ನನ್ನ ಪತಿ ಅಶ್ಲೀಲ ವಿಡಿಯೋಗಳನ್ನ ನಿರ್ಮಿಸುತ್ತಿರಲಿಲ್ಲ  – ಶಿಲ್ಪಾ ಶೆಟ್ಟಿ

1 min read

ನನ್ನ ಪತಿ ಅಶ್ಲೀಲ ವಿಡಿಯೋಗಳನ್ನ ನಿರ್ಮಿಸುತ್ತಿರಲಿಲ್ಲ  – ಶಿಲ್ಪಾ ಶೆಟ್ಟಿ

ಜುಲೈ 19 ಕ್ಕೆ ಅಶ್ಲೀಲ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ  ಪತಿ ರಾಜ್ ಕುಂದ್ರಾ ಬಂಧನವಾದಾಗಿನಿಂದ ಇಲ್ಲಿಯರೆಗೂ ಈ ವಿಚಾರವಾಗಿ ಮೌನವಹಿಸಿದ್ದ ಶಿಲ್ಪಾ ಶೆಟ್ಟಿ ನಿನ್ನೆಯಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು.. ಆದ್ರೆ ನೇರವಾಗಿ ಪತಿಯ ಬಗ್ಗೆ ಏನೂ ಮಾತನಾಡಿರಲಿಲ್ಲ. ಇಂದು ಅವರ ಅಭಿನಯದ ಹಂಗಾಮಾ 2 ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.. ಅಲ್ಲದೇ ಒಳ್ಳೆಯ ಚಿತ್ರ ನಿರ್ಮಾಣ ಮಾಡಲು ಕಷ್ಟಪಟ್ಟ ಚಿತ್ರತಂಡಕ್ಕೆ ಸಮಸ್ಯೆ ಆಗಬಾರದು, ಮನೆಯಲ್ಲಿ ಕೂತು ಸಿನಿಮಾ ನೋಡಿ ಎಂದು ಶಿಲ್ಪಾ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.. ಇದರ ಬೆನ್ನಲ್ಲೇ ಕುಂದ್ರಾಗೆ ಶಿಲ್ಪಾ ಶೆಟ್ಟಿ ಸಪೋರ್ಟ್ ಮಾಡಿರುವ ಸುದ್ದಿ ಹರಿದಾಡ್ತಿದೆ.

ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಶಿಲ್ಪಾ ಶೆಟ್ಟಿ ಅವರ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.  ಈ ವೇಳೆ ಪತಿಯ ಪರವಾಗಿ ಮಾತನಾಡಿರುವ ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ನಿರಪರಾಧಿ ಎಂದು ವಾದ ಮಾಡಿದ್ದಾರೆ ಎಂದು ವರದಿಯಾಗಿದೆ.   ಅಶ್ಲೀಲ ಸಿನಿಮಾ ಚಿತ್ರೀಕರಣದ ವಿಚಾರದಲ್ಲಿ ತನ್ನ ಸಹಭಾಗಿತ್ವ ಏನೂ ಇಲ್ಲ ರಾಜ್ ಕುಂದ್ರಾ ಅವರ ಹಾಟ್ ಶಾಟ್ಸ್ ಆ್ಯಪ್ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್ ಇರುತ್ತದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ನನ್ನ ಗಂಡ ಮಾಡಿದ್ದು ಕಾಮೋದ್ರೇಕದ ಸಿನಿಮಾಗಳು ಮಾತ್ರ. ಅವುಗಳು ಅಶ್ಲೀಲ ಸಿನಿಮಾಗಳಲ್ಲ. ಹಾಗಾಗಿ ನನ್ನ ಗಂಡ ನಿರಪರಾಧಿ ಎಂದು ಅವರು ವಾದಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಹಿಂದಿ ಬಿಗ್ ಬಾಸ್ ನಿರೂಪಕರು ಚೇಂಜ್ : ಸಲ್ಲು ಜಾಗಕ್ಕೆ ಕರಣ್ – ಕಾರಣ ಏನು..? ‘ಬ್ಯಾಡ್ ಬಾಯ್’ ಕಥೆಯೇನು..?

ಪೊಲೀಸರ ಬಳಿ ನಟಿ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಪರವಾಗಿ ಹೇಳಿಕೆ ನೀಡಿದ್ದಾರೆ ಎಂದು ಮುಂಬೈನ ಹಲವು ಮಾಧ್ಯಮಗಳು ವರದಿ ಮಾಡಿವೆ. ರಾಜ್ ಕುಂದ್ರಾ ನಿರ್ಮಿಸಿದ್ದು ಪೋರ್ನ್ ವಿಡಿಯೋ ಅಲ್ಲ ಬದಲಿಗೆ ಸಾಫ್ಟ್ ಪೋರ್ನ್ ಅಥವಾ ಎರೊಟಿಕಾ ಮಾದರಿಯ ವಿಡಿಯೋಗಳು. ಅವುಗಳ ನಿರ್ಮಾಣ ಹಾಗೂ ವೀಕ್ಷಣೆಗೆ ಅನುಮತಿ ಇವೆ ಎಂದಿದ್ದಾರೆ ಎನ್ನಲಾಗಿದೆ. ರಾಜ್ ಕುಂದ್ರಾ ಕೂಡ ಪೊಲೀಸರ ಎದುರು ಇದನ್ನೇ ವಾದಿಸುತ್ತಿದ್ದಾರೆ. ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಆ ಕಾರಣದಿಂದಲೇ ಜು.27ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ನಟಿಯರನ್ನು ಮತ್ತು ಮಾಡೆಲ್‍ ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ.  ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ರಾಜ್ ಕುಂದ್ರಾ ಅವರನ್ನು ಜುಲೈ 27ರ ವರೆಗೆ ಪೊಲೀಸರ ವಶಕ್ಕೆ ನೀಡಿದೆ. ರಾಜ್ ಕುಂದ್ರಾ ಈ ಅಶ್ಲೀಲ ವಿಡಿಯೋ ಉದ್ಯಮದಿಂದ ದಿನಕ್ಕೆ 6 ರಿಂದ 8 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ.

ಅಶ್ಲೀಲ ಚಿತ್ರದಲ್ಲಿ ಕಾಣಿಸಿಕೊಳ್ಳಲು ಶಿಲ್ಪಾ ಸಹೋದರಿ ಒಪ್ಪಿದ್ರಾ…?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd