜವಾಗಿ ಗುರಿಪಡಿಸಲಾಗಿದೆ ಅಥವಾ ಸಮೀಕ್ಷೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ತನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ವಾದಿಸಿದೆ.

ಈ ಪಟ್ಟಿಯಲ್ಲಿ ಮೆಕ್ಸಿಕೋದ 15,000 ಸಂಖ್ಯೆಗಳಿವೆ. ಇನ್ನು ಭಾರತದ ರಾಜಕಾರಣಿಗಳು ಮತ್ತು ಪ್ರಮುಖ ಪತ್ರಕರ್ತರು ಸೇರಿದಂತೆ 300 ಜನರ ನಂಬರ್ ಗಳಿವೆ. ಈ ಪಟ್ಟಿಯಲ್ಲಿರುವ 37 ಸ್ಮಾರ್ಟ್‌ಫೋನ್‌ಗಳ ಫೋರೆನ್ಸಿಕ್ ವಿಶ್ಲೇಷಣೆಯು 2018ರಲ್ಲಿ ಕೊಲೆಯಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಮತ್ತು ಅವರ ಆಪ್ತ ಇಬ್ಬರು ಮಹಿಳೆಯರನ್ನು ಸಾಫ್ಟ್ ವೇರ್ ಮೂಲಕ ಹ್ಯಾಕ್‌ ಮಾಡಲಾಗಿದೆ ಎಂದು ತಿಳಿಸಿದೆ.

ಹೊಸ ಪಟ್ಟಿಯ ಪ್ರಕಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಚುನಾವಣ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌, ಮಾಜಿ ಚುನಾವಣ ಆಯುಕ್ತ ಅಶೋಕ್‌ ಲಾವಾಸಾ, ಕೇಂದ್ರದ ಸಚಿವರಾದ ಅಶ್ವಿ‌ನಿ ವೈಷ್ಣವ್‌ ಮತ್ತು ಪ್ರಹ್ಲಾದ್‌ ಪಟೇಲ್‌, ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ, ನಿವೃತ್ತ ಸಿಜೆಐ ರಂಜನ್‌ ಗೊಗೋಯ್‌ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ಸುಪ್ರೀಂ ಕೋರ್ಟ್‌ ಸಿಬಂದಿಯ ಕುಟುಂಬಸ್ಥರ ಫೋನ್‌ ಗಳನ್ನು ಕದ್ದಾಲಿಸಲಾಗುತ್ತಿತ್ತು ಯಾ ಇವರನ್ನು ಸಂಭಾವ್ಯ ಗುರಿಗಳೆಂದು ಪಟ್ಟಿ ಮಾಡಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಅವರ ಖಾಸಗಿ ಕಾರ್ಯದರ್ಶಿ ಸಂಜಯ್‌ ಕಾಚ್ರೂ, ವಿಹಿಂಪದ ನಾಯಕ ಪ್ರವೀಣ್‌ ತೊಗಾಡಿಯಾ ಕೂಡ ಗುರಿ ಆಗಿದ್ದರು ಎನ್ನಲಾಗಿದೆ.

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ – ಮನೆಯಿಂದ ಆಚೆ ಹಾಕುವಂತೆ ಶುರುವಾಗಿದೆ ಅಭಿಯಾನ..!

Tags: BJPCongressHackersisrealphone data stolenrahul gandhi
ShareTweetSendShare
Join us on:

Related Posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

by admin
August 22, 2026
0

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್...

mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

by admin
August 22, 2026
0

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

by Shwetha
August 22, 2026
0

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಸಂಸತ್ ಭವನ...

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

by Shwetha
August 22, 2026
0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ...

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

by Shwetha
August 22, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram