ಅಶ್ಲೀಲ ಚಿತ್ರದಲ್ಲಿ ಕಾಣಿಸಿಕೊಳ್ಳಲು ಶಿಲ್ಪಾ ಸಹೋದರಿ ಒಪ್ಪಿದ್ರಾ…?
ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿರುವ ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಇನ್ನೂ ಜುಲೈ 27ರವರೆಗೂ ಪೊಲಿಸ್ ಕಸ್ಟಡಿಯಲ್ಲಿ ಇರಲಿದ್ದಾರೆ.. ವಿಚಾರಣೆ ವೇಳೆ ಸಾಕಷ್ಟು ಶಾಕಿಂಗ್ ಸಂಗತಿಗಳು ಬಹಿರಂಗವಾಗ್ತಿದೆ.. ಪೂನಂ ಪಾಂಡೆ , ಶರ್ಲಿನ್ , ಯೂಟ್ಯೂಬ್ ಸ್ಟಾರ್ ಪುನೀತ್ ಕೌರ್ ಸೇರಿ ಕೆಲವರು ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ್ದಾರೆ.. ಈ ನಡುವೆ ಮಾಡೆಲ್ ಗೆಹನಾ ವಸಿಸ್ತ್ ರಾಜ್ ಕುಂದ್ರಾಗೆ ಬೆಂಬಲಿಸಿದ್ದಾರೆ.. ಅಲ್ಲದೇ ರಾಜ್ ಕುಂದ್ರಾ ಲೈವ್ ಸ್ಟ್ರೀಮ್ ಗೂ ತಯಾರಿ ನಡೆಸಿದ್ದರು ಎನ್ನಲಾಗಿದೆ.. ಈ ನಡುವೆ ಮತ್ತೊಂದು ಶಾಂಕಿಗ್ ವಿಚಾರ ಗೊತ್ತಾಗಿದೆ..
ಏಷ್ಯಾದ ಮೋಸ್ಟ್ ಹ್ಯಾಂಡ್ಸಮ್ ಹೀರೊಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇಬ್ಬರು – ನಂಬರ್. 1 ಸ್ಥಾನದಲ್ಲಿ ಪ್ರಬಾಸ್..!
ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಡೆಲ್ ಗೆಹನಾ ವಸಿಸ್ತ್ ಅವರನ್ನು ಈ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಜಾಮೀನ ಮೇಲೆ ಹೊರಬಂದರೂ ಇದೀಗ ಮತ್ತೆ ಆಕೆಯ ಹೆಸರು ಸದ್ದು ಮಾಡುತ್ತಿದೆ. ರಾಜ್ ಕುಂದ್ರ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಗೆಹನಾ, ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯನ್ನು ನೀಲಿ ಚಿತ್ರದಲ್ಲಿ ಆಕ್ಟ್ ಮಾಡಿಸಲು ರಾಜ್ ಕುಂದ್ರ ಮುಂದಾಗಿದ್ರು ಎನ್ನುವ ಶಾಕಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದರ ಜೊತೆಗೆ ಈ ಬಗ್ಗೆ ಮಾತನಾಡಿರುವ ಗೆಹನಾ, ಬಂಧನಕ್ಕೊಳಗಾಗುವ ಕೆಲವು ದಿನಗಳ ಮೊದಲು ರಾಜ್ ಕುಂದ್ರ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಬಾಲಿಫೇಮ್ ಹೆಸರಿನ ಆಪ್ ಪ್ರಾರಂಭಿಸಲು ಯೋಜಿಸುತ್ತಿದ್ದರು. ರಿಯಾಲಿಟಿ ಶೋ, ಚಾಟ್ ಶೋ, ಮ್ಯೂಸಿಕ್ ವಿಡಿಯೋಗಳು ಮತ್ತು ಬೋಲ್ಡ್ ಅಲ್ಲದ ಸಿನಿಮಾಗಳನ್ನು ಪ್ರದರ್ಶಿಸುವ ಆಪ್ ಆದಾಗಿತ್ತು. ಕೆಲವು ಸ್ಕ್ರಿಪ್ಟ್ ಗಳನ್ನು ಚರ್ಚೆ ಮಾಡಿದ್ವಿ. ಅದರಲ್ಲಿ ಒಂದು ಚಿತ್ರದಲ್ಲಿ ಶಮಿತಾ ಶೆಟ್ಟಿ ಅವರು ನಟಿಸುವುದೆಂದು ಪ್ಲಾನ್ ಆಗಿತ್ತು. ಈ ಸಿನಿಮಾವನ್ನು ನಾನು ನಿರ್ದೇಶನ ಮಾಡಬೇಕಿತ್ತು. ಇದಕ್ಕೆ ಶಮಿತಾ ಸಹ ಒಪ್ಪಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.