ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ – ಮನೆಯಿಂದ ಆಚೆ ಹಾಕುವಂತೆ ಶುರುವಾಗಿದೆ ಅಭಿಯಾನ..!

1 min read

ಪ್ರಿಯಾಂಕಾಗೆ ಅಶ್ಲೀಲ ಸನ್ನೆತೋರಿಸಿದ ಚಕ್ರವರ್ತಿ – ಮನೆಯಿಂದ ಆಚೆ ಹಾಕುವಂತೆ ಶುರುವಾಗಿದೆ ಅಭಿಯಾನ..!

ಬೆಂಗಳೂರು:  ಬಿಗ್ ಬಾಸ್  ಮನೆಗೆ ವೈಲ್ಡ್ ಮೂಲಕ ಎಂಟ್ರಿಕೊಟ್ಟಿದ್ದ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಈಗಾಗಲೇ ಮನೆಯಿಂದ ಹೊರನಡೆದಾಗಿದೆ.. ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆಗಿದ್ದಾರೆ.. ಆದ್ರೆ ಪ್ರಿಯಾಂಕಾ ತಿಮ್ಮೇಶ್ ಗೆ  ಚಂದ್ರಚೂಡ್ ಚಕ್ರವರ್ತಿ ಕೈಯಲ್ಲಿ ಅಶ್ಲೀಲ ಸನ್ನೆ ತೋರಿಸಿದ್ದು, ಇದೀಗ ವ್ಯಾಕಪ ಆಕ್ರೋಶಕ್ಕೆ ಗುರಿಯಾಗಿದ್ದು, ಸಕ್ರವರ್ತಿಯನ್ನ ಮನೆಯಿಂದ ಆಚೆ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ.. ಚಕ್ರವರ್ತಿ ಹಾಗೂ ಪ್ರಿಯಾಂಕಾ ಇಬ್ಬರೂ ವಿಭಿನ್ನ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ.. ಚಕ್ರವರ್ತಿ ನೇರ ನುಡಿ , ಭಾಷೆಯ ಮೇಲಿನ ಹಿಡಿತದ ಜೊತೆಗೆ ಮೈಂಡ್ ಗೇಮ್ ಆಡುತ್ತಾ ಮನೆಯ ಪ್ರತಿ ಸದಸ್ಯರ ಬಗ್ಗೆಯೂ ಕಮೆಂಟ್ ಗಳನ್ನ ಪಾಸ್ ಮಾಡುತ್ತಾ ಇರುತ್ತಾರೆ.. ಪ್ರಿಯಾಂಕಾ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾ  ಅಗತ್ಯವಿದ್ದಾಗಲಷ್ಟೇ ತಾಳ್ಮೆ ಕಳೆದುಕೊಂಡು ಮನೆಯಲ್ಲಿ ಹೆಚ್ಚಾಗಿ ಚಕ್ರವರ್ತಿ ಜೊತೆಗೆ ಕಿತ್ತಾಟ ಮಾಡಿಕೊಂಡಿದ್ದಾರೆ.. ಸದ್ಯ ಿದೀಗ ಮನೆಯಿಂದ ಹೊರನಡೆದಿದ್ದಾರೆ. ಆದ್ರೆ ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಪ್ರಿಯಾಂಕಾಗೆ ಚಕ್ರವರ್ತಿ ಅಶ್ಲೀಲ ಸನ್ನೆ ತೋರಿಸಿದ್ದಾರೆ..

ಭಾನುವಾರ ರಾತ್ರಿ ಪ್ರಿಯಾಂಕಾ ಎಲಿಮಿನೇಟ್ ಆಗಿ ಮನೆಯಿಂದ ಹೊರಬರುವ ವೇಳೆ ಆಕೆಗೆ ವಿಶೇಷ ಅಧಿಕಾರವೊಂದನ್ನು ನೀಡಲಾಯಿತು. ಅದರಂತೆ, ಮುಂದಿನ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಹೇಳಲಾಯಿತು. ಅಗ ಪ್ರಿಯಾಂಕಾ, ಚಕ್ರವರ್ತಿ ಅವರ ಹೆಸರನ್ನು ಹೇಳುವ ಮೂಲಕ ನೇರವಾಗಿ ನಾಮಿನೇಟ್ ಮಾಡಿದರು. ಇದರಿಂದ ಅಸಮಾಧಾನಗೊಂಡ ಚಕ್ರವರ್ತಿ, ಪ್ರಿಯಾಂಕಾಗೆ ಅಶ್ಲೀಲವಾಗಿ ಸನ್ನೆ ಮಾಡಿದ್ದಾರೆ. ಇನ್ನೂ ಈ ರೀತಿ ಸ್ಪರ್ಧಿಯೊಬ್ಬರು ಅನುಚಿತವಾಗಿ ವರ್ತಿಸಿರುವುದು ಬಹುಶಃ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇರಬಹುದು.. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆ ಎದುರಾಗಿದೆ. ನೆಟ್ಟಿಗರು, ಚಂದ್ರಚೂಡ್ ಅವರ ನಡೆಯನ್ನು ಖಂಡಿಸಿದ್ದು, ಕೆಲವರು ಅವರಿಗೆ ಸೂಕ್ತ ಶಿಕ್ಷೆ ಕೊಡಬೇಕು ಎಂದು ಆಕ್ರೋಶ ಹೊರಹಾಕ್ತಿದ್ದಾರೆ,.. ಅಷ್ಟೇ ಅಲ್ಲ ತಕ್ಷಣವೇ ಚಂದ್ರಚೂಡ್ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ದರ್ಶನ್ ಹಿಂಬಾಲಕರಿಂದ ಕೊಲೆ ಬೆದರಿಕೆ – ಇಂದ್ರಜಿತ್ ದೂರು

“ಬೆಕ್ಕಿಗೆ ಯಾರೋ ಒಬ್ಬರು ಘಂಟೆ ಕಟ್ಟಬೇಕಿತ್ತು, ಕಟ್ಟಿದ್ದೀನಿ” – ಇಂದ್ರಜಿತ್

ನೀಲಿ ಚಿತ್ರ ನಿರ್ಮಾಣ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್…!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd