ಕೊನೆಗೂ ರೈತರ ಬಗೆಗಿನ ವಿವಾದಾತ್ಮಕ ಹೇಳಿಕೆ ಹಿಂಪಡೆದ ಸಿಧು
ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು , ‘ದಾಹ ಇದ್ದವರು ಬಾವಿ ಹುಡುಕಿಕೊಂಡು ಹೋಗುತ್ತಾರೆ ಎಂದಿದ್ದರು.. ಅವರ ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಕೇಂದ್ರದ ಕೃಷಿ ಸುಧಾರಣಾ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಿರತವಾಗಿರುವ ರೈತರ ಸಂಘಟನೆಗಳ ಸಮಗ್ರ ಸಂಘವಾದ ಸಂಯುಕ್ತ ಕಿಸಾನ್ ಮೋರ್ಚಾ, ಸಿಧು ಈ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಧರಣಿ ಕೂರಲು ಮುಂದಾಗಿದೆ. ರೈತರ ಸಂಘಟನೆಗಳ ಮುಖ್ಯಸ್ಥರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದ ಸಿಧು, ‘ದಾಹವಿದ್ದವರು ಬಾವಿಯತ್ತ ಹೋಗುತ್ತಾರೆ. ಬಾವಿಯೇ ದಾಹವಿದ್ದವರ ಬಳಿಗೆ ಹೋಗುವುದಿಲ್ಲ’ ಎಂದಿದ್ದರು.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬಾರೀ ಇಳಿಕೆ , ಚೇತರಿಕೆ ಪ್ರಮಾಣ ಹೆಚ್ಚಳ..!
ಈ ಹೇಳಿಕೆ ಸಾಕಷ್ಟುಚರ್ಚೆಗೆ ಕಾರಣವಾಗಿತ್ತು.. ಟೀಕೆಗೆ ಗುರಿಯಾಗಿತ್ತು. ಹೀಗೆ ಹೇಳುವ ಮೂಲಕ ರೈತರೇ ತಮ್ಮ ಬಳಿ ಬರಲಿ ಎಂದು ಸಿಧು ನಿರೀಕ್ಷೆ ಮಾಡುತ್ತಿದ್ದಾರೆ. ಅವರು ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಮಂಜೀತ್ ಸಿಂಗ್ ರೈ ತಿಳಿಸಿದ್ದರು. ಆದ್ರೆ ಇದರ ಬೆನ್ನಲ್ಲೇ ಸಿಧು ತಮ್ಮ ಹೇಳಿಕೆಯನ್ನ ಹಿಂಪಡೆದು ಜಾಣ ನಡೆ ಪ್ರದರ್ಶಿಸಿದ್ದಾರೆ. ಅಲ್ಲದೇ ಕೇಂದ್ರ ಜಾರಿಗೆ ತಂದ ಮೂರು ಕಪ್ಪು ಕಾನೂನುಗಳನ್ನು ಹಿಂದಕ್ಕೆ ಪಡೆಯುವವರೆಗೂ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಕಾಂಗ್ರೆಸ್ ಬಿಗಿಯಾಗಿ ನಿಲ್ಲಲಿದೆ ಎಂದಿದ್ದಾರೆ.








