BIGGBOSS 8 : ಮತ್ತೆ ಒಂದಾದ ಪ್ರಣಯ ಪಕ್ಷಿಗಳು – ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್..!
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಇರುವ ಕ್ಯೂಟ್ ಕಪಲ್ ಅರವಿಂದ್ ಹಾಗೂ ದಿವ್ಯಾ ಉರುಡುಗ 2ನೇ ಇನ್ನಿಂಗ್ಸ್ ನಲ್ಲಿಯೂ ಸದಾ ಒಟ್ಟಾಗಿ ಕಾಣಿಸಿಕೊಳ್ತಾರೆ. ಆದ್ರೆ ಇದೀಗ ದಿವ್ಯಾ ಉರುಡುಗ ಹಾಗೂ ಅರವಿಂದ್ ನಡುವೆ ಜಗಳ ನಡೆದಿದೆ. ಆದ್ರೆ ಇದು ಅಷ್ಟು ಸಸೀರಿಯಸ್ ಏನಲ್ಲ ಸಣ್ಣ ಜಗಳದಿಂದಾಗಿ ಅರವಿಂದ್ ದಿವ್ಉಆ ಉರುಡುಗ ಜೊತೆ ಮಾತು ಬಿಟ್ಟಿದ್ದಾರೆ. ದೊಡ್ಮನೆಯಲ್ಲಿ ಟಾಸ್ಕ್ ಗಳ ವಿಚಾರ ಅಥವ , ಟಫ್ ಕಾಂಪಿಟೇಟರ್ ಅಂತ ಬಂದ್ರೆ ದಿವ್ಯಾ ಹಾಗೂ ಅರವಿಂದ್ ಇಬ್ಬರೂ ಸ್ಟ್ರಾಂಗ್ ಕಂಟೆಂಡರ್ ಗಳೇ.. ಹಾಗೆಯೇ ಆಟದ ವಿಚಾರವಾಗಿ ಇಬ್ಬರ ನಿಲುವು ಕೂಡ ಭಿನ್ನವಾಗಿರುತ್ತೆ.. ಏಕಾಂಗಿಯಾಗಿಯೇ ಇಬ್ಬರು ತಮ್ಮ ತಮ್ಮ ಸ್ಟ್ರಾಟರ್ಜಿಗಳನ್ನ ಯೂಸ್ ಮಾಡಿ ಗೆಲ್ಲುತ್ತಾರೆ.. ಆದ್ರೆ ಇತ್ತೀಚೆಗೆ ಈ ಜೋಡಿ ನಡುವೆ ಮನಸ್ತಾಪ ಉಂಟಾಗಿತ್ತು.. ದಿವ್ಯಾ ಉರುಡುಗ ಜೊತೆಗೆ ಅರವಿಂದ್ ಮಾತು ಬಿಟ್ಟಿದ್ದರು. ಆದರೆ ಇದೀಗ ಪರಸ್ಪರ ಬಿಗಿದಪ್ಪಿಕೊಂಡು ಮತ್ತೆ ಒಂದಾಗಿದ್ದಾರೆ.
ಹೌದು ಬಿಗ್ ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ಇಬ್ಬರ ನಡುವೆ ಸಣ್ಣ ಜಗಳವಾಗಿರುತ್ತದೆ. ಆ ಬಳಿಕ ಇಬ್ಬರೂ ಮಾತನಾಡುವುದನ್ನು ಬಿಡುತ್ತಾರೆ. ದಿವ್ಯಾ ಉರುಡುಗ ಮಾತನಾಡಿಸಿದರೂ ಅರವಿಂದ್ ಮಾತನಾಡದೆ ಸದ್ಯಕ್ಕೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳುತ್ತಾರೆ, ಆಗ ದಿವ್ಯಾ ಉರುಡುಗ ಬೇಸರದಿಂದ ಬೆಡ್ ರೂಂ ಕಡೆಗೆ ಹೋಗುತ್ತಾರೆ. ಇದಾದ ಬಳಿಕ ಬೆಳಗ್ಗೆ ದಿವ್ಯಾ ಉರುಡುಗ ಅವರನ್ನು ಸ್ವತಃ ಅರವಿಂದ್ ಬಿಗಿದಪ್ಪುತ್ತಾರೆ. ಆಗ ದಿವ್ಯಾ ಉರುಡುಗ ಸಹ ಗಟ್ಟಿಯಾಗಿ ಹಿಡಿದು ಹಗ್ ಮಾಡುತ್ತಾರೆ. ಈ ವೇಳೆ ಇಬ್ಬರೂ ಭಾವುಕರಾಗುತ್ತಾರೆ, ಇಬ್ಬರ ಕಣ್ಣಂಚು ಒದ್ದೆಯಾಗುತ್ತೆ.
ಬಳಿಕ ಅರವಿಂದ್ ದಿವ್ಯಾ ಜೊತೆಗೆ ಗಾರ್ಡನ್ ಏರಿಯಾಗೆ ಬಂದು ಹಗ್ ಮಾಡಿಕೊಂಡೇ ನಿಲ್ಲುತ್ತಾರೆ. ಅರವಿಂದ್ ಮಾತನಾಡಿಸದ್ದಕ್ಕೆ ದಿವ್ಯಾ ಉರುಡುಗ ಫುಲ್ ಅಪ್ಸೆಟ್ ಆಗಿರುತ್ತಾರೆ. ಯಾರೊಂದಿಗೂ ಸರಿಯಾಗಿ ಮಾತನಾಡಿರಲಿಲ್ಲ. ಬಳಿಕ ಕಿಚನ್‍ನಲ್ಲಿ ಕೆಲಸ ಮಾಡುವಾಗ ಶುಭಾ ಪೂಂಜಾ ಸಹ ದಿವ್ಯಾಗೆ ಕಿಂಡಲ್ ಮಾಡುತ್ತಾರೆ. ನೀನು ನಿನ್ನೆ ದೇವದಾಸ್ ಮೂಡಲ್ಲಿದ್ದೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಗುತ್ತ ಈಗಲೂ ಹಾಗೇ ಇದ್ದೇನೆ ಎನ್ನುತ್ತಾರೆ. ಇದಾದ ಬಳಿಕ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಅರವಿಂದ್ ಬಳಿಗೆ ಬರುವ ದಿವ್ಯಾಗೆ ಅರವಿಂದ್ ಬಟ್ಟೆಯನ್ನು ನೆನೆಸಿಡು ಎನ್ನುತ್ತಾರೆ. ಹೀಗೆ ಮಾತನಾಡುತ್ತಲೇ ದಿವ್ಯಾ ಭಾವುಕರಾಗಿ ಅರವಿಂದ್ ಅವರನ್ನು ಮತ್ತೊಮ್ಮೆ ತಬ್ಬಿಕೊಳ್ಳುತ್ತಾರೆ.









