BIGGBOSS 8 : ಗ್ರ್ಯಾಂಡ್ ಫಿನಾಲೆ ಯಾವಾಗ ಗೊತ್ತಾ..? ಡೇಟ್ ರಿವೀಲ್ ಮಾಡಿದ ಕಿಚ್ಚ..!
ಕೊರೊನಾ ಲಾಕ್ ಡೌನ್ ಮುಗಿದು ಬಿಗ್ ಬಾಸ್ ಸೀಸನ್ 8 ರ 2ಬನೇ ಇನ್ನಿಂಗ್ ಆರಂಭವಾದ ನಂತರದಿಂದ ರಘು ,ನಿಧಿ ಸುಬ್ಬಯ್ಯ , ಪ್ರಿಯಾಂಕಾ ತಿಮ್ಮೇಶ್ ಹೀಗೆ ಎಲಿಮಿನೇಟ್ ಆಗುತ್ತಾ ಹೋಗಿದ್ದು, ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗ್ತಿದೆ.. ಆದ್ರೆ ಕಾಂಪಿಟೇಶನ್ ಹೆಚ್ಚಾಗ್ತಿದೆ.. ಫಿನಾಲೆ ಸಮೀಪಿಸುತ್ತಿದೆ.. ಈ ನಡುವೆ ಕಾಂಪಿಟೇಶನ್ ಟಫ್ ಆಗ್ತಾ ಹೋಗ್ತಿದೆ.. ಗೆಲ್ಲಲೇ ಬೇಕೆನ್ನುವ ಹಟ ಎಲ್ರಲ್ಲೂ ಇದೆ.. ಇದರ ನಡುವೆ 2ನೇ ಇನ್ನಿಂಗ್ ಕಲವರಲ್ಲಿ ಕೆಲ ಬದಲಾವಣೆಗಳು ಕಂಡುಬಂದಿವೆ.
ಈ ನಡುವೆ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ಯಾವಾಗ ಎಂಬುದನ್ನ ರಿವೀಲ್ ಮಾಡಿದ್ದಾರೆ.. ಹೌದು ವೀಕೆಂಟ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ಬಗ್ಗೆ ಹೇಳಿದ್ದಾರೆ.ಇನ್ನು ಕೇವಲ 15 ದಿನಗಳಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಅಂತ ತಿಳಿಸಿದ್ದಾರೆ.. ಅಂದ್ರೆ ಶನಿವಾರದಿಂದ 15ನೇ ದಿನಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಆಗಸ್ಟ್ 8ರಂದು ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ.
ಇವತ್ತಿನಿಂದ 15ನೇ ದಿನಕ್ಕೆ ಫಿನಾಲೆ ನಡೆಯಲಿದೆ, 9 ಜನ ಕಂಟೆಸ್ಟೆಂಟ್ಸ್ ಇನ್ನೂ ಮನೆಯಲ್ಲಿ ಇದ್ದಾರೆ. ಅದರಲ್ಲಿ 5 ಜನ ನಾಮಿನೇಟ್ ಆಗಿದ್ದಾರೆ. ಇವತ್ತು ಉಳಿದುಕೊಂಡವರು ಫಿನಾಲೆ ವೇದಿಕೆಯ ಮೆಟ್ಟಿಲಿನವೆರೆಗೆ ಆಲ್ಮೋಸ್ಟ್ ಹೋದ ಹಾಗೆ ಎಂದು ಶನಿವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ತಿಳಿಸಿದ್ದಾರೆ.. ಇದೀಗ ಸ್ಪರ್ಧಿಗಳ ಟೆನ್ಷನ್ , ಕಾಂಪಿಟೇಶನ್ ಹೆಚ್ಚಾಗ್ತಿದ್ರೆ, ವಿನ್ನರ್ ಯಾರಾಗಬಹುದು , ಸೋಲುವವರು ಯಾರು , ಫೈನಲ್ಸ್ ಯಾರೆಲ್ಲಾ ಪ್ರವೇಶ ಮಾಡಬಹುದು ಎನ್ನುವ ಕುತೂಹಲ ಪ್ರೇಕ್ಷರನ್ನ ಕಾಡ್ತಿದೆ..








